Viral News : ಮೊಬೈಲ್ ಇಲ್ಲದೆ ಕಾಲವೇ ಚಲಿಸದು ಎಂಬಂಥ ಪರಿಸ್ಥಿತಿಗೆ ಬಂದು ನಿಂತಿದೆ. ಹುಟ್ಟಿದ ಕೂಸಿನಿಂದ ಹಿಡಿದು ಮುಪ್ಪಾನು ಮುದುಕರವರೆಗೂ ಮೊಬೈಲ್ ಸಂಜೀವಿನಿ ಇದ್ದಂತೆ. ಶಾಲಾಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿದರೂ ಕದ್ದುಮುಚ್ಚಿಯಾದರೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅದರ ಮೊರೆ ಹೋಗುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಹೈಸ್ಕೂಲು ವಿದ್ಯಾರ್ಥಿನಿಯೊಬ್ಬಳು ತರಗತಿ ನಡೆಯುವಾಗ ಗೂಗಲ್ ಸಹಾಯದಿಂದ ಕ್ಲಾಸ್ವರ್ಕ್ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಶಿಕ್ಷಕರು ಮೊಬೈಲ್ ಇಸಿದುಕೊಂಡಿದ್ದಾರೆ. ಪ್ರತಿಯಾಗಿ ಆಕೆ ಅವರಿಗೆ ಏನು ಮಾಡಿದ್ದಾಳೆ? ವಿಡಿಯೋ ನೋಡಿ.
Girl pepper sprays teacher because he took her phone pic.twitter.com/QPAz6c3l4G
— OnlyBangers.eth (@OnlyBangersEth) May 6, 2023
ಈ ಘಟನೆಯು ಟೆನ್ನೆಸ್ಸಿಯ ನ್ಯಾಶ್ವೆಲೆಯಲ್ಲಿರುವ ಆಂಟಿಯೋಕ್ ಶಾಲೆಯಲ್ಲಿ ನಡೆದಿದೆ. ಶಿಕ್ಷಕರು ತನ್ನ ಮೊಬೈಲ್ ಇಸಿದುಕೊಂಡು ಹೊರಹೋಗುತ್ತಿದ್ದಂತೆ, ಅವರನ್ನು ಹಿಂಬಾಲಿಸಿದ ವಿದ್ಯಾರ್ಥಿನಿ ನನ್ನ ಮೊಬೈಲ್ ನನಗೆ ಬೇಕು ಎಂದು ಕೂಗಾಡಿದ್ದಾಳೆ. ನಂತರ ಶಿಕ್ಷಕರಿಗೆ ಎರಡು ಸಲ ಪೆಪ್ಪರ್ ಸ್ಪ್ರೇ ಮಾಡಿದ್ದಾಳೆ. ಉರಿ ಮತ್ತು ಆಘಾತದಿಂದ ಕುಸಿದ ಶಿಕ್ಷಕರು ನೆಲಕ್ಕೆ ಮಂಡಿಯೂರಿ ಕುಳಿತಿದ್ದಾರೆ.
ಇದನ್ನು ಓದಿ : ಅಬ್ಬಾ ಕೆಲಸ ಮುಗೀತಪ್ಪಾ! ಬಿಬಿಸಿ ಸುದ್ದಿವಾಚಕಿಯ ಲೈವ್ ನ್ಯೂಸ್ ತುಣುಕು ವೈರಲ್
ಇತರೇ ಕ್ಲಾಸಿನ ವಿದ್ಯಾರ್ಥಿಗಳು, ಶಿಕ್ಷಕರು ಈ ಅಚಾತುರ್ಯ ಘಟನೆಯನ್ನು ನೋಡಲು ತರಗತಿಯಿಂದ ಹೊರಬಂದಿದ್ದಾರೆ. ಮತ್ತೊಂದು ಕ್ಲಾಸಿನ ಶಿಕ್ಷಕರು ನಿನ್ನ ಮೊಬೈಲ್ ಅನ್ನು ಹಿಂದಿರುಗಿಸಲಾಗದು ಎಂದೂ ಹೇಳಿದ್ದಾರೆ. ಆದರೆ ರೆಡ್ಡಿಟ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾದ ವ್ಯಕ್ತಿ, ‘ಈ ಹಿಂದೆ ಕೂಡ ಬೇರೊಬ್ಬ ವಿದ್ಯಾರ್ಥಿಯು ಕ್ಲಾಸಿನಲ್ಲಿ ಮೊಬೈಲ್ ಬಳಸಿದಾಗ ಇದೇ ಶಿಕ್ಷಕರು ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದರು. ಆ ವಿದ್ಯಾರ್ಥಿ ಶಿಕ್ಷಕರ ಮುಖಕ್ಕೇ ಗುದ್ದಿದ್ದ. ಇಂಥ ಘಟನೆಗಳು ಆಗಾಗ ಈ ಶಾಲೆಯಲ್ಲಿ ನಡೆಯುತ್ತಲೇ ಇರುತ್ತವೆ’ ಎಂದಿದ್ದಾರೆ.
ಇದನ್ನೂ ಓದಿ : ಗುಂಗೀಯ ಹುಳ ಬಂದಿತ್ತೇನ ತಂಗಿ?; ಕಣ್ಣಲ್ಲೇ ಕೊಲ್ಲುವ ಪ್ರಾಂಜಲಿ ಶರ್ಮಾ ಬೆಳ್ಳಿತೆರೆಗೆ ಯಾವಾಗ?
ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಯಾಕೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಗೌರವಿಸುವುದಿಲ್ಲವೋ? ಈಕೆ ಶಿಕ್ಷಕರ ಮೇಲೆ ನೇರ ಹಲ್ಲೆ ನಡೆಸಿದ್ದಾಳೆ ಇದು ತಪ್ಪು. ಆಕೆಯನ್ನು ಈ ದೇಶದಿಂದಲೇ ಹೊರಹಾಕಬೇಕು. ಇದು ಸಾಂಸ್ಕೃತಿಕ ಆಘಾತ. ನಮ್ಮ ತಾಯ್ನಾಡಿನಲ್ಲಿ ಇಂಥ ವರ್ತನೆ ಸಲ್ಲದು ಎಂದು ಅನೇಕರು ತಮ್ಮ ಕೋಪ ವ್ಯಕ್ತಪಡಿಸಿದ್ಧಾರೆ.
ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್ಗೂ ಸೈ?
ಬಹಳ ನೋವಿನ ಸಂಗತಿ ಎಂದರೆ, ಇಲ್ಲಿರುವ ವಿದ್ಯಾರ್ಥಿಗಳು ಈ ಘಟನೆಯನ್ನು ನೋಡಿ ತಮಾಷೆಯಾಗಿ ನಕ್ಕಿದ್ದಾರೆ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಶಾಲೆಗಳಲ್ಲಿ ಶಸ್ತ್ರಧಾರಿ ಭದ್ರತಾ ಸಿಬ್ಬಂದಿ ಬೇಕಿಲ್ಲ ಎಂದು ಕೆಲವರು ವಾದಿಸುತ್ತಾರೆ. ಆದರೆ ಶಾಲಾ ಮಕ್ಕಳು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ. ಆಗಾಗ ಶೂಟೌಟ್ ಪ್ರಕರ್ಣಗಳು ದಾಖಲಾಗುತ್ತಿವೆ ಎಂದು ಇಬ್ಬೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸ್ಪೈಸ್ಜೆಟ್ನ ಬ್ಯಾಂಕಾಕ್ ವಿಮಾನದಲ್ಲಿ ಪೈಲಟ್ನ ತಮಾಷೆ ವಿಡಿಯೋ ವೈರಲ್
ಅಂದಹಾಗೆ ಪೆಪ್ಪರ್ ಸ್ಪ್ರೇಯಂಥ ಸಾಧನಗಳನ್ನು ತುರ್ತು ಸಮಯದಲ್ಲಿ ಸ್ವರಕ್ಷಣೆಗಾಗಿ ಬಳಸಲಾಗುತ್ತದೆ ಎನ್ನುವುದು ಎಲ್ಲರ ಗಮನದಲ್ಲಿದ್ದರೆ ಸಾಕು. ಅಸಭ್ಯ ವರ್ತನೆ, ಅತ್ಯಾಚಾರ, ಅನವಶ್ಯಕ ಹಲ್ಲೆ, ಕಳ್ಳತನದ ಸಂದರ್ಭದಲ್ಲಿ ಈ ಸಾಧನವನ್ನು ಬಳಸಲು ಅಡ್ಡಿಯಿಲ್ಲ.
ಇದನ್ನು ಓದಿದ ನೀವು ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:47 am, Tue, 9 May 23