Viral Video : ಕಳೆದ ವಾರ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮಗಳು ವಾಮಿಕಾ ಜೊತೆ ಮಥುರಾದ ವೃಂದಾವನದಲ್ಲಿರುವ ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಬಾಬಾ ಅವರ ಕಟ್ಟಾ ಅನುಯಾಯಿಯಾಗಿರುವ ವಿರಾಟ್, ಅನುಷ್ಕಾ ಸುಮಾರು ಒಂದು ಗಂಟೆಯ ಕಾಲ ಬಾಬಾ ಅವರ ‘ಕುಟಿಯಾ’ದಲ್ಲಿ (ಗುಡಿಸಲಿನಲ್ಲಿ) ಧ್ಯಾನ ಮಾಡಿ ಬಾಬಾ ನೀಮ್ ಕರೋಲಿಯವರ ಸಮಾಧಿಯ ದರ್ಶನ ಪಡೆದಿದ್ದಾರೆ. ಇದೀಗ ಇದು ನೆಟ್ಮಂದಿಯಲ್ಲಿ ಸಾಕಷ್ಟು ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.
Virat Kohli, Anushka Sharma with their daughter Vamika in Shri Baba Neem Karoli ashram in Vrindavan.#ViratKohli | #INDvSL | #INDvsSLpic.twitter.com/HQV7Gc8OIL
ಇದನ್ನೂ ಓದಿ— Virat Kohli Fan Club (@Trend_VKohli) January 5, 2023
ಬಾಬಾ ನೀಮ್ ಕರೋಲಿ ಅವರು ಹುಟ್ಟುಹಾಕಿರುವ ಆಶ್ರಮಗಳು ಈಗಲೂ ಇವೆ. ಈ ಆಶ್ರಮಕ್ಕೆ ನಡೆದುಕೊಳ್ಳುವ ಅನೇಕ ಭಕ್ತವೃಂದವಿದೆ. ವೃಂದಾವನ, ಶಿಮ್ಲಾ, ದೆಹಲಿಯಲ್ಲಷ್ಟೇ ಅಲ್ಲ ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿಯೂ ಇವರ ಆಶ್ರಮಗಳಿವೆ. ಇವರಿಗೆ ಅನೇಕ ಸೆಲೆಬ್ರಿಟಿಗಳನ್ನು ಒಳಗೊಂಡಂತೆ ಜಗತ್ತಿನಾದ್ಯಂತ ಅನುಯಾಯಿಗಳ ದಂಡೇ ಇದೆ.
ಇದನ್ನೂ ಓದಿ : ‘ಬೀಡಿ ಜಲೈಲೆ ಜಿಗರ್ ಸೆ ಪಿಯಾ’ ಹಾಡಿಗೆ ನರ್ತಿಸಿದ ಪಾಕಿಸ್ತಾನಿ ದಂಪತಿಯ ವಿಡಿಯೋ ವೈರಲ್
ಸಾಕಷ್ಟು ಸೆಲೆಬ್ರಿಟಿಗಳಿಗೆ ಸ್ಫೂರ್ತಿಯಾಗಿದ್ದ ಬಾಬಾ ನೀಮ್ ಕರೋಲಿ ಅವರನ್ನು ಅವರ ಅನುಯಾಯಿಗಳು ಮಾಹಾರಾಜ್ಜೀ ಎಂದು ಕರೆಯುತ್ತಿದ್ದರು. ಅನುಯಾಯಿಗಳ ಪಟ್ಟಿಯಲ್ಲಿ ಅತಿರಥರ ಹೆಸರುಗಳೇ ಸೇರಿಕೊಂಡಿವೆ. ಹೆಸರಿಸುವುದಾರೆ, ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್ಬರ್ಗ್ ಮತ್ತು ಜೂಲಿಯಾ ರಾಬರ್ಟ್ಸ್ ಮತ್ತೀಗ ಅನುಷ್ಕಾ ಮತ್ತು ವಿರಾಟ್ ಮುಂತಾದವರು.
ಇದನ್ನೂ ಓದಿ : ವಿಮಾನದಲ್ಲಿ ಸಹಪ್ರಯಾಣಿಕನೊಂದಿಗೆ ಶರ್ಟ್ ಬಿಚ್ಚಿ ಹೊಡೆದಾಟಕ್ಕಿಳಿದ ಯುವಕನ ವಿಡಿಯೋ ವೈರಲ್
ಇವರ ಮೂಲ ಹೆಸರು ಲಕ್ಷ್ಮಣ ನಾರಾಯಣ ಶರ್ಮಾ. 14ನೇ ವಯಸ್ಸಿನಲ್ಲಿಯೇ ಇವರು ಮದುವೆಯಾದರು. ಆನಂತರ ಸಾಧುವಾಗಬೇಕೆಂದು ಬಯಸಿ ಕುಟುಂಬದಿಂದ ಹೊರಬಂದರು. ಆದರೆ ಇವರ ತಂದೆ ಇವರನ್ನು ಮತ್ತೆ ವಾಪಾಸು ಕೌಟುಂಬಿಕ ಚೌಕಟ್ಟಿಗೆ ಕರೆತಂದರು. ಆನಂತರ ಹೆಂಡತಿಯೊಂದಿಗೆ ವೈವಾಹಿಕ ಜೀವನವನ್ನು ನಡೆಸಿದರು. ಫಲವಾಗಿ ಇಬ್ಬರು ಗಂಡುಮಕ್ಕಳು ಮತ್ತು ಒಂದು ಹೆಣ್ಣುಮಗುವಿನ ತಂದೆಯಾದರು.
ಇದನ್ನೂ ಓದಿ : ಜಿಮ್ಪ್ರಿಯೆ! ಮದುವೆಯಲ್ಲಿ ಪುಲ್ಅಪ್ಸ್ ತೆಗೆದ ವಧುವಿನ ವಿಡಿಯೋ ವೈರಲ್
ಆದರೆ ಸಂತಮಾರ್ಗ ಅವರನ್ನು ಮತ್ತೆ ಕಾಡತೊಡಗಿತು. 1958 ರಲ್ಲಿ ಮನೆ ಬಿಟ್ಟು ರೈಲು ಏರಿದರು. ಆದರೆ ಅವರ ಪ್ರಯಾಣ ಟಿಕೆಟ್ರಹಿತವಾಗಿತ್ತು. ಟಿಕೆಟ್ ಕಲೆಕ್ಟರ್ ನೀಮ್ ಕರೋಲಿ ಎಂಬ ಹಳ್ಳಿಯ ಬಳಿ ಅವರನ್ನು ಒತ್ತಾಯದಿಂದ ಕೆಳಗಿಳಿಸಿದರು. ಅಲ್ಲಿಂದ ಅವರ ಸಂತಮಾರ್ಗ ಶುರುವಾಯಿತು. ಭಕ್ತಿಯೋಗದಲ್ಲಿ ಪರಿಣತರಾದರು. ಅಲ್ಲಿಯೇ ಆಶ್ರಮ ಕಟ್ಟಿಕೊಂಡರು. ಹನುಮಾನ್ ದೇವಸ್ಥಾನವನ್ನು ಕಟ್ಟಿದರು. ಅಲ್ಲಿಂದ ಅವರು ಬಾಬಾ ನೀಮ್ ಕರೋಲಿ ಆದರು.
ಇದನ್ನೂ ಓದಿ : ಸೈಕಲ್ ಸವಾರಿಯೊಂದಿಗೆ ಅಲ್ಕಾ ಯಾಜ್ಞಿಕ್, ಕುಮಾರ ಸಾನು ಹಾಡಿಗೆ ಅಭಿನಯಿಸಿದ ಯುವತಿಯ ವಿಡಿಯೋ ವೈರಲ್
1960 ಮತ್ತು 70 ರ ದಶಕಗಳಲ್ಲಿ ಭಾರತಕ್ಕೆ ಭೇಟಿ ನೀಡಿದ ಅನೇಕ ಅಮೆರಿಕನ್ರಿಗೆ ಇವರು ಅಧ್ಯಾತ್ಮಿಕ ಗುರುಗಳಾದರು. ಕ್ರಮೇಣ ಇವರ ಭಕ್ತವೃಂದ ವೃದ್ಧಿಸಿತು. ಇವರ ವಯಸ್ಸು, ಆರೋಗ್ಯವೂ ಕ್ಷೀಣಿಸುತ್ತ ಬಂದಿತು. ಮಧುಮೇಹ ಇವರನ್ನು ಕಾಡತೊಡಗಿತು. ವೃಂದಾವನದ ಆಸ್ಪತ್ರೆಯಲ್ಲಿ ದಾಖಲಾದ ಇವರು ಕೋಮಾಕ್ಕೆ ಜಾರಿದರು. 1971ರ 11 ರಂದು ನಿಧನರಾದರು.
ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್
2015 ರಲ್ಲಿ ಜುಕರ್‌ಬರ್ಗ್ ಕೈಂಚಿಯಲ್ಲಿರುವ ಇವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಆಗ ಫೇಸ್ಬುಕ್ ಅತ್ಯಂತ ಸಂದಿಗ್ಧ ಸಮಯದಲ್ಲಿತ್ತು. ಇದಲ್ಲದೆ, ಜೂಲಿಯಾ ರಾಬರ್ಟ್ಸ್ ಕೂಡ ನೀಮ್ ಕರೋಲಿ ಬಾಬಾ ಅವರಿಂದ ಪ್ರಭಾವಿತಳಾಗಿದ್ದಾಳೆ ಮತ್ತು ಈ ಕಾರಣದಿಂದಲೇ ಆಕೆ ಹಿಂದೂ ಧರ್ಮದೆಡೆ ಆಕರ್ಷಿತಳಾಗಿದ್ದಾಳೆ ಎಂಬ ವದಂತಿ ಇದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:56 pm, Fri, 13 January 23