
ದಾಂಪತ್ಯ ಎಂದರೆ ಕಷ್ಟ ಸುಖದಲ್ಲಿ ಭಾಗಿಯಾಗಿ ಜತೆಗೆ ನಡೆಯುವುದು. ಹೆಣ್ಣು ತನ್ನ ಗಂಡನಿಂದ ಪ್ರೀತಿ ಕಾಳಜಿ ಬಯಸಿದರೆ, ದುಡಿಯುವ ಗಂಡಸುವ ಬಯಸೋದು ಪತ್ನಿ ಪ್ರೀತಿಯಿಂದ ಮಾಡುವ ಅಡುಗೆ, ನಗು ತುಂಬಿದ ಮುಖ ಹಾಗೂ ನೆಮ್ಮದಿ ಮಾತ್ರ. ಇದೀಗ ರಾತ್ರಿ ಪಾಳಿಯಲ್ಲಿಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಪತಿಗೆ (husband) ಪತ್ನಿ ಪ್ರೀತಿಯಿಂದ ಅಡುಗೆ ಮಾಡಿ ತಂದಿದ್ದು, ಇಬ್ಬರೂ ಜತೆಗೆ ಕುಳಿತು ಊಟ ಮಾಡುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.
ಜ್ಞಾನಾದ್ ಭಟ್ (Gnyanad Bhatt) ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ಗೆ ನಿಮ್ಮ ಸಂತೋಷದ ದಿನಗಳಲ್ಲಿ ಎಲ್ಲರೂ ಜೊತೆಯಾಗಿರಬಹುದು; ಆದರೆ ಕಷ್ಟದ ಸಮಯದಲ್ಲಿ ಸದಾ ನಿಮ್ಮೊಂದಿಗಿರುವುದೇ ನಿಜವಾದ ಪ್ರೀತಿ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಯೊಬ್ಬರಿಗೆ ಪತಿಯು ಊಟ ತಂದು ಕೊಟ್ಟಿರುವ ದೃಶ್ಯವನ್ನು ಕಾಣಬಹುದು. ಪತಿ ಪತ್ನಿಯರಿಬ್ಬರೂ ಕುಳಿತು ಊಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಗನ ಜತೆಗೆ ಮಾಜಿ ಪತ್ನಿಯ ಮದುವೆಗೆ ಶುಭ ಹಾರೈಸಲು ಬಂದ ವ್ಯಕ್ತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಪ್ರೀತಿ ಕಾಣಸಿಗುವುದು ಅಪರೂಪ ಎಂದಿದ್ದಾರೆ. ಇನ್ನೊಬ್ಬರು, ಹೀಗೆ ನೂರು ಕಾಲ ಸುಖವಾಗಿ ಬಾಳಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಒಬ್ಬರಿಗೊಬ್ಬರು ಸಮಯ ಕೊಟ್ಟರೆ ಬದುಕು ಸುಂದರ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ