AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : 13 ಅಡಿ ಉದ್ದದ ದೈತ್ಯ ಮೊಸಳೆಯೊಂದಿಗೆ ಸೆಣಸಾಡಿ ಗಂಡನ ಪ್ರಾಣ ರಕ್ಷಿಸಿದ ಗಟ್ಟಿಗಿತ್ತಿ 

ಪತ್ನಿಯಾದವಳು ತನ್ನ ಗಂಡನ ಪ್ರಾಣ ಉಳಿಸಲು ಎಂತಹ ತ್ಯಾಗಕ್ಕೂ ಸಿದ್ಧಳಿರುತ್ತಾಳೆ. ಈ ರೀತಿಯ ಘಟನೆಗಳಿಗೆ ಸಂಬಂಧಿಸಿದ ಸುದ್ದಿಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇದೀಗ ಅಂತಹದೊಂದು ಸುದ್ದಿ ಹರಿದಾಡುತ್ತಿದ್ದು, ಮಹಿಳೆಯೊಬ್ಬರು  13 ಅಡಿ  ಉದ್ದದ ದೈತ್ಯ ಮೊಸಳೆಯೊಂದಿಗೆ ಹೋರಾಡಿ ತಮ್ಮ ಪತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. 

Viral : 13 ಅಡಿ ಉದ್ದದ ದೈತ್ಯ ಮೊಸಳೆಯೊಂದಿಗೆ ಸೆಣಸಾಡಿ ಗಂಡನ ಪ್ರಾಣ ರಕ್ಷಿಸಿದ ಗಟ್ಟಿಗಿತ್ತಿ 
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 19, 2024 | 5:38 PM

Share

ಗಂಡ-ಹೆಂಡತಿ ಸಂಬಂಧವೇ  ಶ್ರೇಷ್ಠವಾದದ್ದು. ನೋವು ನವಿವು ಹೀಗೆ ಪ್ರತಿಯೊಂದು ಹೆಜ್ಜೆಯಲ್ಲೂ ಪತಿ ಪತ್ನಿ ಜೊತೆಯಾಗಿ ಸಾಗುತ್ತಾರೆ.  ದಾಂಪತ್ಯದ ಪ್ರೀತಿಗೆ ವಯಸ್ಸು, ಅಂದ ಇದ್ಯಾವುದೂ ಅಡ್ಡಿ ಬರುವುದೇ ಇಲ್ಲ. ಜೀವನದ ಕೊನೆಯ ಹಂತದವರೆಗೂ ಪರಸ್ಪರ ಒಬ್ಬರಿಗೊಬ್ಬರು ಆಸರೆಯಾಗಿ ಜೀವನ ಸಾಗಿಸುತ್ತಾರೆ.  ಪತಿಯಾದವನು ಪತ್ನಿಗೆ ಯಾವುದರಲ್ಲೂ ಕೊರತೆ ಬಾರದಂತೆ ನೋಡಿಕೊಂಡರೆ, ಪತ್ನಿಯಾದವಳು ತನ್ನ ಪತಿಯ ಪ್ರತಿಯೊಂದು ಕಷ್ಟದಲ್ಲೂ ಜೊತೆಯಾಗಿ ನಿಲ್ಲುತ್ತಾಳೆ.   ಇವತ್ತು  ಮದುವೆಯಾಗಿ ನಾಳೆ ಡಿವೋರ್ಸ್ ತೆಗೆದುಕೊಳ್ಳುವ ಈ ಕಾಲದಲ್ಲೂ ಪ್ರೀತಿ ತುಂಬಿದ ಹಲವಾರು ವೈವಾಹಿಕ  ಸಂಬಂಧಗಳು ಇನ್ನೂ ಜೀವಂತವಾಗಿದೆ. ಹೀಗೆ ಪತಿಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟ ಪತ್ನಿಯಂದಿರು, ಪತ್ನಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಪತಿಯಂದಿರ ಕುರಿತ ಸುದ್ದಿಗಳ ಬಗ್ಗೆ ನೀವು ಕೇಳಿರುತ್ತೀರಿ ಅಲ್ವಾ. ಇದೀಗ ಅಂತಹದ್ದೇ ಸುದ್ದಿಯೊಂದು ವೈರಲ್ ಆಗಿದ್ದು, ಮಹಿಳೆಯೊಬ್ಬರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೈತ್ಯ  ಮೊಸಳೆಯೊಂದಿಗೆ ಹೋರಾಡಿ ತಮ್ಮ ಪತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.

ಈ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದು, ಇಲ್ಲಿನ ನಿವಾಸಿಯಾಗಿರುವಂತಹ ಆಂಥೋನಿ ಜೌಬರ್ಟ್ ಎಂಬವರು ತನ್ನ ಕುಟುಂಬ ಹಾಗೂ ಬಾಸ್ ನೊಂದಿಗೆ ಹತ್ತಿರದ ಅಣೆಕಟ್ಟಿಗೆ ಮೀನುಗಾರಿಕೆಗೆಂದು ತೆರಳಿದ್ದರು. ಹೀಗೆ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಆಂಟನಿಯವರ ಹಿರಿಯ ಮಗನಾದ ಜೆಪಿ ಯ ಫಿಶಿಂಗ್  ಕೊಕ್ಕೆಯು  ಸಿಕ್ಕಿಹಾಕಿಕೊಳ್ಳುತ್ತೆ. ಅದನ್ನು ಬಿಡಿಸಲೆಂದು ನೀರಿಗೆ ಧುಮುಕಿದ ಆಂಥೋನಿ  ಅವರ ಮೇಲೆ  ಅಲ್ಲೇ ನೀರಿನಲ್ಲಿ ನಿಶ್ಯಬ್ಧವಾಗಿ ಹೊಂಚು ಹಾಕಿ ಕುಳಿತಿದ್ದ ದೈತ್ಯ ಮೊಸಳೆಯೊಂದು ದಾಳಿ ಮಾಡಿ ಬೇಟೆಯಾಡಲು ಮುಂದಾಗುತ್ತದೆ.  ತನ್ನನ್ನು ಕೊಂದೆ ಬಿಡುತ್ತೇ ಎಂದು ಭಯದಿಂದ ಆಂಥೋನಿಯವರು ಕಿರಿಚುತ್ತಾ ಮೊಸಳೆಯ ಕಣ್ಣಿನ ಮೇಲೆ ಹೊಡೆಯಲು ಪ್ರಾರಂಭಿಸುತ್ತಾರೆ. ಹಾಗಿದ್ದರೂ ಆ ಮೊಸಳೆ ಅವರನ್ನು ಬಿಡಲೇ ಇಲ್ಲ. ಆ ತಕ್ಷಣ  ಬಾಸ್ ಜೋಹಾನ್ ನೀರಿಗೆ ಹಾರಿ ಆಂಥೋನಿಯವರನ್ನು ಮೊಸಳೆಯ ಬಾಯಿಯಿಂದ ಬಿಡಿಸಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಾರೆ.

ನಂತರ ನನ್ನ ಪತಿಯ ಪ್ರಾಣವನ್ನು ನಾನು ಹೇಗಾದರೂ ಕಾಪಾಡಲೇಬೇಕು ಎಂದು ಗಟ್ಟಿ ನಿರ್ಧಾರ ಮಾಡಿ ಆಂಥೋನಿ ಅವರ ಪತ್ನಿ ಅನಾಲೈಜ್ ಅಣೆಕಟ್ಟಿನ ಬಳಿ ಬಿದ್ದಿದ್ದಂತಹ ಒಂದು ದೊಣ್ಣೆಯನ್ನು ತೆಗೆದುಕೊಂಡು ಬಂದು ನನ್ನ ಗಂಡನನ್ನು ನಿನ್ನ ಮುಷ್ಠಿಯಿಂದ ಬಿಡಿಸಬೇಕೆಂದು ನನಗೆ ಗೊತ್ತು ಎನ್ನುತ್ತಾ ಕೋಪದಿಂದ ಮೊಸಳೆಯ ತಲೆ ಭಾಗಕ್ಕೆ ಜೋರಾಗಿ ದೊಣ್ಣೆಯಿಂದ ಬಾರಿಸುತ್ತಾರೆ. ಹೀಗೆ 4 ರಿಂದ 5 ಬಾರಿ ದೊಣ್ಣೆಯಿಂದ ಹೊಡದ ನಂತರ ಮೊಳೆಯು ನೋವು ತಡೆದುಕೊಳ್ಳಲಾರದೆ ಬಾಯಿ ತೆರೆಯುತ್ತದೆ, ಆ ತಕ್ಷಣ ಬಾಸ್ ಜೋಹಾನ್ ಮತ್ತು ಅನಾಲೈಜ್ ಅವರು ಆಂಥೋನಿಯನ್ನು ಸಾವಿನ ದವಡೆಯಿಂದ ರಕ್ಷಿಸಿ ದಡ ಸೇರಿಸುತ್ತಾರೆ.  ಮೊಸಳೆಯ ದಾಳಿಯಿಂದಾಗಿ ಆಂಥೋನಿ ದೇಹದಲ್ಲಿ ಹಲವಾರು ಗಾಯಗಳಾಗಿದ್ದವು, ಆ ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು.

ಇದನ್ನೂ ಓದಿ: ಈಜುಕೊಳದಲ್ಲಿ ಮುಳುಗುತ್ತಿದ್ದ ಪುಟ್ಟ ತಂಗಿಯನ್ನು ರಕ್ಷಿಸಿದ ಅಣ್ಣ

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಂಥೋನಿ “ಆ ಘಟನೆಯನ್ನು ನೆನೆಸಿಕೊಂಡರೆ ಈಗಲೂ ಎದೆಯಲ್ಲಿ ನಡುಕ ಉಂಟಾಗುತ್ತದೆ. ಆ ಸಂದರ್ಭದಲ್ಲಿ ಇದುವೇ ನನ್ನ ಭೂಮಿಯ ಮೇಲಿನ ಕೊನೆಯ ಕ್ಷಣ ಎಂದು ಭಾಸವಾಗಿತ್ತು. ಆದರೆ ನನ್ನ ಬಾಸ್ ಜೋಹಾನ್ ಮತ್ತು ನನ್ನ ಪತ್ನಿ ಅನಾಲೈಜ್  ಸಾಹಸ ಮತ್ತು ಸಮಯ ಪ್ರಜ್ಞೆಯಿಂದ ನನ್ನನ್ನು ರಕ್ಷಿಸಿದ್ದಾರೆ. ನನ್ನ ಪತ್ನಿಯ ಧೈರ್ಯ ಮತ್ತು ಸಾಮರ್ಥ್ಯವನ್ನು ಕಂಡು ನನಗೆ ಹೆಮ್ಮೆಯಾಗುತ್ತಿದೆ” ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ