Mumbai : ಭೂತ, ವಾಸ್ತವ, ಭವಿಷ್ಯವನ್ನೇ ಅಡಗಿಸಿಕೊಂಡಿರುವ ಮೊಬೈಲ್ ಪರಮಾತ್ಮ ಎಲ್ಲ ಸಂಬಂಧಗಳನ್ನೂ ಮೀರಿರುವ ಆತ್ಮಬಂಧು. ಅರೆಗಳಿಗೆ ಅದು ನಮ್ಮ ಕಣ್ಣಿನಿಂದ ತಪ್ಪಿಸಿಕೊಂಡರೆ ಪರಿಸ್ಥಿತಿಯ ಬಗ್ಗೆ ವಿವರಿಸುವುದೇ ಬೇಡ. ಏಕೆಂದರೆ ಮೊಬೈಲ್ ಬಳಸುತ್ತಿರುವ ಪ್ರತಿಯೊಬ್ಬರೂ ಈ ಸಂಕಟದ ಕ್ಷಣಗಳಿಗೆ ಸಾಕ್ಷಿಯಾಗಿರುತ್ತಾರೆ. ಇದೀಗ ಹೇಳಹೊರಟಿರುವುದೂ ಕಳೆದು ಹೋಗಿದ್ದ ಮೊಬೈಲೊಂದರ ಕಥೆಯನ್ನೇ. ಮಹಿಳೆಯೊಬ್ಬರು ಮುಂಬೈನಲ್ಲಿ ತನ್ನ ಐಫೋನ್ (iPhone) ಕಳೆದುಕೊಂಡಿದ್ದಾರೆ. ಮುಂದೇನಾಯಿತು ಅಂತ ಗೊತ್ತಾಯಿತು ಬಿಡಿ, ಅದು ಮೊದಲೇ ಮಾಯಾನಗರಿ ಎಂದುಕೊಳ್ಳುತ್ತಿದ್ದೀರೇ? ಖಂಡಿತ ನಿಮ್ಮ ಊಹೆ ತಪ್ಪು. ಮುಂಬೈನ ಅಪರಿಚಿತರು ಆಕೆಯ ಫೋನ್ ಹುಡುಕಲು ಹೇಗೆ ಸಹಾಯ ಮಾಡಿದರೆಂಬುದನ್ನು ಆಕೆ ತನ್ನ ಟ್ವೀಟ್ ಥ್ರೆಡ್ನಲ್ಲಿ ಬರೆದುಕೊಂಡಿದ್ದಾರೆ.
Thread.
ಇದನ್ನೂ ಓದಿI lost my phone this morning.
iPhone 12 mini, which I’ve had for about 2 years.I was going up the escalator at the Versova Metro station, when I reached into my bag and had my ‘waitaminute where the fuck is my phone???!’ moment.
Heart sank.— Historywali (@historywali) July 2, 2023
ಮುಂಬೈನ ವರ್ಸೋವಾ ಮೆಟ್ರೋ ನಿಲ್ದಾಣ ಸಮೀಪಿಸುತ್ತಿದ್ದಂತೆ (Versova Metro Station, Mumbai) ತಾನು ಐಫೋನ್ ಕಳೆದುಕೊಂಡಿದ್ದೇನೆ ಎನ್ನುವುದು ಆಕೆಯ ಅರಿವಿಗೆ ಬರುತ್ತಿದ್ದಂತೆ ತಾನು ಪ್ರಯಾಣಿಸಿದ ಶೇರಿಂಗ್ ಆಟೋ ಹುಡುಕಲು ರಿಕ್ಷಾ ಸ್ಟ್ಯಾಂಡಿನತ್ತ ಧಾವಿಸಿದರು. ಅದೃಷ್ಟಕ್ಕೆ ಆಟೋ ಚಾಲಕ ನಿಖಿಲ್ ಆಕೆಯನ್ನು ಗುರುತು ಹಿಡಿದು ಪ್ರತಿಕ್ರಿಯಿಸಿದ. ಇಬ್ಬರೂ ಸೇರಿ ಐಫೋನ್ ಹುಡುಕಲು ಶುರುಮಾಡಿದರು. ಆರಂಭದಲ್ಲಿ ಎಷ್ಟು ಸಲ ಕರೆ ಮಾಡಿದರೂ ಕರೆ ಹೋಗುತ್ತಿರಲಿಲ್ಲ. ನಂತರ ಆಕೆಯ ಬ್ಯಾಗ್ ಹಿಡಿದು ಮೆಟ್ರೋ ನಿಲ್ದಾಣ, ಮೆಟ್ರೋ ಮೆಟ್ಟಿಲುಗಳ ಮೇಲೆಲ್ಲ ಹುಡುಕಿದ್ದಾಯಿತು. ಎಲ್ಲೂ ಫೋನ್ ಸಿಗಲಿಲ್ಲ. ಆದರೆ ಸ್ವಲ್ಪ ಹೊತ್ತಿನ ನಂತರ ಕರೆ ಮಾಡಿದಾಗ ರಿಂಗ್ ಆಯಿತಾದರೂ ಆ ಕಡೆಯಿಂದ ಯಾರೂ ಉತ್ತರಿಸಲಿಲ್ಲ. ಅಷ್ಟೊತ್ತಿಗಾಗಲೆ ಆಕೆಗೆ ತನ್ನ ಐಫೋನ್ ಇನ್ನು ಕೈಬಿಟ್ಟ ಹಾಗೆ ಎಂಬ ಭಾವ ದಟ್ಟವಾಗತೊಡಗಿತು.
ಇದನ್ನೂ ಓದಿ : Viral Video: ”ಕೇದಾರನಾಥನೇ, ನಮ್ಮ ಪ್ರೀತಿಗೆ ನೀನೇ ಸಾಕ್ಷಿ”; ದಾಳಿಯಿಟ್ಟ ಸಂಸ್ಕೃತಿ ರಕ್ಷಕರು
FIR ದಾಖಲಿಸುವುದೊಂದೇ ದಾರಿ ಎಂದು ಆಟೋ ಏರಿ ಮನೆಯತ್ತ ಹೊರಟಳು. ಸ್ವಲ್ಪ ಸಮಯದ ನಂತರ ಯಾರೋ ಒಬ್ಬರು ಫೋನ್ ಫೋನ್ ಎಂದು ಕೂಗುತ್ತ ಆಟೋವನ್ನು ಹಿಂಬಾಲಿಸುತ್ತಿರುವುದು ಅರಿವಿಗೆ ಬಂದಿತು. ಆತ ರಾಹುಲ್ ಕುಮಾರ್ ಎಂಬ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿದ್ದ. ನಂತರ ಆಝಾದ್ ನಗರ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗೋಣವೆಂಬ ನಿರ್ಧಾರಕ್ಕೆ ಅವರು ಬಂದರು. ಮಳೆಯಲ್ಲಿಯೇ ರೇನ್ ಕೋಟ್ ಧರಿಸಿ ಸೈಕಲ್ ತುಳಿದುಕೊಂಡು ಹೇಳಿದ ಜಾಗಕ್ಕೆ ತಲುಪಿದ ರಾಹುಲ್. ಮೆಟ್ರೋ ಸ್ಟೇಷನ್ನಲ್ಲಿ ನಿಮ್ಮ ಮೊಬೈಲ್ ಸಿಕ್ಕಿತು ಎಂದು ಹೇಳಿ ಅದನ್ನು ಆಕೆಗೆ ಒಪ್ಪಿಸಿದ.
ಇದನ್ನೂ ಓದಿ : Viral:ನಿಮ್ಮ ಪ್ರೇಮಿಯ ಜೊತೆ ಹೀಗಿರಲು ನಿಮಗಿರುವ ಅಡ್ಡಿಯೇನು?
ಜು. 2 ರಂದು ಈ ಟ್ವೀಟ್ ಹಂಚಿಕೊಳ್ಳಲಾಗಿದೆ. ಎಲ್ಲರೂ ಆಟೋಚಾಲಕ ಮತ್ತು ರಾಹುಲ್ನನ್ನು ಶ್ಲಾಘಿಸುತ್ತಿದ್ಧಾರೆ. ಜಗತ್ತಿನಲ್ಲಿ ಇನ್ನೂ ನಂಬಿಕೆ ಉಳಿದುಕೊಂಡಿದೆ ಎಂದರೆ ಅದು ಇಂಥ ಶ್ರಮಜೀವಿಗಳಿಂದ ಎಂದು ನೆಟ್ಟಿಗರು ಮನಸಾರೆ ಅವರಿಬ್ಬರನ್ನೂ ಅಭಿನಂದಿಸುತ್ತಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:34 pm, Tue, 4 July 23