Video: ಸೇತುವೆ ಬಳಿ ರೀಲ್ಸ್ ಮಾಡೋದ್ರಲ್ಲಿ ಮಹಿಳೆ ಬ್ಯುಸಿ, ಮುಂದೇನಾಯ್ತು ನೋಡಿ

ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್‌ ಹುಚ್ಚು ಯುವಕ ಯುವತಿಯರು ಪ್ರಾಣಕ್ಕೆ ಕುತ್ತು ತರುತ್ತಿವೆ. ಇದೀಗ ಇಂತಹದ್ದೇ ದೃಶ್ಯವೊಂದು ವೈರಲ್ ಆಗಿದ್ದು, ಮಹಿಳೆಯೊಬ್ಬಳು ಸೇತುವೆಯ ಬಳಿ ರೀಲ್ಸ್ ನಲ್ಲಿ ಬ್ಯುಸಿಯಾಗಿದ್ದಾಳೆ. ಆದರೆ ಅಲ್ಲೇ ಇದ್ದ ಮಗು ಸ್ವಲ್ಪ ಎಚ್ಚರ ತಪ್ಪಿದ್ರೂ ಸೇತುವೆಗೆ ಬೀಳುತ್ತಿತ್ತು. ಈ ಅಪಾಯಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸೇತುವೆ ಬಳಿ ರೀಲ್ಸ್ ಮಾಡೋದ್ರಲ್ಲಿ ಮಹಿಳೆ ಬ್ಯುಸಿ, ಮುಂದೇನಾಯ್ತು ನೋಡಿ
ವೈರಲ್‌ ವಿಡಿಯೋ
Image Credit source: Twitter

Updated on: Aug 11, 2026 | 2:31 PM

ರೀಲ್ಸ್ ರೀಲ್ಸ್ ರೀಲ್ಸ್…. ಈಗಿನ ಕಾಲದ ಯುವಕ ಯುವತಿಯರಲ್ಲಿ ರೀಲ್ಸ್ (reels) ಕ್ರೇಜ್ ಹೆಚ್ಚಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗುವ ಸಲುವಾಗಿ ರೀಲ್ಸ್ ಮಾಡಲು ಹೋಗಿ ಅಪಾಯದಲ್ಲಿ ಸಿಲುಕುವುದಿದೆ. ಇಲ್ಲೊಬ್ಬ ಮಹಿಳೆಯದ್ದು ಅದೇ ಕಥೆ. ತಾಯಿಯೊಬ್ಬಳು ಸೇತುವೆ ಬಳಿ ಮಗುವನ್ನು  ಬಿಟ್ಟು ರೀಲ್ಸ್ ಮಾಡಲು ಮುಂದಾಗಿದ್ದಾಳೆ. ಈ ಮಹಿಳೆ ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ರೆ ಈ ಪುಟಾಣಿ ತೆವಳುತ್ತಾ ಸೇತುವೆ ಅಂಚಿಗೆ ಹೋಗಿರುವ ವಿಡಿಯೋ ವೈರಲ್ ಆಗಿದೆ.  ಈ ವಿಡಿಯೋ ನೋಡಿದ ನೆಟ್ಟಿಗರು ಈ ಮಹಿಳೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ರಿತೇಶ್ (Ritesh) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮಹಿಳೆಯೊಬ್ಬಳು ಮಗುವನ್ನು ತನ್ನ ಹಿಂಬದಿ ಬಿಟ್ಟು ಸೇತುವೆ ಬಳಿ ನಿಂತು ರೀಲ್ಸ್ ಮಾಡುತ್ತಿದ್ದಾಳೆ. ಆದರೆ ತನ್ನ ಹಿಂಬದಿ ಏನು ನಡೆಯುತ್ತಿದೆ ಎನ್ನುವ ಬಗ್ಗೆ ಲಕ್ಷ್ಯವೇ ಕೊಡುತ್ತಿಲ್ಲ. ಮಗು ತೆವಳುತ್ತಾ ಅಂಚಿನ ಕಡೆಗೆ ಹೋಗುತ್ತಿದೆ. ಅಲ್ಲೇ ಇದ್ದ ವ್ಯಕ್ತಿ ಈ ಮಹಿಳೆಯ ಪತಿಯಂತೆ ಕಾಣುತ್ತದೆ. ಮಗು ತೆವಳುತ್ತಾ ಸೇತುವೆ ಅಂಚಿಗೆ ಹೋಗುತ್ತಿದ್ದಂತೆ ಓಡಿಬಂದ ಈ ವ್ಯಕ್ತಿ ಮಗುವನ್ನು ಎತ್ತಿಕೊಂಡು ಹೋಗಿ ಬೈಕ್ ಮೇಲೆ ಕೂರಿಸಿದ್ದಾರೆ. ಆದರೆ ಈ ಮಹಿಳೆಗೆ ಮಗುವಿನ ಬಗ್ಗೆ ಗಮನವೇ ಇಲ್ಲದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: Video: ಪಿಜ್ಜಾ ಆರ್ಡರ್ ಮಾಡಿ ಅಜ್ಜಿಗೆ ಸರ್ಪ್ರೈಸ್ ಕೊಟ್ಟ ಮೊಮ್ಮಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ಎಷ್ಟು ಬೇಜವಾಬ್ದಾರಿಯುತ ಮಹಿಳೆ ಎಂದಿದ್ದಾರೆ. ಇನ್ನೊಬ್ಬರು, ಇದು ರೀಲ್ಸ್ ಹುಚ್ಚು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ರೀಲ್ಸ್ ಹುಚ್ಚಿಗಾಗಿ ಮಗುವಿನ ಪ್ರಾಣದ ಜತೆಗೆ ಆಟ ಆಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:29 pm, Tue, 11 August 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us