ಸೌಂದರ್ಯ ಹೆಚ್ಚಿಸುವ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕಂಪನಿ ಹಣ ಬಳಸಿದ ಮಹಿಳೆ

ಕಂಪನಿಯ ಹಣದಲ್ಲಿ ದುಬಾರಿ ಜೀವನಶೈಲಿ ನಡೆಸುತ್ತಿದ್ದ ಮಹಿಳೆ, ಇದೀಗ ಸಿಕ್ಕಿಬಿದ್ದಿದ್ದಾಳೆ. ಕೋಟಿ ಕೋಟಿ ಹಣವನ್ನು ತನ್ನ ವೈಯಕ್ತಿಕ ವಿಚಾರಕ್ಕಾಗಿ ಬಳಸಿಕೊಂಡು ಕಂಪನಿಯ ಖಾತೆಯನ್ನು ಸಂಪೂರ್ಣ ಬರಿದು ಮಾಡಿದ್ದಾಳೆ. ಇದೀಗ ಈ ವಿಚಾರ ತಿಳಿದು ಕಂಪನಿ ಮಾಲೀಕರಿಗೆ ಶಾಕ್​​ ಆಗಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಈ ಘಟನೆ ಚೀನಾದಲ್ಲಿ ನಡೆದಿದೆ.

ಸೌಂದರ್ಯ ಹೆಚ್ಚಿಸುವ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕಂಪನಿ ಹಣ ಬಳಸಿದ ಮಹಿಳೆ
ಸಾಂದರ್ಭಿಕ ಚಿತ್ರ
Edited By:

Updated on: Jul 20, 2025 | 4:15 PM

ಇಂದಿನ ಯುವ ಸಮೂಹಕ್ಕೆ ಸೌಂದರ್ಯ ಹುಚ್ಚು ಸಾಕಷ್ಟಿದೆ. ದುಬಾರಿ ಖರ್ಚು ಮಾಡಿ ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳವ ಸಾಹಸಕ್ಕೆ ಹೋಗುತ್ತಾರೆ. ಇದರಿಂದ ಪ್ರಾಣ ಕಳೆದುಕೊಂಡ ಅದೆಷ್ಟೋ ನಿದರ್ಶನ ಇದೆ. ಆದರೆ ಇಲ್ಲೊಂದು ಮಹಿಳೆ ತನ್ನ ಸೌಂದರ್ಯ ಹೆಚ್ಚಿಸಲು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು, ಈ ಚಿಕಿತ್ಸೆಗೆ ಹಣವಿಲ್ಲ ಎಂದು ತನ್ನ ಕಂಪನಿಯ ಉದ್ಯೋಗಿಗಳ ನಿಧಿಯಿಂದ ದೋಚಿದ್ದಾಳೆ. ಈ ಘಟನೆ ಚೀನಾದ ಶಾಂಘೈನಲ್ಲಿ (Shanghai) ನಡೆದಿದೆ. ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳು, ಐಷಾರಾಮಿ ವಸ್ತುಗಳು ಮತ್ತು ಜೂಜಾಟ ಸೇರಿದಂತೆ ಐಷಾರಾಮಿ ಜೀವನಶೈಲಿಗೆ ಹಣಬೇಕೆಂದು ಸುಮಾರು 17 ಮಿಲಿಯನ್ ಯುವಾನ್ (20,40,77,180 ರೂ. ) ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾಳೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ.

ವಾಂಗ್ ಜಿಂಗ್ ಎಂಬ 41 ವರ್ಷದ ಮಹಿಳೆ 2018ರಲ್ಲಿ ಶಾಂಘೈನಲ್ಲಿರುವ ಹೂವು ಮತ್ತು ತೋಟಗಾರಿಕೆ ಸೇವೆಗಳ ಕಂಪನಿಯಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಇದರಲ್ಲಿ ವಾಂಗ್ ತಿಂಗಳಿಗೆ 8,000 ಯುವಾನ್ ಗಳಿಸಿದ್ದಾಳೆ. ಇದರ ಜತೆಗೆ ಕಂಪನಿಯಿಂದ ಆಕೆ ಹೆಚ್ಚಿನ ಹಣವನ್ನು ರಹಸ್ಯವಾಗಿ ಸಂಗ್ರಹಿಸಿದ್ದಾಳೆ. ಆರು ವರ್ಷಗಳ ಅವಧಿಯಲ್ಲಿ ವರ್ಷಕ್ಕೆ ನಾಲ್ಕು ಬಾರಿ ಸೌಂದರ್ಯವರ್ಧಕ ವಿಧಾನದ ಚಿಕಿತ್ಸೆಯನ್ನು ಮಾಡಿಸಿದ್ದಾಳೆ. ಪ್ರತಿ ಸೆಷನ್‌ಗೆ 300,000 ಯುವಾನ್ (36,01,362 ರೂ.) ಖರ್ಚು ಮಾಡಿದ್ದು, ಒಟ್ಟು ವಾರ್ಷಿಕವಾಗಿ 1.2 ಮಿಲಿಯನ್ ಯುವಾನ್ (1,44,05,448 ರೂ.) ವ್ಯಯ ಮಾಡಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ ಶ್ರೀಮಂತ ಮಹಿಳೆ ಎಂದು ಹೇಳಿಕೊಂಡಿದ್ದಾಳೆ. ಮೊಸಳೆ ಚರ್ಮದ ಕೈಚೀಲಗಳು ಮತ್ತು 100,000 ಯುವಾನ್‌ಗಿಂತ ಹೆಚ್ಚು ಮೌಲ್ಯದ ವಜ್ರದ ಕಡಗಗಳು ಸೇರಿದಂತೆ ಐಷಾರಾಮಿ ವಸ್ತುಗಳಿಗಾಗಿ ವರ್ಷಕ್ಕೆ ಸುಮಾರು ಎರಡು ಮಿಲಿಯನ್ ಯುವಾನ್ (2,40,09,080 ರೂ.) ಖರ್ಚು ಮಾಡುತ್ತಿದ್ದಳು ಎಂದು ಹೇಳಲಾಗಿದೆ.

ನಾನು ದುರಹಂಕಾರದಿಂದ ಕುರುಡನಾಗಿದ್ದೇನೆ, ನಾನು ಎಂದಿಗೂ ಯಾವುದೇ ಪುರುಷನಿಗಾಗಿ ಹಣವನ್ನು ಖರ್ಚು ಮಾಡಿಲ್ಲ. ನಾನು ಸುಂದರವಾಗಿ ಕಾಣಬೇಕು ಎಂದು ಹೀಗೆ ಮಾಡಿದ್ದೇನೆ ಎಂದು ವಾಂಗ್ ತನಿಖಾಧಿಕಾರಿಗಳ ಮುಂದೆ ಆಕೆ ಹೇಳಿಕೊಂಡಿದ್ದಾಳೆ ಎಂದು ವರದಿ ಹೇಳಿದೆ. ಕಂಪನಿಯ ಸಂಸ್ಥಾಪಕಿ ಕ್ಸು ಈಕೆಯ ಮೇಲೆ ಭಾರೀ ನಂಬಿಕೆಯನ್ನು ಇಟ್ಟಿದ್ದರು. ಈಕೆಗೆ ಕಂಪನಿಯ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಕೂಡ ನೀಡಲಾಗಿತ್ತು. ವೃತ್ತಿಪರ ಲೆಕ್ಕಪತ್ರ ಸಂಸ್ಥೆಯ ಜವಾಬ್ದಾರಿ, ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಹಣಕಾಸುಗಳನ್ನು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಕೂಡ ನೀಡಲಾಗಿತ್ತು. ಆದರೆ ವಾಂಗ್ ಕಂಪನಿಯ ಹಣವನ್ನು ತನ್ನ ಸ್ವಂತಕ್ಕಾಗಿ ಬಳಸಿಕೊಂಡಿದ್ದಾಳೆ. 30,000 ರಿಂದ 40,000 ಯುವಾನ್‌ಗಳಷ್ಟಿತ್ತು ಹಣವನ್ನು ತನ್ನ ವೈಯಕ್ತಿಕ ವಿಚಾರಕ್ಕೆ ಬಳಸಿಕೊಂಡಿದ್ದಾಳೆ.

ಇದನ್ನೂ ಓದಿ
4.5 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ ಅಂತಿಮ ವರ್ಷದ ವಿದ್ಯಾರ್ಥಿನಿ
ವಿಡಿಯೋ: ಆಟೋ ಡ್ರೈವರ್ ಮೇಲೆ ಬಸ್ ಹರಿಸಲು ಮುಂದಾದ ಬಿಎಂಟಿಸಿ ಚಾಲಕ
ಪಾಕ್​​​ ನಿರೂಪಕಿಗೆ ಕಣ್ಣು ಊದಿಕೊಳ್ಳುವಂತೆ ಹಲ್ಲೆ ಮಾಡಿದ ಪತಿ
ವಿಚ್ಛೇದನ ನೀಡಿ ಹಾಲಿನಲ್ಲಿ ಸ್ನಾನ ಮಾಡಿದ ಪತಿ

ಇದನ್ನೂ ಓದಿ: ಹನಿಮೂನ್​​​ ಹೋಗಲು ಮದುವೆ ಊಟವನ್ನು ಹರಾಜಿಗಿಟ್ಟ ಜೋಡಿ

ಇನ್ನು ಈಕೆ ಜುಲೈ 2024 ರಲ್ಲಿ ತೆರಿಗೆ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾಳೆ. ಯಾವಾಗ ಸಂಸ್ಥೆಯ ಹಣಕಾಸಿನಲ್ಲಿ ವ್ಯತ್ಯಾಸ ಬಂತು ಆಗಾ ಈ ಅನುಮಾನಗಳು ಶುರುವಾಗಿದೆ. ಈ ಸತ್ಯ ತಿಳಿಯುವ ಹೊತ್ತಿಗೆ ಕಂಪನಿಯ ಬ್ಯಾಂಕ್​​ ಖಾತೆ ಖಾಲಿಯಾಗಿದೆ. ಉದ್ಯೋಗಿಗಳ ಸಾಮಾಜಿಕ ಭದ್ರತಾ ಪಾವತಿಗಳನ್ನು ಭರಿಸಲು ಕ್ಸು ತನ್ನ ವೈಯಕ್ತಿಕ ಉಳಿತಾಯವನ್ನು ಬಳಸಿಕೊಂಡಿದ್ದಾಳೆ. ಶಾಂಘೈನಲ್ಲಿರುವ ಚಾಂಗ್ನಿಂಗ್ ಜಿಲ್ಲಾ ಪೀಪಲ್ಸ್ ಪ್ರಾಕ್ಯುರೇಟರೇಟ್ ವಾಂಗ್ ಜಿಂಗ್ ವಿರುದ್ಧ ದುರುಪಯೋಗ ಮತ್ತು ವಂಚನೆ ಆರೋಪ ಹೊರಿಸಿದೆ. ಜೈಲಿಗೆ ಕಳಿಸಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Sun, 20 July 25