Trending : ಯೋಗಿ ಆದಿತ್ಯನಾಥ ಬುಧವಾರ ಗೋರಖ್‌ಪುರದ ಶಹೀದ್ ಅಶ್ಫಾಕ್ ಉಲ್ಲಾ ಖಾನ್ ಝೂಲಾಜಿಕಲ್ ಪಾರ್ಕ್ ಮತ್ತು ಪಶುವೈದ್ಯಕೀಯ ಆಸ್ಪತ್ರೆಗೆ ರಾಜಕಾರಣಿ ಮತ್ತು ನಟ ರವಿ ಕಿಶನ್ ಜೊತೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪಾರ್ಕ್‌ನಲ್ಲಿ ಚಿರತೆಮರಿಗಳಿಗೆ ಬಾಟಲಿಯಿಂದ ಹಾಲು ಕುಡಿಸಿ ಅವುಗಳಿಗೆ ಚಂಡಿ ಮತ್ತು ಭವಾನಿ ಎಂದು ನಾಮಕರಣ ಮಾಡಿದರು. ನಂತರ ಕಾನ್ಪುರದ ಮೃಗಾಲಯದಿಂದ ತಂದಿರುವ ಬಿಳಿಹುಲಿ ಮತ್ತು ಎರಡು ಹಿಮಾಲಯನ್ ಕಪ್ಪು ಕರಡಿಗಳನ್ನು ಮೃಗಾಲಯವಾಸಕ್ಕೆ ಅನುವು ಮಾಡಿಕೊಟ್ಟರು. ಆರಂಭದಲ್ಲಿ ಪಶುವೈದ್ಯರು ಬಾಟಲಿಯಿಂದ ಹಾಲು ಕುಡಿಸಲು ಪ್ರಯತ್ನಿಸಿದಾಗ ಮರಿ ಒಲವು ತೋರಿಸಲಿಲ್ಲ. ಆಗ ಪಶುವೈದ್ಯರು ಸಿಎಂ ಆದಿತ್ಯನಾಥ ಅವರ ಬಳಿಗೆ ಕರೆತಂದರು. ಅವರು ಕಿತ್ತಳೆ ಬಣ್ಣದ ರಬ್ಬರ್ ಕೈಗವಸುಗಳನ್ನು ಧರಿಸಿ ಚಿರತೆ ಮರಿಯನ್ನು ಎತ್ತಿಕೊಂಡು ಬಾಟಲಿಯಿಂದ ಹಾಲು ಕುಡಿಸಲು ಶುರು ಮಾಡಿದರು. ನಂತರ ಎರಡೂ ಚಿರತೆಗಳು ಸರಾಗವಾಗಿ ಹಾಲು ಕುಡಿದವು.
CM Yogi Adityanath feeding two female leopard cub in Gorakhpur. He named them Bhawani and Chandi. pic.twitter.com/VrmBorjSav
ಇದನ್ನೂ ಓದಿ— Piyush Rai (@Benarasiyaa) October 5, 2022
ಯುಪಿ ಸರ್ಕಾರದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ನಂತರ ಮೃಗಾಲಯ ವೀಕ್ಷಣೆ ಸಂದರ್ಭದಲ್ಲಿ ಮೃಗಾಲಯದ ಅಧಿಕಾರಿಗಳು ಯೋಗಿ ಅವರಿಗೆ ಮೃಗಾಲಯದ ವೈಶಿಷ್ಟ್ಯವನ್ನು ವಿವರಿಸಿದರು. ಜೊತೆಗೆ ಪ್ರಾಣಿಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ನಂತರ ಆದಿತ್ಯನಾಥ್ ಸಭೆಯನ್ನು ಉದ್ದೇಶಿಸಿ ವನ್ಯಜೀವಿಗಳ ರಕ್ಷಣೆ ಮತ್ತು ಸಂರಕ್ಷಣೆಯ ಅನಿವಾರ್ಯತೆ ಮತ್ತು ಅಗತ್ಯದ ಬಗ್ಗೆ ಮಾತನಾಡಿ, ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಸೂಕ್ತ ಆರೈಕೆ, ಚಿಕಿತ್ಸೆಗಾಗಿ ಪಶುವೈದ್ಯರ ಪ್ರತ್ಯೇಕ ತಂಡದ ಅವಶ್ಯಕತೆ ಎಂದು ತಿಳಿಸಿದರು.
ಮೃಗಾಲಯದ ಅಧಿಕೃತ ವೆಬ್‌ಸೈಟ್ ಪ್ರಕಾರ ಇದು ಪೂರ್ವಾಂಚಲ ಪ್ರದೇಶದಲ್ಲಿ ಮೊದಲ ಮತ್ತು ಉತ್ತರ ಪ್ರದೇಶದಲ್ಲಿ ಮೂರನೇ ಪ್ರಾಣಿಶಾಸ್ತ್ರೀಯ ಉದ್ಯಾನವನವಾಗಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:02 pm, Thu, 6 October 22