
ಭಾರತದ ಅಂದ್ರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಇಷ್ಟ ಪಟ್ಟು ಇಲ್ಲಿನ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಬರುವ ಫಾರಿನರ್ಸ್ ಇಲ್ಲಿಯೇ ಸೆಟ್ಲ್ ಆಗಿ ಬಿಡ್ತಾರೆ. ಇದೇ ವೇಳೆ ಭಾರತೀಯರ ಜತೆ ಬೆರೆಯುವ ವಿದೇಶಿಗರಿಗೆ ಸಿಹಿ ಅನುಭವ ಆಗೋಗಿದೆ. ಇದೀಗ ಭಾರತಕ್ಕೆ ಬಂದ ವಿದೇಶಿಗ ಭಾರತ ಯಾವಾಗ್ಲೂ ಬ್ಯುಸಿ. ಇಲ್ಲಿ ನಗರ ಹಾಗೂ ಹಳ್ಳಿಯ ಜನರು ಒಂದಲ್ಲ ಒಂದು ಕೆಲ್ಸದಲ್ಲಿ ಬ್ಯುಸಿ ಇರ್ತಾರೆ. ಇಲ್ಲಿದ್ದಾಗ ನನಗೆ ಒಂಟಿ ಅನ್ನೋ ಭಾವನೆ ಬರೋದೇ ಇಲ್ಲ ಎಂದಿದ್ದಾನೆ. ಭಾರತೀಯ ಜನರನ್ನು ಮೆಚ್ಚಿಕೊಂಡ ವಿದೇಶಿಗನ ಮಾತಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ದಾಮೋನ್ ಝುಮ್ಬರೋಗೆಲ್ (Damon Zumbroegel)ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿದೇಶಿಗ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಟ್ರಾಫಿಕ್ ನಿಂದ ಕಿಕ್ಕಿರಿದ ಭಾರತದ ರಸ್ತೆ ತೋರಿಸಿದ್ದಾರೆ. ಇದು ಭಾರತ, ನಾನು ಈಗ ರಸ್ತೆಬದಿಯಲ್ಲಿ ಇದ್ದೇನೆ. ಇಂಡಿಯಾ ಬ್ಯುಸಿ ಇಲ್ಲಿ ಹಳ್ಳಿ ಹಾಗೂ ನಗರದ ಜನರು ಏನಾದರೊಂದು ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಭಾರತವು ಅಧಿಕ ಜನಸಂಖ್ಯೆ ಇರುವ ದೇಶ. ಇಲ್ಲಿನ ಮತ್ತೊಂದು ಅತ್ಯಂತ ಆಕರ್ಷಕ ವಿಷ್ಯ ಎಂದರೆ ನಿಮ್ಗೆ ಎಲ್ಲರೊಂದಿಗೆ ಇರುವಂತೆ ಅನಿಸುತ್ತದೆ. ಒಂಟಿ ಭಾವನೆ ಕಾಡುವುದಿಲ್ಲ. ಆದರೆ ಯುನೈಟೆಡ್ ಸ್ಟೇಟ್‌ನಲ್ಲಿ ಒಂಟಿತನ ಕಾಡುತ್ತದೆ. ಆದರೆ ಭಾರತದಲ್ಲಿ ನನಗೆ ಎಂದಿಗೂ ಆ ರೀತಿಯ ಭಾವನೆ ಬಂದಿಲ್ಲ. ಇದು ಅತಂತ್ಯ ಸುಂದರ ವಿಷಯ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಭಾರತದ ಟ್ರಿಪ್‌ನಲ್ಲಿ ಜತೆಯಾದ ಆಟೋರಿಕ್ಷಾವನ್ನು ತಾಯ್ನಾಡಿಗೆ ಕೊಂಡೊಯ್ದ ಬ್ರಿಟನ್ ದಂಪತಿ
ಈ ವಿಡಿಯೋ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, 55 ವರ್ಷ ಭಾರತದಲ್ಲಿ ಕಳೆದ್ರೂ ಯಾವತ್ತೂ ಬೋರ್ ಅನಿಸಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಬ್ಯುಸಿ ಇರ್ತಾರೆ, ಆದ್ರೆ ಏನು ಮಾಡಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ