Video: ದಾರಿ ಕೇಳಿದ ವಿದೇಶಿಗನನ್ನು ಮದ್ವೆಗೆ ಆಹ್ವಾನಿಸಿ ಊಟ ಬಡಿಸಿದ ಯುವಕ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳು ಹೃದಯಕ್ಕೆ ಹತ್ತಿರವಾಗುತ್ತವೆ. ಇದೀಗ ವಿದೇಶಿಗನೊಬ್ಬ ಭಾರತೀಯನ ಒಳ್ಳೆತನಕ್ಕೆ ಫಿದಾ ಆಗಿದ್ದಾನೆ. ದಾರಿ ಕೇಳಿದ ವಿದೇಶಿಗನಿಗೆ ಯುವಕನೊಬ್ಬ ಮದುವೆಗೆ ಆಮಂತ್ರಣ ನೀಡಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ದಾರಿ ಕೇಳಿದ ವಿದೇಶಿಗನನ್ನು ಮದ್ವೆಗೆ ಆಹ್ವಾನಿಸಿ ಊಟ ಬಡಿಸಿದ ಯುವಕ
ವೈರಲ್‌ ವಿಡಿಯೋ
Image Credit source: Instagram

Updated on: Nov 26, 2026 | 2:20 PM

ಭಾರತವೆಂದರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಭಾರತಕ್ಕೆ ಬರುವ ಫಾರಿರ್ಸ್ ಇಲ್ಲಿನ ಜನರು ತೋರುವ ಪ್ರೀತಿಗೆ ಕಳೆದೇ ಹೋಗ್ತಾರೆ. ಗುರುತು ಪರಿಚಯವಿಲ್ಲದಿದ್ರೂ ಕುಟುಂಬದವರಂತೆ ನಡೆದುಕೊಳ್ಳುತ್ತಾರೆ. ಇಲ್ಲೊಬ್ಬ ವಿದೇಶಿಗನಿಗೆ ಅದೇ ರೀತಿ ಅನುಭವವಾಗಿದೆ. ವಿದೇಶಿಗನು ಯುವಕನ ಬಳಿ ಮುಖ್ಯ ರಸ್ತೆಗೆ ಹೋಗಲು ದಾರಿ ಕೇಳಿದ್ದು, ಆದರೆ ಆತ ಮದ್ವೆಗೆ ಆಹ್ವಾನಿಸಿದ್ದಾನೆ.  ವಿದೇಶಿ ವ್ಯಕ್ತಿ ಮುಜುಗರದಿಂದಲೇ ಮದ್ವೆ ಊಟ ಸವಿದು ಖುಷಿಪಟ್ಟಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಗೆ ಈ ದೃಶ್ಯ ನೋಡಿ ಖುಷಿಯಾಗಿದೆ.

ವಿದೇಶಿಗನನ್ನು ಮದ್ವೆಗೆ ಆಹ್ವಾನಿಸಿದ ಯುವಕ

ಇಂಡಿಯನ್ ಆತೆಟಿಕ್ (Indian authentic) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಭಾರತಕ್ಕೆ ಬಂದ ವಿದೇಶಿಗನಿಗೆ ದಾರಿ ತಿಳಿದದೇ ಯುವಕನ ಬಳಿ ಈ ಬಗ್ಗೆ ವಿಚಾರಿಸಿದ್ದಾನೆ. ಮುಖ್ಯ ರಸ್ತೆಗೆ ಹೋಗಲು ದಾರಿ ಕೇಳಿದಾಗ ಮದ್ವೆಗೆ ಆಹ್ವಾನಿಸಿದ್ದಾನೆ. ಯುವಕನು ಊಟಕ್ಕೆ ಬನ್ನಿ ಎಂದ ತಕ್ಷಣ ವಿದೇಶಿಗ ಜೋರಾಗಿ ನಕ್ಕಿದ್ದಾನೆ. ಆ ಬಳಿಕ ಹಸಿವಾಗುತ್ತಿದೆ ಎಂದು ಮದ್ವೆ ಊಟ ಸವಿದು ರುಚಿಗೆ ಫಿದಾ ಆಗಿದ್ದಾನೆ. ತದನಂತರ ಅಲ್ಲೇ ಇದ್ದ ಯುವಕನನ್ನು ಮಾತನಾಡಿಸುತ್ತಿದ್ದ ವೇಳೆ ಆತನೇ ಮದುಮಗ ಎಂದು ತಿಳಿದಿದ್ದು ಶುಭಾಶಯ ಕೋರಿರುವುದನ್ನು ಕಾಣಬಹುದು.

Loading...

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮನೆ ಬಾಗಿಲಿಗೆ ಬಂದು ರಕ್ತ ಪರೀಕ್ಷೆ ಮಾಡುವ ಸೇವೆಗೆ ವಿದೇಶಿ ಮಹಿಳೆ ಫಿದಾ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಇದುವರೆಗೆ 1.1 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ನೀವು ಯಾವುದೇ ದೇಶದವರಾದೇನು, ಇದು ನಮ್ಮ ಸಂಸ್ಕೃತಿ ಎಂದಿದ್ದಾರೆ. ಇನ್ನೊಬ್ಬರು, ಭಾರತೀಯರ ಬಗ್ಗೆ ಹೆಮ್ಮೆ ಅನಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ನಮ್ಮ ಭಾರತೀಯ ಸಂಸ್ಕೃತಿ, ಅತಿಥಿಗಳನ್ನು ದೇವರೆಂದು ಭಾವಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us