Video: ಮನೆ ಬಾಗಿಲಿಗೆ ಬಂದು ರಕ್ತ ಪರೀಕ್ಷೆ ಮಾಡುವ ಸೇವೆಗೆ ವಿದೇಶಿ ಮಹಿಳೆ ಫಿದಾ, ವೈರಲ್ ಆಯ್ತು ದೃಶ್ಯ
ಭಾರತದ ಮನೆ ಬಾಗಿಲಿನ ಆರೋಗ್ಯ ಸೇವೆ ಮತ್ತು ಡಿಜಿಟಲ್ ವೈದ್ಯಕೀಯ ಸೌಲಭ್ಯಗಳ ವೇಗವನ್ನು ಕಂಡು ವಿದೇಶಿ ಮಹಿಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೆಗೆ ಬಂದು ರಕ್ತ ಪರೀಕ್ಷೆ ಮಾಡುವ ಸೇವೆಗೆ ಫಿದಾ ಆಗಿದ್ದಾರೆ. ಮನೆಗೆ ಬಂದು ಲ್ಯಾಬ್ ತಂತ್ರಜ್ಞೆ ರಕ್ತ ಪರೀಕ್ಷೆ ಮಾಡಿದ್ದು, ಈ ರಿಪೋರ್ಟ್ ಕೂಡ ವಿದೇಶಿ ಮಹಿಳೆಯ ಕೈ ಸೇರಿದೆ. ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು ವಿಡಿಯೋ ಹಂಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಭಾರತದಲ್ಲಿ ಮನೆ ಬಾಗಿಲಿನಲ್ಲಿಯೇ ರಕ್ತ ಪರೀಕ್ಷೆ ಸೌಲಭ್ಯವು ಲಭ್ಯವಿದೆ. ಹೌದು, ತರಬೇತಿ ಪಡೆದ ಲ್ಯಾಬ್ ತಂತ್ರಜ್ಞರು ಮನೆಗೆ ಸುರಕ್ಷಿತವಾಗಿ ರಕ್ತದ ಮಾದರಿಯನ್ನು ಸಂಗ್ರಹಿಸುವುದು ಹೊಸದೇನಲ್ಲ. ಆದರೆ ವಿದೇಶಿ ಮಹಿಳೆ (foreign woman) ಈ ಆರೋಗ್ಯ ಸೇವೆ ಕಂಡು ಅಚ್ಚರಿಗೊಂಡಿದ್ದಾರೆ. ಫ್ರಾನ್ಸ್ ನಲ್ಲಿ ಈ ರೀತಿ ಸೇವೆ ಲಭ್ಯವಿಲ್ಲ, ತಪಾಸಣೆ ಬಳಿಕ ಸಿಗುವ ವರದಿಗಾಗಿ ಕಾಯಬೇಕಾಗುತ್ತದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತದ ಆರೋಗ್ಯ ಸೇವೆಗೆ ವಿದೇಶಿ ಮಹಿಳೆ ಫಿದಾ
ಸೋನಿ ಲಡ್ಡು (Sonnyladdu) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿದೇಶಿ ಮಹಿಳೆ ಭಾರತದ ಆರೋಗ್ಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೆ ಬಾಗಿಲಿಗೆ ಬಂದು ಲ್ಯಾಬ್ ತಂತ್ರಜ್ಞೆ ರಕ್ತ ಪರೀಕ್ಷೆ ಮಾಡಿರುವುದನ್ನು ನೀವಿಲ್ಲಿ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಫ್ರಾನ್ಸ್‌ಗೆ ಹೋಲಿಸಿದ್ರೆ ಇಲ್ಲಿನ ಆರೋಗ್ಯ ಸೇವೆ ಬೆಸ್ಟ್
ಈ ವಿದೇಶಿ ಮಹಿಳೆ ಭಾರತದಲ್ಲಿ ಮನೆ ಬಾಗಿಲಿಗೆ ಬಂದು ರಕ್ತ ಪರೀಕ್ಷೆ ಮಾಡಿ ಸ್ಯಾಂಪಲ್ ತೆಗೆದುಕೊಂಡು ಹೋಗುತ್ತಾರೆ. ಒಂದು ದಿನದ ಬಳಿಕ ರಿಪೋರ್ಟ್ ಕೈಗೆ ಸಿಗುತ್ತದೆ. ಭಾರತಕ್ಕೆ ಹೋಲಿಸಿದ್ರೆ ಫ್ರಾನ್ಸ್ ನಲ್ಲಿ ರಿಪೋರ್ಟ್ ಗಾಗಿ ಸ್ವಲ್ಪ ಕಾಯಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀವು ಭಾರತಕ್ಕೆ ಒಮ್ಮೆ ಬಂದ್ರೆ ಹುಟ್ಟೂರಿಗೆ ಹೋಗಲ್ಲ; ಅಸಲಿ ಕಾರಣ ತಿಳಿಸಿದ ಜಪಾನೀಸ್ ಮಹಿಳೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಭಾರತದಲ್ಲಿ ಈ ಸೇವೆ ಸರ್ವೇ ಸಾಮಾನ್ಯ ಎಂದಿದ್ದಾರೆ. ಇನ್ನೊಬ್ಬರು, ಇದರಲ್ಲಿ ನಮ್ಗೆ ಹೊಸದೇನು ಅನಿಸಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ನಿಮ್ಮಿಬ್ಬರಿಗೂ ಉತ್ತಮ ಆರೋಗ್ಯ ಸಿಗಲಿ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




