AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನೋಡಲು ಹ್ಯಾಂಡ್‌ಸಮ್‌ ಆಗಿದ್ರೂ ಪ್ರಪೋಸಲ್ ರಿಜೆಕ್ಟ್ ಮಾಡಿದ ಯುವತಿ, ಕಾರಣ ಇದೇ ನೋಡಿ

ಪ್ರತಿಯೊಬ್ಬರು ತನ್ನ ಜೀವನ ಸಂಗಾತಿಯಾಗುವ ವ್ಯಕ್ತಿಯ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಮದುವೆ ಪ್ರಸ್ತಾಪದ ವೇಳೆ ತನ್ನ ನಿರೀಕ್ಷೆಗೆ ಸರಿ ಹೊಂದದ ವ್ಯಕ್ತಿಯನ್ನು ರಿಜೆಕ್ಟ್ ಮಾಡೋದು ಸಹಜ. ಆದರೆ ಇಲ್ಲೊಬ್ಬ ಯುವತಿ ಪ್ರಪೋಸಲ್ ಬಂದದ್ದನ್ನು ರಿಜೆಕ್ಟ್ ಮಾಡಿದ್ದಾಳೆ. ಆಕೆ ರಿಜೆಕ್ಟ್ ಮಾಡಲು ಮುಖ್ಯ ಕಾರಣ ಆ ಯುವಕನು ಮೂರು ವರ್ಷಗಳ ಕಾಲ ಬೇರೆ ಹುಡುಗಿಯನ್ನು ಪ್ರೀತಿಸಿದ್ದು, ಆತ ವರ್ಜಿನ್ ಅಲ್ಲ ಎಂಬುದಾಗಿದೆ. ಆದರೆ ಈ ಪ್ರಪೋಸಲ್ ಬೇಡ ಅಂದ್ರೂ ಆ ಯುವಕ ಮಾತ್ರ ಒಪ್ಪುತ್ತಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಈ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ನೋಡಲು ಹ್ಯಾಂಡ್‌ಸಮ್‌ ಆಗಿದ್ರೂ ಪ್ರಪೋಸಲ್ ರಿಜೆಕ್ಟ್ ಮಾಡಿದ ಯುವತಿ, ಕಾರಣ ಇದೇ ನೋಡಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Oct 21, 2026 | 11:37 AM

Share

ಮದುವೆಯಾಗುವ (marriage) ಪ್ರತಿಯೊಬ್ಬ ಹೆಣ್ಣು ಗಂಡಿಗೂ ಒಂದಷ್ಟು ಆಸೆ ಆಕಾಂಕ್ಷೆಯಿರುವುದು ಸಹಜ. ತಮಗೆ ಸೂಕ್ತ ವ್ಯಕ್ತಿ ಈತ ಅಥವಾ ಈಕೆಯಲ್ಲ ಎಂದು ಅನಿಸಿದ್ರೆ ರಿಜೆಕ್ಟ್ ಮಾಡೋದು ಸಹಜ. ಆದರೆ ಇಲ್ಲೊಬ್ಬ ಯುವತಿ ತನ್ನ ನಿರೀಕ್ಷೆಗೆ ಸರಿಯಲ್ಲ ಎಂಬ ಕಾರಣಕ್ಕೆ ಪ್ರಪೋಸಲ್ ನ್ನು ರಿಜೆಕ್ಟ್ ಮಾಡಿದ್ದಾಳೆ. ಆದ್ರೆ ಆತ ಮಾತ್ರ ಆಕೆ ರಿಜೆಕ್ಟ್ ಮಾಡಿದ್ದನ್ನು ಒಪ್ಪಿಕೊಂಡಿಲ್ಲ. ಆತನಿಗೆ ಹೇಗೆ ಅರ್ಥ ಮಾಡಿಸುವುದು ಎನ್ನುವುದೇ ಆಕೆಗೆ ತಲೆ ನೋವಾಗಿದೆ. ಯುವತಿ ಮಾಡಿದ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಮ್ಯಾರೇಜ್ ಪ್ರಪೋಸಲ್ ರಿಜೆಕ್ಟ್ ಮಾಡಿದ ಯುವತಿ ಹೇಳಿದ್ದೇನು?

ಆಸ್ಕ್ ಇಂಡಿಯನ್ ಮೆನ್ (r/AskIndianMen) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇಲ್ಲಿ ಯುವತಿ ತನಗೆ ಬಂದ ಪ್ರಪೋಸಲ್ ನ್ನು ರಿಜೆಕ್ಟ್ ಮಾಡಿದ ಹಿಂದಿನ ಕಾರಣ ವಿವರಿಸಿದ್ದಾಳೆ. ನನಗೆ 27 ವರ್ಷ, ಮದುವೆ ಪ್ರಸ್ತಾಪವೊಂದು ಬಂತು. ಆ ವ್ಯಕ್ತಿಗೆ 28 ​​ವರ್ಷ. ಅವನು ನೋಡಲು ಚೆನ್ನಾಗಿದ್ದ. ಒಂದು ತಿಂಗಳ ಅವಧಿಯಲ್ಲೇ ನಾವು ಪರಸ್ಪರ ಹತ್ತಿರವಾದೆವು. ನಾನು ಅವನ ಹಿಂದಿನ ಜೀವನದ ಬಗ್ಗೆ ಕೇಳಿದಾಗ, ಅವನು ಮೂರು ವರ್ಷಗಳ ಕಾಲ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದೆನೆಂದೂ ತಿಳಿಯಿತು. ಆದರೆ, ಜಾತಿಯ ಕಾರಣದಿಂದಾಗಿ ಅವರ ಸಂಬಂಧ ಮುರಿದುಬಿತ್ತು ಎಂದು ತಿಳಿಸಿದ. ಹಿಂದಿನ ಜೀವನದ ಬಗ್ಗೆ ತಿಳಿದ ನಂತರದಲ್ಲಿ ನನಗೆ ಈ ಮದುವೆ ಪ್ರಸ್ತಾಪದಲ್ಲಿ ಆಸಕ್ತಿ ಹೋಯಿತು.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

i rejected a guy cuz he’s not virgin whats wrong in that? by u/DistinctPride5023 in AskIndianMen

ಪ್ರಪೋಸಲ್ ರಿಜೆಕ್ಟ್ ಮಾಡಿದ್ರೂ ಹಿಂದೆ ಬಿದ್ದ ಯುವಕ

ನನಗೆ ನಿನ್ನನ್ನು ಮದುವೆಯಾಗಲು ಇಷ್ಟ ಇಲ್ಲ ಎಂದು ನಾನು ನೇರವಾಗಿಯೇ ಹೇಳಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ, ಮೂರು ವರ್ಷಗಳ ಕಾಲ ಪ್ರೇಮ ಸಂಬಂಧದಲ್ಲಿದ್ದ ಮೇಲೆ, ಖಂಡಿತವಾಗಿಯೂ ‘ವರ್ಜಿನ್’ ಆಗಿರಲು ಸಾಧ್ಯವಿಲ್ಲ ಎಂದು ನನಗೆ ನೂರಕ್ಕೆ ನೂರು ಖಾತ್ರಿಯಿದೆ. ಅಲ್ಲದೆ, ಬೇರೆ ಜಾತಿಯ ಹುಡುಗಿ ಎಂದು ತಿಳಿದಿದ್ದರೂ ಅವನು ಏಕೆ ಆಕೆಯೊಂದಿಗೆ ಸಂಬಂಧ ಬೆಳೆಸಿದನು? ಆದರೆ ಸಮಸ್ಯೆ ಏನೆಂದರೆ, ಈ ಕಾರಣಕ್ಕಾಗಿ ನಾನು ಅವನನ್ನು ತಿರಸ್ಕರಿಸಿದ್ದನ್ನು ಒಪ್ಪಿಕೊಳ್ಳಲು ಅವನು ಸಿದ್ಧನಿಲ್ಲ. ಅವನು ನನ್ನನ್ನು ಮದುವೆಯಾಗುವಂತೆ ಪದೇ ಪದೇ ಮನವೊಲಿಸಲು ಪ್ರಯತ್ನಿಸುತ್ತಿದ್ದಾನೆ. ನಾನು ಅವನನ್ನು ಎಲ್ಲಾ ಕಡೆಗಳಿಂದಲೂ ‘ಬ್ಲಾಕ್’ ಮಾಡಿದ್ದರೂ, ಹೇಗೋ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಲೇ ಇದ್ದಾನೆ. ಅವನನ್ನು ತಿರಸ್ಕರಿಸುವುದು ನನ್ನ ಆಯ್ಕೆ ಎಂಬುದನ್ನು ಅವನಿಗೆ ಹೇಗೆ ಅರ್ಥಮಾಡಿಸಲಿ ಎಂದು ಕೇಳಿದ್ದಾಳೆ.

ಇದನ್ನೂ ಓದಿ: ಬಿಹಾರದ ಹುಡುಗನ ಜತೆಗೆ ಚಿಗುರಿದ ಪ್ರೀತಿ; ಪ್ರೇಮಿಯನ್ನು ವರಿಸಲು ಭಾರತಕ್ಕೆ ಬಂದ ರಷ್ಯನ್ ಯುವತಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವಿಚಾರವನ್ನು ನಿಮ್ಮ ಮನೆಯವರಿಗೆ ತಿಳಿಸಿ ಎಂದಿದ್ದಾರೆ. ಇನ್ನೊಬ್ಬರು, ಅರ್ಥ ಮಾಡಿಕೊಳ್ಳದ ವ್ಯಕ್ತಿ ಹತ್ರ ಏನು ಹೇಳಿದ್ರು ವ್ಯರ್ಥವೇ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ನಿಮ್ಮ ಮನೆಯಲ್ಲಿ ಈ ವಿಷ್ಯ ತಿಳಿದಿದೆಯೇ ಎಂದು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More