
ಕೆಲವರು ಒಂದು ಉದ್ಯೋಗ (job) ಸಿಕ್ಕರೆ ಸಾಕು ಅಂತ ಒದ್ದಾಡಿದ್ರೆ, ಇನ್ನು ಕೆಲವರು ಕೈ ತುಂಬಾ ಸಂಪಾದನೆಯಿದ್ರೂ ತೃಪ್ತಿ ಇರಲ್ಲ. ಇಲ್ಲೊಬ್ಬ ಯುವಕನದ್ದು ಅದೇ ಕಥೆ. ವರ್ಷಕ್ಕೆ 1.2 ಕೋಟಿ ರೂ ದುಡಿಯುತ್ತಿದ್ದರೂ ಈ ಯುವಕನಿಗೆ ಲೈಫ್ ಬೋರಿಂಗ್ ಆಗಿದೆಯಂತೆ. ಕೆಲಸ, ಜಿಮ್, ನಿದ್ದೆ ಮಾಡಿ ಸಾಕಾಗಿದೆಯಂತೆ. ತನ್ನ ಗೆಳೆಯನ ಬೋರಿಂಗ್ ಲೈಫ್ ಕುರಿತು ಯುವಕನೊಬ್ಬ ಮಾಡಿದ ಪೋಸ್ಟ್ ಸದ್ಯ ಚರ್ಚೆಯನ್ನು ಹುಟ್ಟುಹಾಕಿದೆ. ಈ ಯುವಕ ಸಾಲ್ಯರಿ ನೋಡಿಯೇ ನೆಟ್ಟಿಗರಿಗೆ ಶಾಕ್ ಆಗಿದೆ.
ಅಭಿಷೇಕ್ ಸಿಂಗ್ (Abhishek Singh) ಎಂಬ ಯುವಕ ತನ್ನ ಸ್ನೇಹಿತನ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾನೆ. ತನ್ನ ಸ್ನೇಹಿತ ಸೌದಿ ಅರೆಬಿಯಾದ ಲೀಡಿಂಗ್ ಫುಲ್ ಡೆಲಿವರಿ ಆ್ಯಪ್ ಆಗಿರುವ ಹಂಗರ್ಸ್ಟೇಷನ್ನಲ್ಲಿ ಕೆಲಸ ಮಾಡುತ್ತಿದ್ದಾನೆ. ತಿಂಗಳಿಗೆ 10 ಲಕ್ಷ ರೂ ದುಡಿಯುತ್ತಿದ್ದು, ತಿಂಗಳಿಗೆ 8 ಲಕ್ಷ ರೂ ಸೇವಿಂಗ್ ಮಾಡ್ತಾನೆ. ವರ್ಷಕ್ಕೆ ಆತನ ಸಂಪಾದನೆ ಬರೋಬ್ಬರಿ 1.2 ಕೋಟಿ ರೂ. ಆದರೆ ಆತನಿಗೆ ಬೋರ್ ಆಗಿದೆ. ಕೆಲಸ, ಜಿಮ್, ನಿದ್ದೆ ಇಷ್ಟೇ ಜೀವನ ಆಗಿದೆ. ಭಾರತದಲ್ಲಿ ಈಗಾಗಲೇ ಹಲವಾರು ಕಡೆ ಆಸ್ತಿ ಕೂಡ ಖರೀದಿ ಮಾಡಿದ್ದಾನೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾನೆ.
ಇದನ್ನೂ ಓದಿ: ಇಂಟರ್ವ್ಯೂ ವೇಳೆ ಸ್ಪ್ಯಾನಿಷ್ ಭಾಷೆ ಮಾತನಾಡಲು ಒತ್ತಡ ಹಾಕಿದ ಮ್ಯಾನೇಜರ್, ಗರಂ ಆದ ಯುವತಿ
ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕೋಟಿ ಸಂಪಾದನೆಯಿದ್ರೂ ಏನಂತೆ, ಮನೆಯಿಂದ ದೂರವಿದ್ದು ದುಡಿಯುವವರ ಕಷ್ಟ ಅವರಿಗೆ ಮಾತ್ರ ಗೊತ್ತು ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ದುಡ್ಡಿನಿಂದಲೇ ಎಲ್ಲವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ