
ತಂದೆ ತಾಯಿ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ. ತಮ್ಮ ಮಕ್ಕಳು ಇದ್ದರೂ ಇಲ್ಲದಿದ್ದರೂ ಅಷ್ಟೇ ಪ್ರೀತಿ ತೋರುತ್ತಾರೆ. ಇದೀಗ ಮಗಳನ್ನು ಕಂಡೊಡನೆ ತಾಯಿ (mother) ಕಣ್ಣು ಒದ್ದೆಯಾಗಿದೆ. ಒಂದು ವರ್ಷಗಳ ಬಳಿಕ ತಾಯಿ ಮಗಳು ಪರಸ್ಪರ ಭೇಟಿಯಾಗಿದ್ದಾರೆ. ಜರ್ಮನಿಯಿಂದ ಭಾರತಕ್ಕೆ ಬಂದ ಯುವತಿ ತಾಯಿಯನ್ನು ನೋಡಿದ ತಕ್ಷಣ ಖುಷಿಯಿಂದ ತಬ್ಬಿಕೊಂಡಿದ್ದಾಳೆ. ಈ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿಮ್ರಾನ್ (@simrankoul14) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ಗೆ ಒಂದು ವರ್ಷದ ನಂತರ ನಿಮ್ಮ ತಾಯಿಯನ್ನು ಮತ್ತೆ ಭೇಟಿಯಾಗುವುದಕ್ಕಿಂತ ಉತ್ತಮವಾದ ಭಾವನೆ ಬೇರೇನೂ ಇಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ತಾನು ಜರ್ಮನಿಯಿಂದ ಭಾರತಕ್ಕೆ ಬಂದಿದ್ದೇನೆ. ನನ್ನ ಅಮ್ಮ ಈಗ ಜಮ್ಮುವಿನಿಂದ ದೆಹಲಿಗೆ ನನ್ನ ಜತೆ ಸಮಯ ಕಳೆಯಲು ಬರುತ್ತಿದ್ದಾಳೆ. ಒಬ್ಬ ವ್ಯಕ್ತಿ ಎಷ್ಟೇ ವಯಸ್ಸಾಗಿದ್ದರೂ ಅಥವಾ ಎಷ್ಟೇ ದೂರದಲ್ಲಿದ್ದರೂ, ತನ್ನ ತಾಯಿಯೊಂದಿಗೆ ಸಮಯ ಕಳೆಯುವ ಸಂತೋಷಕ್ಕೆ ಯಾವುದೂ ಸರಿಸಾಟಿಯಾಗುವುದಿಲ್ಲ ಎಂದು ಹೇಳಿದ್ದಾಳೆ.
ಈ ವಿಡಿಯೋದಲ್ಲಿ ರೈಲಿನಿಂದ ಇಳಿಯಲು ಮುಂದಾದ ತಾಯಿಯನ್ನು ಕಂಡೊಡನೆ ಯುವತಿ ಓಡೋಡಿ ಹೋಗಿದ್ದಾಳೆ. ಆ ಬಳಿಕ ಪರಸ್ಪರ ಒಬ್ಬರೊಬ್ಬರನ್ನು ಅಪ್ಪಿಕೊಂಡಿದ್ದಾರೆ. ಮಗಳನ್ನು ಕಂಡೊಡನೆ ತಾಯಿಯ ಕಣ್ಣಲ್ಲಿ ನೀರು ತುಂಬಿರುವುದನ್ನು ಕಾಣಬಹುದು. ತಾಯಿ ಮಗಳ ಭೇಟಿಯ ಖುಷಿಯು ಅವರಿಬ್ಬರ ಮೊಗದಲ್ಲಿ ಎದ್ದು ಕಾಣುತ್ತಿದೆ.
ಇದನ್ನೂ ಓದಿ: ಅಪ್ಪ ಅಮ್ಮನ ಕನಸು ಈಡೇರಿತು; ಮೊದಲ ಬಾರಿಗೆ ತಂದೆ ತಾಯಿಯನ್ನು ವಿಮಾನದಲ್ಲಿ ಕರೆದೊಯ್ದ ಮಗ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮುದ್ದಾದ ವಿಡಿಯೋ ಎಂದರೆ, ಮತ್ತೊಬ್ಬರು, ಈ ದಿನ ನಾನು ಕಂಡ ಬೆಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತಾಯಿ ಒಬ್ಬಳು ಕಣ್ಣ ಮುಂದೆ ಇದ್ದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ