AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸಹೋದರಿಯ ಹುಟ್ಟುಹಬ್ಬಕ್ಕೆ ವಿದೇಶದಿಂದ ಬಂದು ಸರ್ಪ್ರೈಸ್ ನೀಡಿದ ಯುವತಿ

ಹುಟ್ಟುಹಬ್ಬ ಅಂದ್ರೆ ಎಲ್ಲರಿಗೂ ತುಂಬಾನೇ ಸ್ಪೆಷಲ್. ಹೀಗಾಗಿ ತಮ್ಮ ಆತ್ಮೀಯರ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡುವುದನ್ನು ನೀವು ನೋಡಿರುತ್ತೀರಿ. ಇದೀಗ ಇನ್‌ಸ್ಟಾಗ್ರಾಮ್ ಬಳಕೆದಾರ ಶಿವಾಂಗಿ ತಿವಾರಿಯ 25 ನೇ ಹುಟ್ಟುಹಬ್ಬದ ಭಾವನಾತ್ಮಕ ವೀಡಿಯೊ ವೈರಲ್ ಆಗಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಶಿವಾಂಗಿಗೆ ಆಕೆಯ ಸಹೋದರಿ ವಿದೇಶದಿಂದ ಭಾರತಕ್ಕೆ ಬಂದಿಳಿದಿದ್ದು ಸರ್ಪ್ರೈಸ್ ನೀಡಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸಹೋದರಿಯ ಹುಟ್ಟುಹಬ್ಬಕ್ಕೆ ವಿದೇಶದಿಂದ ಬಂದು ಸರ್ಪ್ರೈಸ್ ನೀಡಿದ ಯುವತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Oct 20, 2026 | 7:31 PM

Share

ಆತ್ಮೀಯರ ಹುಟ್ಟುಹಬ್ಬ (birthday) ಅಂದ್ರೆ ಅವರಿಗಿಂತ ನಾವೇ ಹೆಚ್ಚು ಸಂಭ್ರಮಿಸುತ್ತೇವೆ. ಹೌದು, ಈ ಬಾರಿ ಪ್ರೀತಿ ಪಾತ್ರರ ಬರ್ತ್ಡೇಗೆ ಏನು ಗಿಫ್ಟ್ ಕೊಡೋದು ಅಂತ ಯೋಚನೆ ಮಾಡ್ತೇವೆ. ಆದರೆ ಇದೀಗ ಸಹೋದರಿಯ ಹುಟ್ಟುಹಬ್ಬಕ್ಕೆ ಯುವತಿ ನೀಡಿದ ಸರ್ಪ್ರೈಸ್ ತುಂಬಾನೇ ಸ್ಪೆಷಲ್ ಆಗಿತ್ತು. ತನ್ನ ಸಹೋದರಿಯ ಹುಟ್ಟುಹಬ್ಬಕ್ಕೆ ಡಬ್ಲಿನ್‌ನಿಂದ ಹಠಾತ್ತನೇ ಮನೆಗೆ ಬರುವ ಮೂಲಕ ಆಕೆಯನ್ನು ಅಚ್ಚರಿಗೊಳಿಸಿದ್ದಾಳೆ. ಈ ಸರ್ಪ್ರೈಸ್ ವಿಸಿಟ್‌ಗೆ ಬರ್ತ್ಡೇ ಗರ್ಲ್‌ನ ರಿಯಾಕ್ಷನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಹೋದರಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ಯುವತಿ

ಶಿವಾಂಗಿ ತಿವಾರಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಸಹೋದರಿ ನೀಡಿದ ಸರ್ಪ್ರೈಸ್ ನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಶಿವಾಂಗಿ ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸಲು ತಯಾರಿ ನಡೆಸುತ್ತಿರುವುದನ್ನು ನೋಡಬಹುದು. ಮುಖದಲ್ಲಿ ನಗು ತುಂಬಿದ್ದು, ಕೇಕ್ ನೋಡಿ ಖುಷಿ ಪಟ್ಟಿರುವುದನ್ನು ಕಾಣಬಹುದು. ಇದೇ ವೇಳೆ ಆಕೆಯ ಸಹೋದರಿ ಎಂತಹ ಸುಂದರವಾದ ಕೇಕ್ ಎಂದು ಹೇಳಿರುವುದಿದೆ. ಹಿಂದೆ ತಿರುಗಿ ನೋಡುತ್ತಿದ್ದಂತೆ ಒಡಹುಟ್ಟಿದವಳು ತನ್ನ ಹಿಂದೆ ನಿಂತಿರುವುದು ತನ್ನ ಕಣ್ಣುಗಳಲ್ಲಿ ನಂಬಲು ಸಾಧ್ಯವಾಗಿಲ್ಲ, ಆ ಕ್ಷಣವೇ ಕಣ್ಣು ಒದ್ದೆಯಾಗಿದೆ. ಸಹೋದರಿಯ ಹುಟ್ಟುಹಬ್ಬಕ್ಕೆ ಯುವತಿ ವಿದೇಶದಿಂದ ಬಂದು ಸರ್ಪ್ರೈಸ್ ನೀಡಿರುವುದನ್ನು ನೋಡಬಹುದು. ಈ ಇಬ್ಬರೂ ಸಹೋದರಿಯರ ಪುನರ್ಮಿಲನದ ದೃಶ್ಯವು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಉದ್ಯೋಗಿಗಳಿಗೆ ಸರ್ಪ್ರೈಸ್ ಆಗಿ ಐಫೋನ್‌ ನೀಡಿ ನಗು ಮೂಡಿಸಿದ ಬಾಸ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಯಾರಿಗಾದ್ರೂ ಖುಷಿಯಾಗೋದು ಸಹಜ ಎಂದಿದ್ದಾರೆ. ಇನ್ನೊಬ್ಬರು, ಎಂತಹ ಸುಂದರ ಹಾಗೂ ಹೃದಯ ಸ್ಪರ್ಶಿ ಕ್ಷಣ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ನಿಮ್ಮ ಪ್ರೀತಿ ಬಾಂಧವ್ಯ ಹೀಗೆಯೇ ಇರಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More