Video: ತಂದೆಯ ಶವ ಸುಟ್ಟ ಬೂದಿಯಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ ಯೂಟ್ಯೂಬರ್

"ಸ್ಮೋಕಿಂಗ್ ಮೈ ಡೆಡ್ ಡ್ಯಾಡ್" ಎಂಬ ಶೀರ್ಷಿಕೆಯ ಪಾಡ್‌ಕ್ಯಾಸ್ಟ್ ಸಂಚಿಕೆಯಲ್ಲಿ ನವೆಂಬರ್ 17 ರಂದು ವೀಡಿಯೊ ಪ್ರಸಾರವಾಗಿತ್ತು. ಈ ವೇಳೆ ಈ ತನ್ನ ತಂದೆಯ ಆಸೆಯ ಬಗ್ಗೆ ಹೇಳಿಕೊಂಡಿದ್ದಾಳೆ. ಗಾಂಜಾ ಗಿಡವನ್ನು ಬೆಳೆಸಲು ತನ್ನ ಚಿತಾಭಸ್ಮವನ್ನು ಬಳಸುವಂತೆ ತಂದೆ ಕೇಳಿಕೊಂಡಿದ್ದರು. ತನ್ನ ತಂದೆಯ ಕೋರಿಕೆಯ ಮೇರೆಗೆ ಇದನ್ನು ಮಾಡಿದ್ದೇನೆ ಎಂದು ರೋಸನ್ನಾ ಬಹಿರಂಗಪಡಿಸಿದ್ದಾರೆ.

ಅಮೆರಿಕಾದ ಖ್ಯಾತ ಯೂಟ್ಯೂಬರ್ ಆಗಿರುವ ರೊಸಾನ್ನಾ ಪ್ಯಾನ್ಸಿನೊ ಇತ್ತೀಚಿಗಷ್ಟೇ ತನ್ನ ರಾಡಿಕ್ಯುಲಸ್ ಪಾಡ್‌ಕ್ಯಾಸ್ಟ್‌ನ ಮೊದಲ ಸಂಚಿಕೆಯಲ್ಲಿ ತಮ್ಮ ದಿವಂಗತ ತಂದೆಯ ಕುರಿತು ಮಾತನಾಡಿದ್ದಾಳೆ. ಇಲ್ಲಿ ತನ್ನ ತಂದೆಯ ಶವದ ಸುಟ್ಟ ಬೂದಿಯಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿ, ಅದರ ಎಲೆಯಿಂದ ಸಿಗರೇಟು ಸೇದಿರುವುದನ್ನು ಬಹಿರಂಗಪಡಿಸಿದ್ದಾಳೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

14.6 ಮಿಲಿಯನ್‌ಗಿಂತಲೂ ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಹೊಂದಿರುವ 39 ವರ್ಷದ ಯೂಟ್ಯೂಬರ್ ರೋಸನ್ನಾ ಪ್ಯಾನ್ಸಿನೊ ಅವರು ತಮ್ಮ ತಂದೆಯ ಚಿತಾಭಸ್ಮವನ್ನು ಬಳಸಿ ಬೆಳೆದ ಗಾಂಜಾದಿಂದ ತಯಾರಿಸಿದ ಸಿಗರೇಟನ್ನು ಸೇದುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ವಿದೇಶದಲ್ಲಿ ಓದು, ಐಟಿ ಕಂಪೆನಿಯಲ್ಲಿ ಉದ್ಯೋಗ, ಈಗ ಭಿಕ್ಷಾಟನೆ, ಬೆಂಗಳೂರು ಇಂಜಿನಿಯರ್​​ನ ಹೃದಯ ವಿದ್ರಾವಕ ಕಥೆ

“ಸ್ಮೋಕಿಂಗ್ ಮೈ ಡೆಡ್ ಡ್ಯಾಡ್” ಎಂಬ ಶೀರ್ಷಿಕೆಯ ಪಾಡ್‌ಕ್ಯಾಸ್ಟ್ ಸಂಚಿಕೆಯಲ್ಲಿ ನವೆಂಬರ್ 17 ರಂದು ವೀಡಿಯೊ ಪ್ರಸಾರವಾಗಿತ್ತು. ಈ ವೇಳೆ ಈ ತನ್ನ ತಂದೆಯ ಆಸೆಯ ಬಗ್ಗೆ ಹೇಳಿಕೊಂಡಿದ್ದಾಳೆ. ಗಾಂಜಾ ಗಿಡವನ್ನು ಬೆಳೆಸಲು ತನ್ನ ಚಿತಾಭಸ್ಮವನ್ನು ಬಳಸುವಂತೆ ತಂದೆ ಕೇಳಿಕೊಂಡಿದ್ದರು. ತನ್ನ ತಂದೆಯ ಕೋರಿಕೆಯ ಮೇರೆಗೆ ಇದನ್ನು ಮಾಡಿದ್ದೇನೆ ಎಂದು ರೋಸನ್ನಾ ಬಹಿರಂಗಪಡಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:42 pm, Sat, 23 November 24

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us