ಗ್ಯಾಸ್ ಇಲ್ಲದೇ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು: ಬೆಂಗಳೂರು ಜೀವನಾಡಿ ಸಾರಥಿಗಳಿಗೆ ಸಂಕಷ್ಟ
ಇಸ್ರೆಲ್ ಅಮೆರಿಕಾ-ಇರಾನ್ ಯುದ್ಧದಿಂದಾಗಿ ಭಾರತದಲ್ಲಿ ಗ್ಯಾಸ್ ಅಭಾಯ ಸೃಷ್ಟಿಯಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್‌ಪಿಜಿ (LPG) ಸಮಸ್ಯೆ ಉದ್ಭವಿಸಿದೆ. ಆಟೋ ದುಡಿಮೆಯನ್ನು ನಂಬಿ ಜೀವನ ಮಾಡುತ್ತಿರುವಾಗ ಗ್ಯಾಸ್ ಸಿಗುತ್ತಿಲ್ಲ. ಹೀಗಾಗಿ ಆಟೋವನ್ನು ನಿಲ್ಲಿಸುವ ಸ್ಥಿತಿ ಬಂದಿದ್ದು, ಸಂಸಾರದ ಬಂಡಿ ಸಾಗಿಸಲು ಸಾರಥಿಗಳು ಒದ್ದಾಡುತ್ತಿದ್ದಾರೆ.
ಬೆಂಗಳೂರು, (ಏಪ್ರಿಲ್ 03): ಇಸ್ರೆಲ್ ಅಮೆರಿಕಾ-ಇರಾನ್ ಯುದ್ಧದಿಂದಾಗಿ ಭಾರತದಲ್ಲಿ ಗ್ಯಾಸ್ ಅಭಾವ ಸೃಷ್ಟಿಯಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್‌ಪಿಜಿ (LPG) ಸಮಸ್ಯೆ ಉದ್ಭವಿಸಿದೆ. ಆಟೋ ದುಡಿಮೆಯನ್ನು ನಂಬಿ ಜೀವನ ಮಾಡುತ್ತಿರುವಾಗ ಗ್ಯಾಸ್ ಸಿಗುತ್ತಿಲ್ಲ. ಹೀಗಾಗಿ ಆಟೋವನ್ನು ನಿಲ್ಲಿಸುವ ಸ್ಥಿತಿ ಬಂದಿದ್ದು, ಸಂಸಾರದ ಬಂಡಿ ಸಾಗಿಸಲು ಸಾರಥಿಗಳು ಒದ್ದಾಡುತ್ತಿದ್ದಾರೆ. ಯಾಕಂದ್ರೆ, ಹಗಲು-ರಾತ್ರಿ ಗ್ಯಾಸ್‌ಗಳ ಮುಂದೆ ಕ್ಯೂ ನಿಲ್ಲೋದೇ ಆಯ್ತು. ಗ್ಯಾಸ್ ತುಂಬಿ ಆಟೋ (Auto) ಓಡಿಸೋದೆ ಆಮೇಲಿನ ಮಾತು. ಯಾವ ಬಂಕ್ ಮುಂದೆ ನೋಡಿದ್ರೂ ಕಿಲೋಮೀಟರ್‌ಗಟ್ಟಲೇ ಹನುಮನ ಬಾಲದಂತೆ ಆಟೋಗಳ ಸಾಲು ಸಾಮಾನ್ಯವಾಗಿ ಬಿಟ್ಟಿದೆ. ಯಾವ ಬಂಕ್ ನೋಡಿದ್ರೂ ಕನಿಷ್ಠ 100 ರಿಂದ 200 ಆಟೋಗಳು ಇದ್ದೇ ಇರ್ತವೆ. ಮನೆ ಮಕ್ಕಳು ಬೀದಿಯಲ್ಲಿ ನಿಲ್ಲೋ ಸ್ಥಿತಿ ಬಂದೊದಗಿದೆ.
Published on: Apr 03, 2026 10:18 PM
Follow Us
Latest Videos
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು

