ದೀಪಾವಳಿಗೆ ಅಮುಲ್ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್ಗೆ 2 ರೂ. ಹೆಚ್ಚಳ
ದೀಪಾವಳಿ ಹಬ್ಬದ ಹೊತ್ತಲ್ಲಿ ಅಮುಲ್ನಿಂದ ದರ ಏರಿಕೆಯ ಶಾಕ್ ಎದುರಾಗಿದೆ. ಹಾಲು, ತುಪ್ಪ, ಬೆಣ್ಣೆ ದರ ಹೆಚ್ಚಿಸಿರುವ ಗುಜರಾತ್ನ ಅಮುಲ್ ಸಂಸ್ಥೆಯ ಹಾಲಿನ ದರ ಪ್ರತಿ ಲೀಟರ್ಗೆ 2 ರೂ. ಹೆಚ್ಚಿಸಲಾಗಿದೆ. ಗುಜರಾತ್ನ ಸಹಕಾರಿ ಹಾಲು ಮಾರಾಟ ಒಕ್ಕೂಟದಿಂದ ದರ ಏರಿಕೆ ಮಾಡಲಾಗಿದೆ. 1 ಕೆ.ಜಿ ತುಪ್ಪದ ಪ್ಯಾಕೆಟ್ ದರ 630 ರೂ.ದಿಂದ 680 ರೂ.ಗೆ ಹೆಚ್ಚಿಸಲಾಗಿದೆ. 500 ಗ್ರಾಂ ತುಪ್ಪದ ಪ್ಯಾಕೆಟ್ ದರ 325ರಿಂದ 345 ರೂ.ಗೆ ಏರಿಕೆ ಮಾಡಲಾಗಿದೆ. 500 ಗ್ರಾಂ ಬೆಣ್ಣೆ ಪ್ಯಾಕೆಟ್ ದರ 310ರಿಂದ 325 ರೂ.ಗೆ ಹೆಚ್ಚಿಸಲಾಗಿದೆ. 100 ಗ್ರಾಂ ಬೆಣ್ಣೆ ಪ್ಯಾಕೆಟ್ ದರ 63 ರೂ.ನಿಂದ 66 ರೂ.ಗೆ ಹೆಚ್ಚಳ ಮಾಡಲಾಗಿದೆ.
ನವದೆಹಲಿ, ನವೆಂಬರ್ 4: ದೀಪಾವಳಿ ಹಬ್ಬದ ಹೊತ್ತಲ್ಲಿ ಅಮುಲ್ನಿಂದ ದರ ಏರಿಕೆಯ ಶಾಕ್ ಎದುರಾಗಿದೆ. ಹಾಲು, ತುಪ್ಪ, ಬೆಣ್ಣೆ ದರ ಹೆಚ್ಚಿಸಿರುವ ಗುಜರಾತ್ನ ಅಮುಲ್ ಸಂಸ್ಥೆಯ ಹಾಲಿನ ದರ ಪ್ರತಿ ಲೀಟರ್ಗೆ 2 ರೂ. ಹೆಚ್ಚಿಸಲಾಗಿದೆ. ಗುಜರಾತ್ನ ಸಹಕಾರಿ ಹಾಲು ಮಾರಾಟ ಒಕ್ಕೂಟದಿಂದ ದರ ಏರಿಕೆ ಮಾಡಲಾಗಿದೆ. 1 ಕೆ.ಜಿ ತುಪ್ಪದ ಪ್ಯಾಕೆಟ್ ದರ 630 ರೂ.ದಿಂದ 680 ರೂ.ಗೆ ಹೆಚ್ಚಿಸಲಾಗಿದೆ. 500 ಗ್ರಾಂ ತುಪ್ಪದ ಪ್ಯಾಕೆಟ್ ದರ 325ರಿಂದ 345 ರೂ.ಗೆ ಏರಿಕೆ ಮಾಡಲಾಗಿದೆ. 500 ಗ್ರಾಂ ಬೆಣ್ಣೆ ಪ್ಯಾಕೆಟ್ ದರ 310ರಿಂದ 325 ರೂ.ಗೆ ಹೆಚ್ಚಿಸಲಾಗಿದೆ. 100 ಗ್ರಾಂ ಬೆಣ್ಣೆ ಪ್ಯಾಕೆಟ್ ದರ 63 ರೂ.ನಿಂದ 66 ರೂ.ಗೆ ಹೆಚ್ಚಳ ಮಾಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

