AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ ಎಂದ ಸಚಿವ ಯುಟಿ ಖಾದರ್

ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ ಎಂದ ಸಚಿವ ಯುಟಿ ಖಾದರ್

ವಿನಯ್​ ಕಾಶಪ್ಪನವರ್​
| Edited By: |

Updated on:Oct 10, 2026 | 6:35 PM

Share

ಮುಖ್ಯಾಂಶಗಳು

  • ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕರೆಂಟ್ ಇಲ್ಲದ ವಿಚಾರ
  • ಬಾಣಂತಿಯರು ಸೇರಿದಂತೆ ಹಸುಗೂಸುಗಳು ಪರದಾಟ
  • ತನಿಖೆ ಮಾಡುತ್ತೇವೆ ಎಂದ ಸಚಿವ ಯುಟಿ ಖಾದರ್

ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ಉಂಟಾದ ಸಮಸ್ಯೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ. ಕರೆಂಟ್ ಹೋದಾಗ ಜನರೇಟರ್ ಅಥವಾ ಯುಪಿಎಸ್ ಏಕೆ ಕಾರ್ಯನಿರ್ವಹಿಸಲಿಲ್ಲ ಎಂದು ತನಿಖೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ವೈದ್ಯರ ಸಮಯೋಚಿತ ಕ್ರಮವನ್ನು ಶ್ಲಾಘಿಸಿದ ಸಚಿವರು, ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಿದ್ದಾರೆ.

ಬಳ್ಳಾರಿ, ಅಕ್ಟೋಬರ್​ 10: ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್​​ ಕಡಿತದಿಂದ ರೋಗಿಗಳು ಪರದಾಡಿದ್ದರು. ಬಾಣಂತಿಯರು ಸೇರಿದಂತೆ ಹಸುಗೂಸು ಇಡೀ ರಾತ್ರಿ ಮೊಬೈಲ್ ಟಾರ್ಚ್​ನಲ್ಲೇ ಕಳೆದಿದ್ದರು. ಸದ್ಯ ಈ ವಿಚಾರ ಆರೋಗ್ಯ ಸಚಿವ ಯುಟಿ ಖಾದರ್​ ಅವರ ಗಮನಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಟಿವಿ9 ಜೊತೆಗೆ ಮಾತನಾಡಿರುವ ಅವರು, ‘ಅವತ್ತು ಆಪರೇಷನ್ ಮಾಡುತ್ತಿದ್ದ ವೇಳೆ ಕರೆಂಟ್ ಹೋಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನರೇಟರ್ ವ್ಯವಸ್ಥೆ ಇರಬೇಕು, ಆದರೆ ಏಕೆ ಜನರೇಟರ್ ವ್ಯವಸ್ಥೆ ಮಾಡಿಲ್ಲವೆಂದು ತನಿಖೆ ಮಾಡುತ್ತೇವೆ’ ಎಂದರು. ‘ವೈದ್ಯರು ರೋಗಿಗೆ ಚಿಕಿತ್ಸೆ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ವ್ಯವಸ್ಥೆ ಮಾಡಿದ್ದೇವೆ. ಕರೆಂಟ್ ಹೋದಾಗ ಏಕೆ ಜನರೇಟರ್, ಯುಪಿಎಸ್​ ಆನ್ ಆಗಿಲ್ಲವೆಂಬ’ ಬಗ್ಗೆ ತನಿಖೆ ಮಾಡುತ್ತೇವೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Oct 10, 2026 06:35 PM

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More