ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ನಾನು ಆಂತರಿಕ ವಿಷಯಗಳನ್ನು ಯಾವತ್ತೂ ಸಾರ್ವಜನಿಕವಾಗಿ ಮಾತಾಡಲ್ಲ: ಅಶೋಕ

ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ನಾನು ಆಂತರಿಕ ವಿಷಯಗಳನ್ನು ಯಾವತ್ತೂ ಸಾರ್ವಜನಿಕವಾಗಿ ಮಾತಾಡಲ್ಲ: ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 04, 2025 | 6:55 PM

ಬಿಜೆಪಿ ನಾಯಕರ ಒಂದು ತಂಡ ಈಗಾಗಲೇ ದೆಹಲಿಯ ವರಿಷ್ಠರೊಂದಿಗೆ ಮಾತಾಡಿದೆ, ತಾನೂ ಸಹ ಅವರ ಸಂಪರ್ಕದಲ್ಲಿದ್ದೇನೆ, ರಾಜ್ಯ ಬಿಜೆಪಿ ಘಟಕದ ಪ್ರತಿಯೊಂದು ವಿದ್ಯಮಾನವನನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ, ಮುಂದಿನ 15ದಿನಗಳಲ್ಲಿ ನಡ್ಡಾ ಜೀ ಮತ್ತು ಅಮಿತ್ ಶಾ ಜೀ ಅವರು ಇಲ್ಲಿರುವ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಲಿದ್ದಾರೆ ಎಂದು ಅಶೋಕ ಹೇಳಿದರು.

ಹಾಸನ: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರು ತಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷದ ಆಂತರಿಕ ವಿಷಯಗಳನ್ನು ಪಕ್ಷದ ಚೌಕಟ್ಟಿನೊಳಗೆ ಮಾತಾಡುತ್ತೇನೆಯೇ ಹೊರತು ಸಾರ್ವಜನಿಕವಾಗಿ ಯಾವತ್ತೂ ಮಾತಾಡಲ್ಲ, ದೆಹಲಿಯ ವರಿಷ್ಠರ ಜೊತೆ ನಿರಂತರವಾಗಿ ಸಂಪರ್ಜದಲ್ಲಿದ್ದು ಅವರಿಗೆ ಹೇಳಬೇಕಿರುವ ವಿಷಯಗಳನ್ನೆಲ್ಲ ಹೇಳಿದ್ದೇನೆ ಎಂದು ಹೇಳಿದರು. ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಜೀ ಅವರು ಬೆಂಗಳೂರಿಗೆ ಬಂದಾಗ ದಿನವಿಡೀ ಅವರೊಂದಿಗಿದ್ದರೂ ಪ್ರತ್ಯೇಕವಾಗಿ ಮಾತಾಡಲು ಅರ್ಧ ಗಂಟೆ ಸಮಯ ನೀಡಿದ್ದರು, ಅಗಲೂ ಅವರಿಗೆ ರಾಜ್ಯದ ಸ್ಥಿತಿಗತಿಗಳನ್ನು ವಿವರಿಸಿದ್ದ್ದೇನೆ ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಶೋಕಣ್ಣ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಯೋಚಿಸಲಿ, ಬೇರೆಯವರ ತಟ್ಟೆಯಲ್ಲಿನ ನೊಣದ ಬಗ್ಗೆ ಬೇಡ: ಲಕ್ಷ್ಮಣ ಸವದಿ