AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ಯಾಜ್ಯದಲ್ಲಿ ಸಿಕ್ಕ ಪ್ರಿಸ್ಕ್ರಿಪ್ಷನ್ ಚೀಟಿ ಆಧಾರದ ಮೇಲೆ ಕ್ಲಿನಿಕ್ ಪತ್ತೆ ಮಾಡಿ 15 ಸಾವಿರ ರೂ. ದಂಡ

ತ್ಯಾಜ್ಯದಲ್ಲಿ ಸಿಕ್ಕ ಪ್ರಿಸ್ಕ್ರಿಪ್ಷನ್ ಚೀಟಿ ಆಧಾರದ ಮೇಲೆ ಕ್ಲಿನಿಕ್ ಪತ್ತೆ ಮಾಡಿ 15 ಸಾವಿರ ರೂ. ದಂಡ

ಅರುಣ್ ಕುಮಾರ್​ ಆರ್​.
| Edited By: |

Updated on: Oct 13, 2026 | 8:11 PM

Share

ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ. ದಂಡ ವಿಧಿಸಲಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ವಿರುದ್ಧ ಕಾರ್ಯಚರಣೆ ನಡೆಸಿದ್ದು, ಈ ವೇಳೆ ಬಿಟಿಎಂ ಲೇಔಟ್ ವಿಭಾಗದ ಈಜಿಪುರ–ಮಂಗಮ್ಮನಪಾಳ್ಯ ಮುಖ್ಯರಸ್ತೆಯಲ್ಲಿ ತ್ಯಾಜ್ಯ ಪತ್ತೆಯಾಗಿದೆ.ಔಷಧಿಗಳ ಪೊಟ್ಟಣ, ವೈದ್ಯಕೀಯ ತ್ಯಾಜ್ಯ ಹಾಗೂ ಮಿಶ್ರ ಕಸವನ್ನು ರಸ್ತೆಬದಿ ಎಸೆಯಲಾಗಿದ್ದು, ಸ್ಥಳದಲ್ಲಿ ಸಿಕ್ಕ ಪ್ರಿಸ್ಕ್ರಿಪ್ಷನ್ ಚೀಟಿ, ದಾಖಲೆಗಳಿಂದ ಅಲ್-ಶಿಫಾ ಪಾಲಿಕ್ಲಿನಿಕ್​​ಗೆ ಸೇರಿದ ತ್ಯಾಜ್ಯ ಎನ್ನುವುದು​​​ ಪತ್ತೆಯಾಗಿದೆ

ಬೆಂಗಳುರು, (ಅಕ್ಟೋಬರ್ 13): ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ. ದಂಡ ವಿಧಿಸಲಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ವಿರುದ್ಧ ಕಾರ್ಯಚರಣೆ ನಡೆಸಿದ್ದು, ಈ ವೇಳೆ ಬಿಟಿಎಂ ಲೇಔಟ್ ವಿಭಾಗದ ಈಜಿಪುರ–ಮಂಗಮ್ಮನಪಾಳ್ಯ ಮುಖ್ಯರಸ್ತೆಯಲ್ಲಿ ತ್ಯಾಜ್ಯ ಪತ್ತೆಯಾಗಿದೆ.ಔಷಧಿಗಳ ಪೊಟ್ಟಣ, ವೈದ್ಯಕೀಯ ತ್ಯಾಜ್ಯ ಹಾಗೂ ಮಿಶ್ರ ಕಸವನ್ನು ರಸ್ತೆಬದಿ ಎಸೆಯಲಾಗಿದ್ದು, ಸ್ಥಳದಲ್ಲಿ ಸಿಕ್ಕ ಪ್ರಿಸ್ಕ್ರಿಪ್ಷನ್ ಚೀಟಿ, ದಾಖಲೆಗಳಿಂದ ಅಲ್-ಶಿಫಾ ಪಾಲಿಕ್ಲಿನಿಕ್​​ಗೆ ಸೇರಿದ ತ್ಯಾಜ್ಯ ಎನ್ನುವುದು​​​ ಪತ್ತೆಯಾಗಿದೆ. ಹೀಗಾಗಿ ಆಯುಕ್ತ ಕೆ. ಎನ್. ರಮೇಶ್ ಅವರು ಸ್ಥಳದಲ್ಲೇ ಕ್ಲಿನಿಕ್​​ಗೆ 15,000 ದಂಡ ಹಾಕಿದ್ದಾರೆ. ಅಲ್ಲದೇ ವೈದ್ಯಕೀಯ ತ್ಯಾಜ್ಯವನ್ನು ಅಧಿಕೃತ ಏಜೆನ್ಸಿಗಳ ಮೂಲಕವೇ ವಿಲೇವಾರಿ ಮಾಡಲು ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅರುಣ್ ಕುಮಾರ್​ ಆರ್​.
ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More