‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭದ ದಿನಗಳಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಚರ್ಚೆಯಲ್ಲಿ ಇದೆ. ಜಗದೀಶ್ ಹಾಗೂ ರಂಜಿತ್ ಅವರು ಬಡಿದಾಡಿಕೊಂಡು ದೊಡ್ಮನೆಯಿಂದ ಔಟ್ ಆದರು. ಆ ವಾರ ಭರ್ಜರಿ ಟಿಆರ್ಪಿ ಸಿಕ್ಕಿತ್ತು. ಸುದೀಪ್ ಅವರು ತಾಯಿಯನ್ನು ಕಳೆದುಕೊಂಡ ಬಳಿಕ ಒಂದು ವಾರ ಬಿಗ್ ಬಾಸ್ ವೇದಿಕೆ ಏರಿರಲಿಲ್ಲ. ಆಗ ಟಿಆರ್ಪಿ ಕುಗ್ಗಿತ್ತು. ಅವರು ಮರಳಿದ ಬಳಿಕ ಬಿಗ್ ಬಾಸ್ ಟಿಆರ್ಪಿ ಅಲ್ಲಿ ಏರಿಕೆ ಕಂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಸುದೀಪ್ ಅವರ ಕೊನೆಯ ಸೀಸನ್ ಎನ್ನಲಾಗಿದೆ. ಈ ಬಗ್ಗೆ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಅವರು ಈ ವಾರ ಖಡಕ್ ಆಗಿ ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ವಾರದ ದಿನಗಳಲ್ಲಿ 7.4 ಟಿವಿಆರ್, ಶನಿವಾರ 8.7 ಟಿವಿಆರ್ ಹಾಗೂ ಭಾನುವಾರ 9.1 ಟಿವಿಆರ್ ಸಿಕ್ಕಿದೆ. ಇದು ನಗರ ಭಾಗದ ಟಿಆರ್ಪಿ ಮಾತ್ರ. ಒಂದೊಮ್ಮೆ ರಾಜ್ಯದ ಸಂಪೂರ್ಣ ಟಿಆರ್ಪಿ ಸೇರಿದರೆ ಇನ್ನೂ ಹೆಚ್ಚಲಿದೆ.
ಈಗ ಹೊರ ಬಿದ್ದಿರೋದು ಕಳೆದ ವಾರದ ಟಿಆರ್ಪಿ ಅಲ್ಲ. ಅದಕ್ಕೂ ಹಿಂದಿನ ವಾರದ ಟಿಆರ್ಪಿ. ಕಳೆದ ವಾರ ಚೈತ್ರಾ ಅವರು ಆಟ ಆಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಆ ವಾರದ ಟಿಆರ್ಪಿ ಖಂಡಿತವಾಗಿಯೂ ಎರಡಂಕಿ ದಾಟಲಿದೆ ಎಂಬುದು ಅನೇಕರ ಊಹೆ.
ಇದನ್ನೂ ಓದಿ: ‘ನಿಮ್ಮಿಂದ ಟಿಆರ್ಪಿ ಬರೊಲ್ಲ’: ಸ್ಪರ್ಧಿಗಳ ಭ್ರಮೆ ದೂರ ಮಾಡಿದ ಸುದೀಪ್
ಬಿಗ್ ಬಾಸ್ ಈಗಾಗಲೇ 50 ದಿನಗಳನ್ನು ಪೂರ್ಣಗೊಳಿಸಿದೆ. ಈ ಬಾರಿ 50ನೇ ದಿನಕ್ಕೆ ಇಬ್ಬರು ವೈಲ್ಡ್ ಕಾರ್ಡ್ ಆಟಗಾರರ ಎಂಟ್ರಿ ಆಗಿದೆ. ಇದರಿಂದ ಆಟದ ರೋಚಕತೆ ಮತ್ತಷ್ಟು ಹೆಚ್ಚಿದೆ. ಶೋಭಾ ಶೆಟ್ಟಿ ಅವರು ಜೋರು ಧ್ವನಿಯಲ್ಲಿ ಮಾತನಾಡಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದ್ದಾರೆ.
ಇನ್ನು ಧಾರಾವಾಹಿಗಳ ಟಿಆರ್ಪಿ ವಿಚಾರಕ್ಕೆ ಬಂದರೆ, ಮೊದಲ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಎರಡನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ ಇದೆ. ಈ ಮೂರು ಧಾರಾವಾಹಿಗಳು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿವೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:01 pm, Thu, 21 November 24