AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಪೂರ್ಣ ಬತ್ತಿದ ಕಾವೇರಿ ನದಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರದ ಭೀತಿ

ಸಂಪೂರ್ಣ ಬತ್ತಿದ ಕಾವೇರಿ ನದಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರದ ಭೀತಿ

Gopal AS
| Edited By: |

Updated on: Jun 18, 2026 | 6:26 PM

Share

ಕಾವೇರಿ ನದಿಯು ಕೊಡಗಿನಲ್ಲಿ ತೀವ್ರ ಬರ ಎದುರಿಸುತ್ತಿದೆ. ಜೂನ್‌ನಲ್ಲಿ ಸಾಮಾನ್ಯವಾಗಿ 10-15 ಅಡಿ ಹರಿಯಬೇಕಿದ್ದ ನದಿ ಈಗ ಕೇವಲ ಒಂದು ಅಡಿ ನೀರಿಗೆ ಸೀಮಿತವಾಗಿದೆ. ಶೇಕಡ 60ರಷ್ಟು ಮಳೆ ಕೊರತೆಯಿಂದ ಕುಡಿಯುವ ನೀರು, ಕೃಷಿ ಹಾಗೂ ಕರ್ನಾಟಕ-ತಮಿಳುನಾಡು ನಡುವೆ ಜಲ ವಿವಾದದ ಭೀತಿ ಹೆಚ್ಚಿದೆ. ಕೆಆರ್‌ಎಸ್, ಹಾರಂಗಿ ಜಲಾಶಯಗಳಲ್ಲೂ ನೀರಿನ ಕೊರತೆಯಿದೆ.

ಮಡಿಕೇರಿ, ಜೂನ್​​ 18: ರಾಜ್ಯದಲ್ಲಿ ಶೇಕಡ 60ರಷ್ಟು ಮಳೆ ಕೊರತೆ ಆತಂಕಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಜೂನ್ ತಿಂಗಳಲ್ಲಿ ಧಾರಾಕಾರ ಮಳೆ ನಿರೀಕ್ಷಿಸಲಾಗಿದ್ದ ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ, ನದಿ ಹರಿವು ಗಣನೀಯವಾಗಿ ಕುಸಿದಿದೆ. ಕೊಡಗು-ಮೈಸೂರು ಗಡಿಯಲ್ಲಿರುವ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ಸ್ಥಿತಿಗತಿ ಪರಿಶೀಲಿಸಿದಾಗ, ಸಾಮಾನ್ಯವಾಗಿ 10-15 ಅಡಿ ಹರಿಯಬೇಕಿದ್ದ ನದಿ ಈಗ ಕೇವಲ ಅರ್ಧದಿಂದ ಒಂದು ಅಡಿ ನೀರಿಗೆ ಸೀಮಿತವಾಗಿದೆ. ನದಿಯ ಒಡಲು ಕಲ್ಲುಗಳಿಂದ ಕೂಡಿದ್ದು, ಜಲಮಾಪಕದಲ್ಲಿ ನೀರು ಶೂನ್ಯ ಮಟ್ಟವನ್ನು ತಲುಪಿದೆ. ಕಾವೇರಿ ಕೊಳ್ಳದಲ್ಲಿನ ಮಳೆಯ ತೀವ್ರ ಅಭಾವವೇ ಈ ಪರಿಸ್ಥಿತಿಗೆ ಕಾರಣವಾಗಿದ್ದು ಇದರಿಂದ ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ಕಾವೇರಿ ನದಿ ನೀರನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಲಿದೆ. ಕೃಷಿ ಚಟುವಟಿಕೆಗಳಿಗೂ ನೀರು ಸಿಗದೆ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಕಾವೇರಿ ನದಿಯ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್ ಮತ್ತು ಹಾರಂಗಿ ಸಹ ತುಂಬದೆ ಇರುವುದರಿಂದ ಮುಂಬರುವ ದಿನಗಳಲ್ಲಿ ಜಲಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us