ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಟ ದರ್ಶನ್ ವಿಚಾರದಲ್ಲಿ ನನ್ನ ಹತ್ತಿರ ಯಾರೂ ಬಂದಿಲ್ಲ. ಬಿಜೆಪಿಗರು ಸುಮ್ಮನೇ ಹೇಳುತ್ತಾರೆ. ನಾವು ಕಾನೂನು ಪ್ರಕಾರ ಕೆಲಸ ಮಾಡುತ್ತೇವೆ. ಕಾನೂನು ಬಿಟ್ಟು ನಾವು ಏನೂ ಮಾಡುವುದಿಲ್ಲ ಎಂದಿದ್ದಾರೆ. ಸರ್ಕಾರದ ಪ್ರಭಾವಿ ಸಚಿವರು ದರ್ಶನ್ ಮತ್ತು ಪವಿತ್ರಾಗೌಡ ಬಚಾವ್ ಮಾಡಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಮೈಸೂರು, ಜೂನ್ 14: ದರ್ಶನ್ (Darshan) ಆ್ಯಂಡ್ ಗ್ಯಾಂಗ್ ವಿರುದ್ಧದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಹಜವಾಗೇ ರಾಜಕೀಯಕ್ಕೆ ತಿರುಗಿದೆ. ಕೇವಲ ಮಾತಿನ ಜಟಾಪಟಿ ಅಷ್ಟೇ ಅಲ್ಲ, ಸರ್ಕಾರದ ಪ್ರಭಾವಿ ಸಚಿವರು ದರ್ಶನ್ ಮತ್ತು ಪವಿತ್ರಾಗೌಡ ಬಚಾವ್ ಮಾಡಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಟ ದರ್ಶನ್ ವಿಚಾರದಲ್ಲಿ ನನ್ನ ಹತ್ತಿರ ಯಾರೂ ಬಂದಿಲ್ಲ. ಬಿಜೆಪಿಗರು ಸುಮ್ಮನೇ ಹೇಳುತ್ತಾರೆ. ನಾವು ಕಾನೂನು ಪ್ರಕಾರ ಕೆಲಸ ಮಾಡುತ್ತೇವೆ. ಕಾನೂನು ಬಿಟ್ಟು ನಾವು ಏನೂ ಮಾಡುವುದಿಲ್ಲ ಎಂದಿದ್ದಾರೆ. ಇನ್ನು ಪೊಲೀಸರು ಯಾವ ಕಾರಣಕ್ಕೆ ಶಾಮಿಯಾನ ಹಾಕಿದ್ದಾರೆ ಗೊತ್ತಿಲ್ಲ. ಸಾಮಾನ್ಯ ಜನರಿಗೆ ತೊಂದರೆ ಆದ ಬಗ್ಗೆ ಯಾರೂ ದೂರು ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಅನ್ನಪೂರ್ಣೇಶ್ವರಿನಗರ ಠಾಣೆಗೆ ಹಾಕಿರುವ ಶಾಮಿಯಾನ ತೆರವಿಗೆ ವಂದೇಮಾತರಂ ಸಂಘಟನೆ ರಾಜ್ಯಾಧ್ಯಕ್ಷ ಶಿವಕುಮಾರ ನಾಯಕ್ ಮನವಿ ಮಾಡಿದ್ದಾರೆ. ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿರುವುದು ನಗೆಪಾಟಲಿಗೀಡಾಗಿದೆ. ಕೂಡಲೇ ಶಾಮಿಯಾನ ತೆರವಿಗೆ ಒತ್ತಾಯಿಸಿ ಇನ್ಸ್ಪೆಕ್ಟರ್ಗೆ ಮನವಿ ನೀಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.