Bengaluru Stampede; ಕಾಲ್ತುಳಿತ, ಜನರ ಸಾವಿಗೆ ಸಿಎಂ, ಡಿಸಿಎಂ ಮತ್ತು ಗೃಹ ಸಚಿವ ಮಾತ್ರ ಕಾರಣ: ಭಾಸ್ಕರ್ ರಾವ್

Updated on: Jun 07, 2025 | 7:12 PM

ಅರ್​ಸಿಬಿ ಒಂದು ಕ್ಲಬ್ ಅಷ್ಟೇ, ಅದು ಗೆದ್ದಿದ್ದು ರಾಷ್ಟ್ರೀಯ ಪದಕವೂ ಅಲ್ಲ, ರಾಜ್ಯ ಪದಕವೂ ಅಲ್ಲ, ಶಿವಕುಮಾರ್ ತಾನು ತಂಡದ ಆಟಗಾರನಂತೆ ವರ್ತಿಸುತ್ತಿದ್ದರು, ಏರ್ಪೋರ್ಟ್​ನಲ್ಲಿ ಅವರು, ವಿಧಾನ ಸೌಧದ ಬಳಿ ಅವರು ಮತ್ತು ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಕಪ್ ಎತ್ತು ಅದಕ್ಕೆ ಮುತ್ತಿಕ್ಕುತ್ತಿದ್ದಾರೆ! ಮುಖ್ಯಮಂತ್ರಿಯವರಿಗೆ ಇದೆಲ್ಲ ಗೊತ್ತಿದ್ದರೂ ಸುಮ್ಮನಿದ್ದಾರೆ ಎಂದು ಭಾಸ್ಕರ್ ರಾವ್ ಹೇಳಿದರು.

ಮೈಸೂರು, ಜೂನ್ 7: ಸರ್ಕಾರಕ್ಕೆ ಹೆಚ್ಚು ವಿಶ್ವಾಸವಿರುವ ಪೊಲೀಸ್ ಅಧಿಕಾರಿಯನ್ನೇ ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತದೆ, ಅಂಥದೊಂದು ಅಭಯಹಸ್ತವನ್ನೇ ಕಡಿದು ಹಾಕಿದರೆ ಸರಕಾರ ಜನತೆಗೆ ಏನು ಸಂದೇಶ ಕೊಟ್ಟಂತಾಗುತ್ತದೆ ಎಂದು ಬಿಜೆಪಿ ಧುರೀಣ ಮತ್ತು ಬೆಂಗಳೂರಿನ ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ (Bhaskar Rao) ಹೇಳಿದರು. ದೇಶದಲ್ಲಿ ಎಷ್ಟೋ ಕಡೆ ಕಾಲ್ತುಳಿತದ ಪ್ರಸಂಗಗಳು ನಡೆಯುತ್ತವೆ, ಅದರೆ ಯಾವ ಮುಖ್ಯಮಂತ್ರಿಯೂ ತನ್ನ ಪೊಲೀಸ್ ಕಮೀಷನರ್ ಅನ್ನು ಮಟ್ಟ ಹಾಕೋದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ ನಡೆಯಲು ಮತ್ತು ಜನ ಸಾಯಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರೇ ಕಾರಣ, ಪರಮೇಶ್ವರ್ ಅವರಿಗೆ ಸೆನ್ಸ್​ ಅಫ್​ ಅಸ್ಸೆಸ್​ಮೆಂಟ್ ಅನ್ನೋದೇ ಇಲ್ಲ ಎಂದು ಭಾಸ್ಕರ್ ರಾವ್ ಕಿಡಿ ಕಾರಿದರು.

ಇದನ್ನೂ ಓದಿ:  Bengaluru Stampede: ನನ್ನ ಮಗನ ಸಾವಿಗೆ ಸರ್ಕಾರವೇ ಹೊಣೆ, ಪೊಲೀಸರದ್ದೇನೂ ತಪ್ಪಿಲ್ಲ: ಡಿಟಿ ಲಕ್ಷ್ಮಣ, ಭೂಮಿಕ್ ತಂದೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ