AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶವಂತಪುರ APMC ಆವರಣದಲ್ಲಿ ತಿಂಡಿ ಸವಿದ ಸಿಎಂ ಡಿಕೆಶಿ: ಪುಟ್ಟ ಹೋಟೆಲ್​​ನ ಮಾಲೀಕನಿಗೆ ಪಾವತಿಸಿದ ಹಣ ಎಷ್ಟು ಗೊತ್ತಾ?

ಯಶವಂತಪುರ APMC ಆವರಣದಲ್ಲಿ ತಿಂಡಿ ಸವಿದ ಸಿಎಂ ಡಿಕೆಶಿ: ಪುಟ್ಟ ಹೋಟೆಲ್​​ನ ಮಾಲೀಕನಿಗೆ ಪಾವತಿಸಿದ ಹಣ ಎಷ್ಟು ಗೊತ್ತಾ?

ಶಿವಪ್ರಸಾದ್​ ಬಿ.
| Edited By: |

Updated on: Sep 08, 2026 | 11:55 AM

Share

ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ ನೀಡಿದ್ದು, ರೈತರು ಮತ್ತು ವರ್ತಕರೊಂದಿಗೆ ಮಾರುಕಟ್ಟೆ ಸ್ಥಿತಿ, ತೂಕದಲ್ಲಿ ಮೋಸದ ಕುರಿತು ಮಾಹಿತಿ ಪಡೆದಿದ್ದಾರೆ. ಈ ವೇಳೆ ಮಾರುಕಟ್ಟೆ ಆವರಣದ ಪುಟ್ಟ ಹೋಟೆಲ್‌ನಲ್ಲಿ ಸರಳ ಉಪಾಹಾರ ಸೇವಿಸುವ ಮೂಲಕ ಸಿಎಂ, ಸಾರ್ವಜನಿಕರೊಂದಿಗೆ ಬೆರೆತರು. ಇಡ್ಲಿ, ಚಿತ್ರಾನ್ನದ ಬೆಲೆ ಹಾಗೂ ಹೋಟೆಲ್ ಮಾಲೀಕರ ದಿನನಿತ್ಯದ ವ್ಯಾಪಾರದ ಬಗ್ಗೆಯೂ ವಿಚಾರಿಸಿದರು.

ಬೆಂಗಳೂರು, ಸೆಪ್ಟೆಂಬರ್​​ 08: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿಢೀರ್ ಭೇಟಿ ನೀಡಿದ್ದು, ರೈತರು ಮತ್ತು ವ್ಯಾಪಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ APMC ಆವರಣದಲ್ಲಿರುವ ಪುಟ್ಟ ಹೋಟೆಲ್​​ಗೆ ಭೇಟಿ ನೀಡಿದ ಅವರು ಇಡ್ಲಿ, ಚಟ್ನಿ, ಸಾಂಬಾರ್ ಮತ್ತು ಚಿತ್ರಾನ್ನವನ್ನು ಸವಿದಿದ್ದಾರೆ. ಬ್ರೇಕ್​ಫಾಸ್ಟ್ ಬಳಿಕ ಮೂವರ ಬಿಲ್​​ನ ಡಿಕೆಶಿ ಅವರೇ ಪಾವತಿಸಿದ್ದು, ಹೋಟೆಲ್ ಮಾಲೀಕರನ ಬಳಿ ದಿನದ ವ್ಯಾಪಾರದ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us