ರಾಧಿಕ ಕರಿಯ ಅಂತ ಕರೆದ್ರೆ ಓಕೆ, ಜಮೀರ್ ಕರೆದ್ರೆ ಯಾಕೆ? ವಿವಾದದ ಕಿಡಿ ಹೊತ್ತಿಸಿದ ತೇಜಸ್ವಿನಿ ಗೌಡ

ರಾಧಿಕ ಕರಿಯ ಅಂತ ಕರೆದ್ರೆ ಓಕೆ, ಜಮೀರ್ ಕರೆದ್ರೆ ಯಾಕೆ? ವಿವಾದದ ಕಿಡಿ ಹೊತ್ತಿಸಿದ ತೇಜಸ್ವಿನಿ ಗೌಡ

ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on:Nov 19, 2024 | 9:42 PM

ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರಿಗೆ ಕರಿಯ ಎಂದು ಕರೆದಿರುವುದು ಭಾರೀ ವಿವಾದಕ್ಕೀಡಾಗಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಜಮೀರ್ ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕರೇ ಖಂಡಿಸಿ ಈ ಬಗ್ಗೆ ಹೈಕಮಾಂಡ್​ ದೂರು ನೀಡಿದ್ದಾರೆ. ಇದರ ಮಧ್ಯ ಇದೀಗ ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ಮತ್ತೆ ಇದನ್ನು ಕೆದಕಿ ವಿವಾದದ ಸೃಷ್ಟಿಸಿದ್ದಾರೆ.

ಬೆಂಗಳೂರು, (ನವೆಂಬರ್ 19): ‘ಕಾಲಾ(ಕರಿಯ) ಕುಮಾರಸ್ವಾಮಿ’ ಎನ್ನುವ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹಲ್​ಚಲ್​ ಎಬ್ಬಿಸಿದೆ. ಕೇಂದ್ರ ಸಚಿವ ಕುಮಾರಸ್ವಾಮಿಗೆ ಕರಿಯ ಕುಮಾರಸ್ವಾಮಿ ಎಂದು ಜಮೀರ್ ಹೇಳಿಕೆ ತೀವ್ರ ಆಕ್ರೋಶಗಳು ವ್ಯಕ್ತವಾಗಿವೆ. ಸ್ವತಃ ಕಾಂಗ್ರೆಸ್ ನಾಯಕರೇ ಖಂಡಿಸಿದ್ದಾರೆ. ಅಷ್ಟೇ ಅಲ್ಲ ಜಮೀರ್ ವಿರುದ್ಧ ಹೈಕಮಾಂಡ್​ಗೆ ದೂರು ನೀಡಲಾಗಿದೆ. ಇದೆಲ್ಲ ತಣ್ಣಗಾಗುವಷ್ಟರಲ್ಲೇ ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ಈ ವಿವಾದದಲ್ಲಿ ಮಧ್ಯ ಪ್ರವೇಶಿಸಿದ್ದು, ರಾಧಿಕ ಕರಿಯ ಅಂತ ಕರೆದ್ರೆ ಓಕೆ. ಆದ್ರೆ, ಜಮೀರ್ ಕರೆದ್ರೆ ಯಾಕೆ ಎಂದು ಹೇಳುವ ಮೂಲಕ ವಿವಾದದ ಕಿಡಿಹೊತ್ತಿಸಿದ್ದಾರೆ.

ಮೈಸೂರಿನಲ್ಲಿಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ತೇಜಸ್ವಿನಿ ಗೌಡ, ಸಂದರ್ಶನದಲ್ಲಿ ನಿಮ್ಮನ್ನ ಕುಮಾರಸ್ವಾಮಿ ಏನೆಂದು ಕರೆಯುತ್ತಾರೆ ಅಂತ ಕೇಳುತ್ತಾರೆ. ಅದಕ್ಕೆ ಚಿನ್ನು ಅಂತ ಕರೆಯುತ್ತಾರೆ ಅಂತಾರೆ. ನೀವು ಏನಂತ ಕರೆಯುತ್ತೀರಾ ಅಂತ ಕೇಳುತ್ತಾರೆ. ಅದಕ್ಕೆ ಕರಿಯ ಅಂತ ಕರೆಯುತ್ತೇನೆ ಎಂದು ಹೇಳುತ್ತಾರೆ ಎಂದು ಹಳೇ ವಿಚಾರಗಳನ್ನು ಹೇಳಿ ಸಚಿವ ಜಮೀರ್ ಅಹಮ್ಮದ್ ಖಾನ್​ ಅವರನ್ನು ಸಮರ್ಥಿಕೊಳ್ಳುವ ಭರದಲ್ಲಿ ವಿವಾದ ಸೃಷ್ಟಿಸಿದ್ದಾರೆ.

Published on: Nov 19, 2024 09:35 PM