ಮಕ್ಕಳ ಜೊತೆ ರೈಲಿನಲ್ಲಿ ಪ್ರಯಾಣ ಮಾಡೋ ಪೋಷಕರೇ ಎಚ್ಚರ! ಒಳ್ಳೆಯವರಂತೆ ಪರಿಚಯವಾಗಿ ಮಗು ಕಿಡ್ನಾಪ್

ಮೂರು ವರ್ಷದ ಮಗು ಜೊತೆ ರೈಲಿಯಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯನ್ನು ಪರಿಚಯ ಮಾಡಿಕೊಂಡ ಮತ್ತೊಂದು ದಂಪತಿ ಮಗುವಿಗೆ ಬಿಸ್ಕೆಟ್ ಕೊಟ್ಟು ಒಳ್ಳೆಯವರಂತೆ ವರ್ತಿಸಿದ್ದರು. ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಮಗುವಿನ ಸಮೇತ ದಂಪತಿ ಪರಾರಿಯಾಗಿದ್ದಾರೆ. ಮಗಿವಿನ ಗುರುತು ಸಿಗದಿರಲಿ ಎಂದು ಮಗುವಿನ ಮುಡಿ ತೆಗೆಸಿ ಹೊಸ ಬಟ್ಟೆ ಹಾಕಿಸಿದ್ದಾರೆ. ಸದ್ಯ ಆರೋಪಿ ದಂಪತಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.

ಮಕ್ಕಳ ಜೊತೆ ರೈಲಿನಲ್ಲಿ ಪ್ರಯಾಣ ಮಾಡೋ ಪೋಷಕರೇ ಎಚ್ಚರ! ಒಳ್ಳೆಯವರಂತೆ ಪರಿಚಯವಾಗಿ ಮಗು ಕಿಡ್ನಾಪ್
| Updated By: ಆಯೇಷಾ ಬಾನು

Updated on: Aug 31, 2024 | 9:51 AM

ರಾಯಚೂರು, ಆಗಸ್ಟ್​.31: ಟ್ರೈನ್​ನಲ್ಲಿ ಮಕ್ಕಳ ಜೊತೆ ಪ್ರಯಾಣ ಮಾಡುವ ಪೋಷಕರೇ ಎಚ್ಚರ.. ಎಚ್ಚರ. ಸಹ ಪ್ರಯಾಣಿಕರ ಮಾತಿಗೆ ಮರುಳಾದ್ರೆ, ನಿಮ್ಮ ಮಕ್ಕಳು ಕ್ಷಣಾರ್ಧದಲ್ಲೇ ಕಿಡ್ನಾಪ್ (Kidnap) ಮಾಡ್ತಾರೆ. ರಾಯಚೂರಿನಿಂದ ಬೆಂಗಳೂರಿಗೆ ಗೂಳೆ ಹೊರಟಿದ್ದ ಪ್ರಕಾಶ್-ಹಂಪಮ್ಮ ದಂಪತಿಯ ಮೂರು ವರ್ಷದ ಮಗು ಕಿಡ್ನಾಪ್ ಆಗಿದೆ. ಇದೇ ಆಗಸ್ಟ್ 29ರಂದು ಮಾರ್ಗ ಮಧ್ಯೆ ಆಂಧ್ರದ ಅನಂತಪುರದಲ್ಲಿ ಮಗು ಕಿಡ್ನಾಪ್ ಆಗಿದೆ. ಟ್ರೈನ್​ನಲ್ಲಿ ಮಗು ಮಾತನಾಡಿಸುತ್ತಾ, ಬಿಸ್ಕೇಟ್ ಕೊಟ್ಟು ಪುಸಲಾಯಿಸಿದ್ದ ಬೇರೊಬ್ಬ ದಂಪತಿ ರಾತ್ರಿ ಎಲ್ಲರೂ ಮಲಗಿದ ಬಳಿಕ ಮಗು ಸಮೇತ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಮಗು ತಂದೆ ಪ್ರಕಾಶ್, ಅನಂತಪುರ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಗುವಿನ ಜೊತೆ ಎಸ್ಕೇಪ್ ಆದ ದಂಪತಿ ಆಂಧ್ರದ ಅನಂತರಪುರ-ಮಂತ್ರಾಲಯ-ರಾಯಚೂರು ಮೂಲಕ ಕಲಬುರ್ಗಿಗೆ ಹೋಗೊ ಪ್ಲಾನ್ ಮಾಡಿದ್ದರು. ಮಗುವನ್ನು ಕಿಡ್ನಾಪ್ ಮಾಡಿ ಗುರುತು ಸಿಗದೇ ಇರಲು ಖತರ್ನಾಕ್ ಐಡಿಯಾ ಮಾಡಿದ್ದಾರೆ. ಆಂಧ್ರದ ಅನಂತಪುರದಲ್ಲಿ ಇಳಿದು ಸೀದಾ ಮಂತ್ರಾಲಯಕ್ಕೆ ಬಂದಿದ್ದ ಆರೋಪಿ ದಂಪತಿ ಮಂತ್ರಾಲಯದಲ್ಲಿ ಮಗುವಿನ ಹೇರ್ ಕಟ್ ಮಾಡ್ಸಿ, ಬಟ್ಟೆ ಬದಲಾಯಿಸಿ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಕಾರ್ಕಳ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಪ್ರಕರಣ: ಡ್ರಗ್ಸ್ ಬಂದಿದ್ದು ಎಲ್ಲಿಂದ? ನೀಡಿದ್ದು ಯಾವ ಡ್ರಗ್ಸ್? ಮಾಹಿತಿ ಬಯಲು

ಮಂತ್ರಾಲಯದಿಂದ ರಾಯಚೂರಿನ ಮೂಲಕ ಮತ್ತೆ ಕಲಬುರ್ಗಿಗೆ ಹೋಗಲು ಪ್ಲಾನ್ ಮಾಡಿದ್ದು ಈ ವೇಳೆ ಮೊಬೈಲ್ ನೆಟ್ ವರ್ಕ್ ಆಧಾರದಲ್ಲಿ ರಾಯಚೂರಿನಲ್ಲಿ ಆರೋಪಿ ದಂಪತಿ ಇರುವುದು ಪತ್ತೆಯಾಗಿದೆ. ವಾಟ್ಸ್ ಆಪ್ ಗ್ರೂಪ್​ನಲ್ಲಿ ಶೇರ್ ಮಾಡಲಾದ ಫೋಟೋ ಆಧರಿಸಿ ಮಗು ರಕ್ಷಣೆ ಮಾಡಿ ದಂಪತಿಯನ್ನು ವಶಕ್ಕೆ ಪಡೆಯಲಾಗಿದೆ.

ಅನಂತಪುರ ರೈಲ್ವೆ ಪೊಲೀಸರ ಮಾಹಿತಿ ಮೆರೆಗೆ, ಕಲಬುರ್ಗಿ ಮೂಲದ ಆರೋಪಿಗಳನ್ನ ರಾಯಚೂರು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೂಪೇಶ್ ಹಾಗೂ ಕುಸುಮ ಮಗು ಕಿಡ್ನಾಪ್ ಮಾಡಿದ್ದ ದಂಪತಿ ಎಂದು ತಿಳಿದು ಬಂದಿದೆ. ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ವೇದಿಕೆಯಿಂದ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ. ಮಕ್ಕಳಿಲ್ಲ ಅಂತ ಮಗು ಕಿಡ್ನಾಪ್ ಮಾಡಿದ್ದಾಗಿ ಆರೋಪಿ ದಂಪತಿ ಹೇಳಿಕೆ ನೀಡಿದ್ದಾರೆ. ಆದರೆ ಮಾನವ ಕಳ್ಳ ಸಾಗಣೆ ಬಗ್ಗೆ ಅನುಮಾನ ಮೂಡಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow us