ದೇವರ ರೀತಿ ಬೆಳ್ಳಿಯ ರಥದಲ್ಲಿ ಡಾ. ರಾಜ್​ ಪ್ರತಿಮೆ ಮೆರವಣಿಗೆ ಮಾಡಲು ಸಜ್ಜಾದ ಅಭಿಮಾನಿಗಳು

| Updated By: ಮದನ್​ ಕುಮಾರ್​

Updated on: Apr 24, 2022 | 10:14 AM

ಡಾ. ರಾಜ್​ಕುಮಾರ್​ ಮೇಲಿನ ಅಭಿಮಾನವನ್ನು ಜನರು ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಅಣ್ಣಾವ್ರ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿ ಇರಿಸಿ ಮೆರವಣಿಗೆ ಮಾಡಲಾಗುತ್ತಿದೆ.

ಬಹಳ ಅದ್ದೂರಿಯಾಗಿ ಡಾ. ರಾಜ್​ಕುಮಾರ್​ ಅವರ ಜನ್ಮದಿನವನ್ನು (Dr Rajkumar Birthday) ಆಚರಿಸಲಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ರಾಜ್​ಕುಮಾರ್​ ಸಮಾಧಿ ಬಳಿ ಇಂದು (ಏ.24) ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಅಣ್ಣಾವ್ರ ಹುಟ್ಟುಹಬ್ಬವನ್ನು ಆಚರಿಸಲು ಆಗಿರಲಿಲ್ಲ. ಹಾಗಾಗಿ ಈ ಬಾರಿ ಅದ್ದೂರಿಯಾಗಿ ನೆರವೇರಿಸಲಾಗುತ್ತಿದೆ. ವಿಶೇಷವಾಗಿ ಸಿದ್ಧಗೊಂಡ ಬೆಳ್ಳಿಯ ರಥದಲ್ಲಿ ರಾಜ್​ಕುಮಾರ್ (Dr Rajkumar) ಅವರ ಪ್ರತಿಮೆಯ ಮೆರವಣಿಗೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಮೆರವಣಿಗೆ ಆರಂಭ ಆಗಲಿದೆ. ‘ದೇವರ ಮೆರವಣಿಗೆ ಮಾಡುವ ರಥವೇ ಬೇಕು ಎಂದು ಹಲವು ತಿಂಗಳಿಂದ ಇದನ್ನು ಸಿದ್ಧಪಡಿಸಿದ್ದೇವೆ’ ಎಂದು ಅಭಿಮಾನಿಗಳು (Dr Rajkumar Fans)​ ಹೇಳಿದ್ದಾರೆ. ಸಾವಿರಾರು ಜನರಿಗೆ ಅನ್ನ ಸಂತರ್ಪಣೆಯನ್ನೂ ಮಾಡಲಾಗುತ್ತಿದೆ.

ಇದನ್ನೂ ಓದಿ:

Dr Rajkumar: ‘ನಿನದೇ ನೆನಪು ದಿನವೂ ಮನದಲ್ಲಿ..’: ಡಾ. ರಾಜ್​ ಜನ್ಮದಿನಕ್ಕೆ ಪುನೀತ್​ ವಿಶ್​ ಮಾಡಿದ್ದ ವಿಡಿಯೋ ವೈರಲ್​

Dr Rajkumar Birth Anniversary: ಡಾ.ರಾಜ್​ಕುಮಾರ್ ಅಪರೂಪದ ಫೋಟೋಗಳು ಹಾಗೂ ಮೇರುನಟನ ಕುರಿತ ವಿಶೇಷ ಸಂಗತಿಗಳು ಇಲ್ಲಿವೆ