AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತಿರಬಹುದು ಅಥವಾ ಕೆಟ್ಟ ಸ್ಥಿತಿಯಲ್ಲಿರಬಹುದು; ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ

ಸತ್ತಿರಬಹುದು ಅಥವಾ ಕೆಟ್ಟ ಸ್ಥಿತಿಯಲ್ಲಿರಬಹುದು; ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ

ಸುಷ್ಮಾ ಚಕ್ರೆ
|

Updated on:Mar 28, 2026 | 5:13 PM

Share

ಅಮೆರಿಕ-ಇಸ್ರೇಲ್ ಜಂಟಿ ದಾಳಿಯು ಇರಾನ್‌ನ ಉನ್ನತ ನಾಯಕತ್ವ ಮತ್ತು ಮಿಲಿಟರಿ ಶಕ್ತಿಯನ್ನು ತೊಡೆದುಹಾಕಿದೆ. ಇರಾನ್ ದೇಶವು ಕಾರ್ಯನಿರ್ವಹಿಸುವ ಸರ್ವೋಚ್ಚ ನಾಯಕನನ್ನು ಹೊಂದಿಲ್ಲ. ದೇಶದ ಅತ್ಯುನ್ನತ ಅಧಿಕಾರವನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. "ಅಮೆರಿಕದ ಮಿಲಿಟರಿ ಕಾರ್ಯಾಚರಣೆಯು ಇರಾನ್‌ನ ನಾಯಕತ್ವ ಮತ್ತು ಮಿಲಿಟರಿ ಶಕ್ತಿಯನ್ನು ನಾಶಪಡಿಸಿದೆ. ಇರಾನ್​ನ ನೂತನ ನಾಯಕ ಸತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಅಥವಾ ಅವರು ಅತ್ಯಂತ ಕೆಟ್ಟ ಸ್ಥಿತಿಯಲ್ಲಿಯೂ ಇರಬಹುದು. ಏಕೆಂದರೆ ಅವರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ" ಎಂದು ಟ್ರಂಪ್ ಹೇಳಿದ್ದಾರೆ.

ವಾಷಿಂಗ್ಟನ್, ಮಾರ್ಚ್ 28: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯ ನಂತರ ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಸ್ಥಳ ಮತ್ತು ಆರೋಗ್ಯದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶಾಕಿಂಗ್ ಹೇಳಿಕೆ ನೀಡಿದ್ದು, ಮೊಜ್ತಬಾ ಖಮೇನಿ ಸತ್ತಿರಬಹುದು ಅಥವಾ ತುಂಬ ಕೆಟ್ಟ ಸ್ಥಿತಿಯಲ್ಲಿರಬಹುದು ಎಂದು ಹೇಳಿದ್ದಾರೆ.

“ಅಮೆರಿಕದ ಮಿಲಿಟರಿ ಕಾರ್ಯಾಚರಣೆಯು ಇರಾನ್‌ನ ನಾಯಕತ್ವ ಮತ್ತು ಮಿಲಿಟರಿ ಶಕ್ತಿಯನ್ನು ನಾಶಪಡಿಸಿದೆ. ಇರಾನ್​ನ ನೂತನ ನಾಯಕ ಸತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಅಥವಾ ಅವರು ಅತ್ಯಂತ ಕೆಟ್ಟ ಸ್ಥಿತಿಯಲ್ಲಿಯೂ ಇರಬಹುದು. ಏಕೆಂದರೆ ಅವರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ” ಎಂದು ಟ್ರಂಪ್ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Mar 28, 2026 04:15 PM
Follow Us