AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸ ಮಾಡಿ ಮುಗಿಸುವ ಇಬ್ಬರು ವ್ಯಕ್ತಿಗಳೆಂದರೆ ನಾನು ಮತ್ತು ಮೋದಿ; ಟ್ರಂಪ್ ಅಚ್ಚರಿಯ ಮೆಚ್ಚುಗೆ

ಪಶ್ಚಿಮ ಏಷ್ಯಾದ ಉದ್ವಿಗ್ನತೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇದ್ದಕ್ಕಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. 'ಪ್ರಧಾನಿ ಮೋದಿ ಮತ್ತು ನಾನು ಹಿಡಿದ ಕೆಲಸಗಳನ್ನು ಮಾಡುವ ಇಬ್ಬರು ವ್ಯಕ್ತಿಗಳು' ಎಂದು ಟ್ರಂಪ್ ಹೇಳಿದ್ದಾರೆ. ಭಾರತ-ಅಮೆರಿಕದ ಸಂಬಂಧಗಳ ಭವಿಷ್ಯದ ಬಗ್ಗೆ ಬಲವಾದ ಆಶಾವಾದವನ್ನು ವ್ಯಕ್ತಪಡಿಸಿರುವ ಟ್ರಂಪ್ ಭಾರತದೊಂದಿಗಿನ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಲಸ ಮಾಡಿ ಮುಗಿಸುವ ಇಬ್ಬರು ವ್ಯಕ್ತಿಗಳೆಂದರೆ ನಾನು ಮತ್ತು ಮೋದಿ; ಟ್ರಂಪ್ ಅಚ್ಚರಿಯ ಮೆಚ್ಚುಗೆ
Trump With ModiImage Credit source: AP
ಸುಷ್ಮಾ ಚಕ್ರೆ
|

Updated on:Mar 27, 2026 | 6:34 PM

Share

ನವದೆಹಲಿ, ಮಾರ್ಚ್ 27: ಇರಾನ್ ಮೇಲೆ ಯುದ್ಧ ಸಾರಿರುವ ಅಮೆರಿಕ ಹಾಗೂ ಇಸ್ರೇಲ್​ಗೆ ಭಾರತ ಬಹಿರಂಗವಾಗಿ ಬೆಂಬಲ ಘೋಷಿಸಿಲ್ಲ. ಇಸ್ರೇಲ್ ಸರ್ಕಾರದ ಜೊತೆ ಮಾತನಾಡಿ ಶಾಂತಿ ಮಾತುಕತೆಗೆ ಕರೆ ನೀಡಿದ್ದ ಪ್ರಧಾನಿ ಮೋದಿ ಅತ್ತ ಇರಾನ್​ಗೂ ವೈದ್ಯಕೀಯ ನೆರವು ಕಳುಹಿಸಿಕೊಟ್ಟಿತ್ತು. ಮೊನ್ನೆಯಷ್ಟೇ ಫೋನ್ ಮಾಡಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್​ಗೂ ಈ ಬಿಕ್ಕಟ್ಟನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳುವುದು ಉತ್ತಮ ಎಂಬ ಸಂದೇಶ ನೀಡಿದ್ದರು. ಇರಾನ್ ಮೇಲೆ ಇನ್ನೂ ಕತ್ತಿ ಮಸೆಯುತ್ತಲೇ ಇರುವ ಟ್ರಂಪ್ (Donald Trump) ಇದೀಗ ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ.

ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯ ಮೂಲಕ ಹಂಚಿಕೊಂಡ ಸಂದೇಶದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಭಾರತದೊಂದಿಗಿನ ನಮ್ಮ ಅದ್ಭುತ ಸಂಬಂಧವು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳುತ್ತದೆ. ಪ್ರಧಾನಿ ಮೋದಿ ಮತ್ತು ನಾನು ಕೆಲಸಗಳನ್ನು ಮಾಡುವ ಇಬ್ಬರು ವ್ಯಕ್ತಿಗಳು. ಹೆಚ್ಚಿನವರ ವಿಷಯದಲ್ಲಿ ಈ ಕುರಿತು ಏನೂ ಹೇಳಲಾಗದು” ಎಂದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್; ಇರಾನ್ ಮೇಲಿನ ಯುದ್ಧ, ಹಾರ್ಮುಜ್ ಜಲಸಂಧಿಯ ಬಗ್ಗೆ ಚರ್ಚೆ

ಮಾರ್ಚ್ 24ರಂದು ಟ್ರಂಪ್ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಸಂಘರ್ಷದ ಕುರಿತು ಚರ್ಚಿಸಿದ್ದರು. ಈ ಯುದ್ಧ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇದು ಜಾಗತಿಕ ಇಂಧನ ಪೂರೈಕೆಗೆ ಗಮನಾರ್ಹ ಅಡಚಣೆಗಳನ್ನು ಉಂಟುಮಾಡಿದೆ. ಇರಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷವು ಭೌಗೋಳಿಕ ರಾಜಕೀಯ ಅಪಾಯಗಳನ್ನು ಹೆಚ್ಚಿಸುತ್ತಿರುವ ಸಮಯದಲ್ಲಿ ಹಾರ್ಮುಜ್ ಜಲಸಂಧಿಯನ್ನು ಮುಕ್ತ ಮತ್ತು ಸುರಕ್ಷಿತವಾಗಿಸುವುದು ಬಹಳ ಮುಖ್ಯ ಎಂದು ಅವರಿಬ್ಬರೂ ಚರ್ಚಿಸಿದ್ದರು.

ಇದನ್ನೂ ಓದಿ: ಮೊದಲು ಐದು, ಈಗ ಹತ್ತು ದಿನ, ಹಾರ್ಮುಜ್ ಜಲಸಂಧಿ ತೆರೆಯಲು ಏಪ್ರಿಲ್ 6ರವರೆಗೆ ಗಡುವು ವಿಸ್ತರಿಸಿದ ಟ್ರಂಪ್

“ಟ್ರಂಪ್ ಅವರಿಂದ ಕರೆ ಸ್ವೀಕರಿಸಿದೆ. ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡೆವು. ಭಾರತವು ಸಾಧ್ಯವಾದಷ್ಟು ಬೇಗ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಬೆಂಬಲ ನೀಡುತ್ತದೆ. ಹಾರ್ಮುಜ್ ಜಲಸಂಧಿಯು ಮುಕ್ತ, ಸುರಕ್ಷಿತ ಮತ್ತು ಪ್ರವೇಶಿಸಬಹುದಾದ ಸ್ಥಳವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಇಡೀ ಜಗತ್ತಿಗೆ ಅತ್ಯಗತ್ಯ” ಎಂದು ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರೊಂದಿಗಿನ ತಮ್ಮ ದೂರವಾಣಿ ಕರೆಯ ಹೇಳಿಕೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Fri, 27 March 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ
Live: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ KPCC ವತಿಯಿಂದ ಪ್ರತಿಭಟನೆ
Live: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ KPCC ವತಿಯಿಂದ ಪ್ರತಿಭಟನೆ
ತಾಂಡವ್ ರಾಮ್ ಕಂಬ್ಯಾಕ್ ಬಗ್ಗೆ ಸೂಚನೆ ಕೊಟ್ಟ ಸುದೀಪ್
ತಾಂಡವ್ ರಾಮ್ ಕಂಬ್ಯಾಕ್ ಬಗ್ಗೆ ಸೂಚನೆ ಕೊಟ್ಟ ಸುದೀಪ್
ಕಾವೇರಿ ಆರತಿ: ಉತ್ತಮ ಮಳೆ-ಬೆಳೆಗಾಗಿ ಸಾಲೂರು ಮಠದ ಶ್ರೀಗಳಿಂದ ವಿಶೇಷ ಪೂಜೆ!
ಕಾವೇರಿ ಆರತಿ: ಉತ್ತಮ ಮಳೆ-ಬೆಳೆಗಾಗಿ ಸಾಲೂರು ಮಠದ ಶ್ರೀಗಳಿಂದ ವಿಶೇಷ ಪೂಜೆ!
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ಆರ್. ಪಾಟೀಲ್ ಗರಂ
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ಆರ್. ಪಾಟೀಲ್ ಗರಂ
ಹಾಲಿನ ದರ ಏರಿಕೆಯಾದ್ರೆ ಟೀ, ಕಾಫಿ ದರವೂ ಹೆಚ್ಚಳವಾಗುವ ಸಾಧ್ಯತೆ!
ಹಾಲಿನ ದರ ಏರಿಕೆಯಾದ್ರೆ ಟೀ, ಕಾಫಿ ದರವೂ ಹೆಚ್ಚಳವಾಗುವ ಸಾಧ್ಯತೆ!
ಮೈಸೂರು ದಸರಾ ಸಂಭ್ರಮ: ಗಜಪಡೆಗೆ ಇಂದಿನಿಂದ ಕುಶಾಲತೋಪು ತರಬೇತಿ ಆರಂಭ
ಮೈಸೂರು ದಸರಾ ಸಂಭ್ರಮ: ಗಜಪಡೆಗೆ ಇಂದಿನಿಂದ ಕುಶಾಲತೋಪು ತರಬೇತಿ ಆರಂಭ
ಕೊಪ್ಪಳದ ಗವಿಸಿದ್ದೇಶ್ವರರಿಗೂ ಮೊದಲು ದಸರಾ ಉದ್ಘಾಟಿಸಿದ್ದ ಮಠಾಧೀಶರು ಇವರು!
ಕೊಪ್ಪಳದ ಗವಿಸಿದ್ದೇಶ್ವರರಿಗೂ ಮೊದಲು ದಸರಾ ಉದ್ಘಾಟಿಸಿದ್ದ ಮಠಾಧೀಶರು ಇವರು!