AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್ ನನ್ನನ್ನು ಸುಪ್ರೀಂ ಲೀಡರ್ ಆಗಿ ಮಾಡಲು ಬಯಸಿತ್ತು, ನಾನೇ ಒಪ್ಪಲಿಲ್ಲ; ಟ್ರಂಪ್ ಹೊಸ ವರಸೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ನಡುವೆ ವಾದ-ಪ್ರತಿವಾದ ನಡೆಯುತ್ತಲೇ ಇದೆ. ಎರಡೂ ದೇಶಗಳು ಹಾವು-ಮುಂಗುಸಿಯಂತೆ ಕಿತ್ತಾಡುತ್ತಲೇ ಇವೆ. ಟ್ರಂಪ್ ಇರಾನ್ ಜೊತೆ ಕದನವಿರಾಮದ ಪ್ರಸ್ತಾಪವಿಟ್ಟಿರುವುದಾಗಿ ಹೇಳಿದ್ದರು. ಆದರೆ, ಇರಾನ್ ಅದನ್ನು ತಿರಸ್ಕರಿಸಿ ತಾನೇ ಟ್ರಂಪ್​ಗೆ 5 ಷರತ್ತುಗಳನ್ನು ವಿಧಿಸಿತ್ತು. ಇರಾನ್ ಬಗ್ಗೆ ದಿನಕ್ಕೊಂದು ನಿಲುವು ಘೋಷಿಸುತ್ತಿರುವ ಟ್ರಂಪ್ ಇದೀಗ ಹೊಸ ವರಸೆ ಶುರು ಮಾಡಿದ್ದಾರೆ. ಇರಾನ್​ನ ಸುಪ್ರೀಂ ನಾಯಕನಾಗಬೇಕೆಂದು ನನಗೆ ಒತ್ತಾಯ ಮಾಡಲಾಗಿತ್ತು. ಆದರೆ, ನಾನೇ 'ನೋ, ಥ್ಯಾಂಕ್ಸ್' (ಬೇಡ, ಧನ್ಯವಾದಗಳು) ಅಂತ ಹೇಳಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಇರಾನ್ ನನ್ನನ್ನು ಸುಪ್ರೀಂ ಲೀಡರ್ ಆಗಿ ಮಾಡಲು ಬಯಸಿತ್ತು, ನಾನೇ ಒಪ್ಪಲಿಲ್ಲ; ಟ್ರಂಪ್ ಹೊಸ ವರಸೆ
trumpImage Credit source: AP
ಸುಷ್ಮಾ ಚಕ್ರೆ
|

Updated on:Mar 26, 2026 | 11:22 AM

Share

ವಾಷಿಂಗ್ಟನ್, ಮಾರ್ಚ್ 26: ಇರಾನ್ ಜೊತೆಗಿನ ಯುದ್ಧ ಆರಂಭವಾದಾಗಿನಿಂದ ದಿನ ಬೆಳಗಾದರೆ ಹೊಸ ಹೊಸ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ (Donald Trump) ರೂಢಿಯಾಗಿಬಿಟ್ಟಿದೆ! ಪಶ್ಚಿಮ ಏಷ್ಯಾ ಯುದ್ಧವು ಇಂದು 27ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ ನಮ್ಮ ಮುಂದೆ ಮಂಡಿಯೂರಿದೆ, ಆದರೆ, ಅದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ ಎಂದು ಹೇಳಿರುವ ಟ್ರಂಪ್ ಇರಾನ್​ಗೆ ಜೀವಭಯ ಕಾಡುತ್ತಿದೆ ಎಂದಿದ್ದಾರೆ. ಹಾಗೇ, “ಇರಾನ್​ನ ಸುಪ್ರೀಂ ನಾಯಕ ನಾನೇ ಆಗಬೇಕೆಂದು ಇರಾನ್ ಬಯಸಿತ್ತು. ಆದರೆ ನಾನೇ ಅದಕ್ಕೆ ಒಪ್ಪಲಿಲ್ಲ” ಎಂಬ ಹೇಳಿಕೆಯನ್ನೂ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಅಮೆರಿಕದಲ್ಲಿ ರಿಪಬ್ಲಿಕನ್ ನಿಧಿಸಂಗ್ರಹಣೆಯಲ್ಲಿ ಮಾತನಾಡಿದ ಟ್ರಂಪ್, “ಇರಾನ್ ನಮ್ಮ ಜೊತೆ ಮಾತುಕತೆ ನಡೆಸುತ್ತಿದೆ. ಆದರೆ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಹೆದರುತ್ತಿದೆ. ಅವರು ಒಪ್ಪಂದವನ್ನು ಮಾಡಿಕೊಳ್ಳಲು ಕಾತುರರಾಗಿದ್ದಾರೆ. ಒಂದುವೇಳೆ ಆ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡರೆ ತಮ್ಮದೇ ಜನರು ತಮ್ಮನ್ನು ಸಾಯಿಸುತ್ತಾರೆ ಎಂಬ ಭಯ ಇರಾನ್ ನಾಯಕರನ್ನು ಕಾಡುತ್ತಿದೆ. ಹೀಗಾಗಿಯೇ ಅವರು ಒಪ್ಪಂದಕ್ಕೆ ಸಿದ್ಧವಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Iran War: ಟ್ರಂಪ್​ಗೆ ಸೆಡ್ಡು ಹೊಡೆದ ಟೆಹ್ರಾನ್; ಯುದ್ಧ ನಿಲ್ಲಿಸಲು 5 ಷರತ್ತು ವಿಧಿಸಿದ ಇರಾನ್

ಇರಾನ್ ಮಾತ್ರ ಅಮೆರಿಕ ತನ್ನ ಜೊತೆ ಯಾವುದೇ ರೀತಿಯ ಕದನವಿರಾಮದ ಮಾತುಕತೆ ನಡೆಸಿಲ್ಲ, ನಾವು ಅದಕ್ಕೆ ಒಪ್ಪುವುದೂ ಇಲ್ಲ. ಕದನವಿರಾಮದ ದಿನದ ಬಗ್ಗೆ ಹಾಗೂ ಷರತ್ತುಗಳ ಬಗ್ಗೆ ಟ್ರಂಪ್ ನಿರ್ಧಾರ ಮಾಡಲು ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದೆ. ಹಾಗೇ ಯುದ್ಧ ನಿಲ್ಲಿಸಲು ಒಪ್ಪಲು ತಾನೇ 5 ಷರತ್ತುಗಳನ್ನು ಕೂಡ ವಿಧಿಸಿದೆ.

ಇದರ ಜೊತೆಗೆ ಟ್ರಂಪ್ ಇನ್ನೊಂದು ಶಾಕಿಂಗ್ ಹೇಳಿಕೆಯನ್ನೂ ನೀಡಿದ್ದಾರೆ. “ನಾವು ನಿಮ್ಮನ್ನು ಇರಾನ್​ನ ಮುಂದಿನ ಸುಪ್ರೀಂ ಲೀಡರ್ ಮಾಡಲು ಬಯಸುತ್ತೇವೆ ಎಂದು ಇರಾನ್ ನಾಯಕರು ಹೇಳಿದ್ದರು. ಆದರೆ, ನಾನು ನೋ, ಥ್ಯಾಂಕ್ಸ್. ನನಗೆ ಅದು ಬೇಡ” ಎಂದು ಹೇಳಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಕಳೆದ ತಿಂಗಳು ಅಲಿ ಖಮೇನಿ ಹತ್ಯೆಯ ನಂತರ ಇರಾನ್ ನಾಯಕತ್ವದಲ್ಲಿನ ಅನಿಶ್ಚಿತತೆಯ ಮಧ್ಯೆ ಈ ಹೇಳಿಕೆಗಳು ಬಂದಿವೆ. ಅವರ ಮಗ ಮೊಜ್ತಾಬಾ ಖಮೇನಿ ಅವರನ್ನು ಸುಪ್ರೀಂ ಲೀಡರ್ ಆಗಿ ಬಡ್ತಿ ನೀಡಲಾಯಿತು. ಆದರೆ, ಯುದ್ಧ ಪ್ರಾರಂಭವಾದಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:35 am, Thu, 26 March 26

Follow Us
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಕಾಟ ಇಲ್ಲ : ರಾಹುಲ್ ಗಾಂಧಿ
ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಕಾಟ ಇಲ್ಲ : ರಾಹುಲ್ ಗಾಂಧಿ