ಈಶ್ವರಪ್ಪನವರೇ ಅಸ್ತಿತ್ವ ಕಳೆದುಕೊಂಡು ಮನೆಯಲ್ಲಿ ಕೂತಿದ್ದಾರೆ, ಅವರ ಮಾತಿಗೆ ಬೆಲೆಯಿಲ್ಲ: ಎನ್ಎಸ್ ಬೋಸರಾಜು
ಶಕ್ತಿ ಯೋಜನೆಯನ್ನು ಪುರುಷರಿಗೂ ವಿಸ್ತರಿಸುವ ಯೋಚನೆ ಸರ್ಕಾರಕ್ಕಿದೆ ಎಂದು ಡಿಕೆ ಶಿವಕುಮಾರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಬೋಸರಾಜು, ಜನ ಕೇಳ್ತಿದ್ದಾರೆ, ಅದರೆ ಬಜೆಟ್ ಮಂಡನೆಗೆ ಇನ್ನೂ ಕಾಲಾವಕಾಶವಿದೆ, ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ ಎಂದರು.
ರಾಯಚೂರು: ಕಾಂಗ್ರೆಸ್ ಪಕ್ಷವನ್ನು ಜನ ಓಡಾಡಿಸಿ ಹೊಡೆಯುವ ದಿನ ದೂರವಿಲ್ಲ ಎಂದು ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ ಹೇಳಿರುವುದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಬೋಸರಾಜು, ಬಿಜೆಪಿಯವರೇ ಈಶ್ವರಪ್ಪರನ್ನು ಒದ್ದು ಮನೇಲಿ ಕೂಡಿಸಿದ್ದಾರೆ ಮತ್ತು ಚುನಾವಣೆಗೆ ನಿಂತಾಗ ಜನ ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದಾರೆ, ಅವರೇನು ನಮ್ಮನ್ನು ಒದ್ದು ಓಡಿಸೋದು, ನಮ್ಮ ಪಕ್ಷಕ್ಕೆ 140 ವರ್ಷಗಳ ಇತಿಹಾಸವಿದೆ, ಆಡಳಿತ ನಡೆಸಿದ ಅನುಭವ ಇದೆ ಎಂದು ಹೇಳಿದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್!
Latest Videos