ಕತ್ತರಿಸಿದರೂ ಸಾಯದೆ ಚಡಪಡಿಸುತ್ತಿರುವ ಮೀನು! ಮಲ್ಪೆ ಬಂದರಿನಲ್ಲಿ ಅಚ್ಚರಿ ಮೂಡಿಸಿದ ವಿಚಿತ್ರ ಘಟನೆ
ಉಡುಪಿಯ ಮಲ್ಪೆ ಬಂದರಿನಲ್ಲಿ ಅಚ್ಚರಿಯ, ವಿಲಕ್ಷಣ ಘಟನೆಯೊಂದು ನಡೆದಿದೆ. ಗ್ರಾಹಕರಿಗೆ ನೀಡಲೆಂದು ತುಂಡು ಮಾಡಿದ ಮೀನು ಮತ್ತೂ ಜೀವಂತವಾಗಿದ್ದು, ತುಂಬಾ ಹೊತ್ತು ಚಡಪಡಿಸಿದೆ. ಮೀನು ಇಷ್ಟೊಂದು ಹೊತ್ತು ಜೀವಂತವಾಗಿರುವುದು ಹೇಗೆ ಎಂಬ ಪ್ರಶ್ನೆ ಈಗ ಹಲವರಲ್ಲಿ ಮೂಡಿದ್ದು, ಈ ಘಟನೆ ಮಲ್ಪೆ ಬಂದರಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಘಟನೆಯ ವೈರಲ್ ವಿಡಿಯೋ ಇಲ್ಲಿದೆ.
ಉಡುಪಿ, ಜನವರಿ 27: ಗ್ರಾಹಕರಿಗೆ ನೀಡಲೆಂದು ಕತ್ತರಿಸಿದ ಬಂಗುಡೆ ಮೀನೊಂದು ಸಾಯದೆ ಮತ್ತೂ ಚಡಪಡಿಸಿದ ಅಚ್ಚರಿಯ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದ್ದು, ಸ್ಥಳದಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ. ಮಲ್ಪೆ ಬಂದರಿನಲ್ಲಿ ಮೀನು ಖರೀದಿಗೆ ಬಂದಿದ್ದ ಗ್ರಾಹಕರೊಬ್ಬರು, ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯ ಬಳಿ ಬಂಗುಡೆ ಮೀನು ಖರೀದಿಸಿದ್ದಾರೆ. ಮೀನನ್ನು ಅಲ್ಲಿಯೇ ಕತ್ತರಿಸಿ ಕೊಡುವಂತೆ ಕೇಳಿಕೊಂಡಾಗ, ಮಹಿಳೆ ಮೀನನ್ನು ಕತ್ತರಿಸಿ ಟಬ್‌ಗೆ ಹಾಕಿದ್ದಾರೆ. ಆದರೆ, ಕತ್ತರಿಸಿದ ಬಳಿಕವೂ ಮೀನು ಜೀವಂತವಾಗಿ ಚಡಪಡಿಸುತ್ತಿರುವುದು ಗಮನಕ್ಕೆ ಬಂದಿದೆ.
ಈ ವಿಚಿತ್ರ ದೃಶ್ಯವನ್ನು ಕಂಡು ಅಲ್ಲಿದ್ದ ಇತರ ಮೀನು ಮಾರಾಟಗಾರರು ಹಾಗೂ ಗ್ರಾಹಕರು ಹೌಹಾರಿದ್ದು, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ಕತ್ತರಿಸಿದ ಬಳಿಕವೂ ಜೀವಂತವಾಗಿರುವ ಮೀನಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್ಲೈನ್ ಫಿಕ್ಸ್

