AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚಮಸಾಲಿ ಪೀಠ ಸಂಘರ್ಷ: ಮೂವರು ಟ್ರಸ್ಟಿಗಳ ಉಚ್ಚಾಟನೆ; ಸೋಮನಗೌಡ ಸ್ಫೋಟಕ ಹೇಳಿಕೆ

ಪಂಚಮಸಾಲಿ ಪೀಠ ಸಂಘರ್ಷ: ಮೂವರು ಟ್ರಸ್ಟಿಗಳ ಉಚ್ಚಾಟನೆ; ಸೋಮನಗೌಡ ಸ್ಫೋಟಕ ಹೇಳಿಕೆ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Apr 26, 2026 | 5:51 PM

Share

ಪಂಚಮಸಾಲಿ ಗುರುಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಧರ್ಮದರ್ಶಿ ಚಂದ್ರಶೇಖರ್ ಪೂಜಾರ್ ಮತ್ತು ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಅವರನ್ನು ಟ್ರಸ್ಟ್‌ನಿಂದ ಉಚ್ಚಾಟಿಸಲಾಗಿದೆ. ಲೆಕ್ಕಪತ್ರ ನೀಡುವಲ್ಲಿ ವಿಫಲರಾಗಿ, ಅವ್ಯವಹಾರ ಆರೋಪಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜೂನ್ ತಿಂಗಳಲ್ಲಿ ರಾಜ್ಯವ್ಯಾಪಿ ಪ್ರವಾಸ ಕೈಗೊಂಡು ಸಂಗ್ರಹಿಸಿದ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು ಎಂದು ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ದಾವಣಗೆರೆ, ಏಪ್ರಿಲ್​ 26: ಪಂಚಮಸಾಲಿ ಗುರುಪೀಠ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಧರ್ಮದರ್ಶಿ ಚಂದ್ರಶೇಖರ್ ಪೂಜಾರ್ ಮತ್ತು ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಅವರನ್ನು ಟ್ರಸ್ಟ್‌ನಿಂದ ಉಚ್ಚಾಟನೆ ಮಾಡಲಾಗಿದೆ. ಲೆಕ್ಕಪತ್ರ ನೀಡುವಂತೆ ಸಾರ್ವಜನಿಕ ಮತ್ತು ಸಂಘದ ವತಿಯಿಂದ ನಿರಂತರವಾಗಿ ಕೇಳಲಾಗಿದ್ದರೂ ಸಹ, ಅವರು ಸ್ಪಂದಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್ 13ರಿಂದ ಈ ಮೂವರು ಟ್ರಸ್ಟಿಗಳಿಗೆ ಯಾವುದೇ ಹಣಕಾಸು ವ್ಯವಹಾರ ಅಥವಾ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದಿಲ್ಲ ಎಂದು ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಹೇಳಿದ್ದಾರೆ.

ಸಂಘವು ಸುಪ್ರೀಂ ಆಗಿದ್ದು, ಸುಮಾರು 13,600 ಸದಸ್ಯರನ್ನು ಹೊಂದಿದೆ. ಟ್ರಸ್ಟ್‌ನಲ್ಲಿನ ಅವ್ಯವಹಾರ ತಡೆಯುವ ಮತ್ತು ಸಮಾಜದ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೂನ್ ತಿಂಗಳಲ್ಲಿ ಲೆಕ್ಕ ಕೊಡಿ ಅಭಿಯಾನ ಸಮಿತಿ ಅಧ್ಯಕ್ಷರೊಂದಿಗೆ ರಾಜ್ಯ ಪ್ರವಾಸ ಕೈಗೊಂಡು 2008ರಿಂದ ಮಠಕ್ಕೆ ದಾನ ನೀಡಿದವರ ಕುರಿತು ಮಾಹಿತಿ ಸಂಗ್ರಹಿಸಿ, ಜೂನ್‌ನಲ್ಲಿ ಪೂರ್ಣ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us