ಮಂತ್ರಾಲಯದಲ್ಲಿ ವರುಣನ ಅಬ್ಬರಕ್ಕೆ ಭಕ್ತರು ಕಂಗಾಲು: ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೂ ಪರದಾಟ
ಮಂತ್ರಾಲಯದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ರಾಯರ ಮಠದ ಸುತ್ತಮುತ್ತ ನೀರು ತುಂಬಿಕೊಂಡಿದೆ. ಮಳೆನೀರಿನ ರಭಸಕ್ಕೆ ಭಕ್ತರು ಅಚ್ಚರಿಗೊಂಡರೂ, ಹರಿಯುವ ನೀರಿನಲ್ಲೇ ತೆರಳಿ ರಾಯರ ದರ್ಶನ ಪಡೆದಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಶ್ರೀಮಠವು ಅಗತ್ಯ ಕ್ರಮಗಳನ್ನು ಕೈಗೊಂಡಿತ್ತಾದರೂ, ಸುರಿದ ಭಾರೀ ಮಳೆಯು ತಾತ್ಕಾಲಿಕ ಅಡಚಣೆ ಉಂಟುಮಾಡಿದೆ.
ರಾಯಚೂರು, ಜೂನ್ 15: ಧಾರಾಕಾರ ಮಳೆಗೆ ಮಂತ್ರಾಲಯ ತತ್ತರಿಸಿದ್ದು, ಪ್ರಸಿದ್ಧ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುತ್ತಮುತ್ತಲ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಪರಿಣಾಮ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಸಹಸ್ರಾರು ಭಕ್ತರು ಪರದಾಟ ನಡೆಸಿದ್ದಾರೆ. ಮಳೆಯಾರ್ಭಟಕ್ಕೆ ರಸ್ತೆಗಳು ಹೊಳೆಯಂತಾಗಿದ್ದು, ಹರಿಯುವ ನೀರಿನಲ್ಲಿಯೇ ತೆರಳಿ ಭಕ್ತರು ರಾಯರ ದರ್ಶನ ಮಾಡಿದ್ದಾರೆ. ಮಠದ ಆಡಳಿತ ಮಂಡಳಿಯು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ತುರ್ತು ಕ್ರಮಗಳನ್ನು ಕೈಗೊಂಡಿದ್ದ ಹಿನ್ನೆಲೆ ಹೆಚ್ಚಿನ ಸಮಸ್ಯೆ ತಪ್ಪಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jun 15, 2026 10:11 AM
Follow Us
