ಸತೀಶ್ ಜಾರಕಿಹೊಳೆ ಮನೆಗೆ ಸಿಎಂ ಸಿದ್ದರಾಮಯ್ಯ ಊಟಕ್ಕೆ ಹೋದರೆ ಅದರಲ್ಲೇನು ತಪ್ಪು? ಡಿಕೆ ಶಿವಕುಮಾರ್
ಸಂಪುಟ ಪುನಾರಚನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲ್ ತೆಗೆದುಕೊಳ್ಳುತ್ತಿದ್ದಾರೆ ಎಂದ ಶಿವಕಮಾರ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಡಿನ್ನರ್ ಮೀಟಿಂಗ್ ನಲ್ಲಿ ಯಾವ ಚರ್ಚೆಯೂ ನಡೆದಿಲ್ಲ, ಮಾಧ್ಯಮಗಳಿಗೆ ಯಾರೋ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಹಾಗೆಯೇ, ಹೆಚ್ಎಂಪಿ ವೈರಸ್ ಬಗ್ಗೆ ಯಾರೂ ಆತಂಕಿತರಾಗುವ ಅವಶ್ಯಕತೆ ಇಲ್ಲ ತಮ್ಮ ಸರ್ಕಾರ ಅದರ ವಿಷಯದಲ್ಲಿ ಅಲರ್ಟ್ ಆಗಿದೆ ಎಂದರು
ದೆಹಲಿ: ವಿಷಯ ಎಷ್ಟೇ ಗಂಭೀರವಾಗಿದ್ದರೂ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಾರ್ವಜನಿಕವಾಗಿ ಒಬ್ಬರನ್ನೊಬ್ಬರು ಬಿಟ್ಟುಕೊಡಲ್ಲ. ಟರ್ಕಿ ಮತ್ತು ಕೆನಡಾ ದೇಶಗಳ ಪ್ರವಾಸದ ನಂತರ ಸ್ವದೇಶಕ್ಕೆ ಮರಳಿರುವ ಶಿವಕುಮಾರ್ ತಮ್ಮ ಅನುಪಸ್ಥಿಯಲ್ಲಿ ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿದ್ದರಾಮಯ್ಯ ಮತ್ತು ಕೆಲವು ಅಹಿಂದ ನಾಯಕರ ಜೊತೆ ಡಿನ್ನರ್ ಮೀಟಿಂಗ್ ನಡೆಸಿದ ಸಂದರ್ಭವನ್ನು ಡೌನ್ಪ್ಲೇ ಮಾಡಿದರು. ಅದರಲ್ಲಿ ತಪ್ಪೇನಿದೆ, ಒಬ್ಬರು ಮತ್ತೊಬ್ಬರ ಮನೆಗೆ ಊಟಕ್ಕೆ ಹೋಗುವುದು ನಡೆಯುತ್ತಿರುತ್ತದೆ, ತಾನು ಅದೆಷ್ಟೋ ಬಾರಿ ಜನರನ್ನು ಊಟಕ್ಕೆ ಕರೆದಿದ್ದೇನೆ ಮತ್ತು ಅವರು ಕರೆದಾಗ ಹೋಗಿದ್ದೇನೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಡಿಯೋ ಎಡಿಟ್ ಮಾಡಿ ಹರಿಬಿಟ್ಟ ಆರೋಪ: ಡಿಕೆ ಶಿವಕುಮಾರ್ ಸೇರಿ ಇತರರ ವಿರುದ್ಧ ಆರ್ ಅಶೋಕ್ ದೂರು