AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮರ್ಥ್​​​ ನನ್ನು ಗೆಲ್ಲಿಸಿದ್ರೆ ಮುಂದೆ ಸಮಸ್ಯೆ ಆಗಲಿದೆ: ಕಾಂಗ್ರೆಸ್ ಕಾರ್ಯಕರ್ತರಿಗೆ ಜೋಶಿ ಮಹತ್ವದ ಕರೆ

ಸಮರ್ಥ್​​​ ನನ್ನು ಗೆಲ್ಲಿಸಿದ್ರೆ ಮುಂದೆ ಸಮಸ್ಯೆ ಆಗಲಿದೆ: ಕಾಂಗ್ರೆಸ್ ಕಾರ್ಯಕರ್ತರಿಗೆ ಜೋಶಿ ಮಹತ್ವದ ಕರೆ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Apr 06, 2026 | 4:58 PM

Share

ಮನೆಯಲ್ಲಿ ಇವರ ತಾತ ಇದ್ದಾಗ ಎಂಎಲ್ ಎ , ಮಂತ್ರಿ. ಈಗ ಮತ್ತೆ ಮಗ ಶಾಸಕ ಆದರೆ ದಾವಣಗೆರೆ ಅಕ್ಕ ಪಕ್ಕದ ಕ್ಷೇತ್ರದಲ್ಲಿ ಅವರದೇ ಟಿಕೆಟ್ ಕೊಟ್ಟು ಇಡೀ ದಾವಣಗೆರೆ (Davanagere) ಕಬ್ಜಾ ಮಾಡಿಕೊಳ್ಳುತ್ತಾರೆ. ಈ ಹುಡುಗ ಗೆದ್ದರೆ ಹಿ ಈಸ್ ಅ ಸ್ಮಾಲ್ ಬಾಯ್. ಕಾಂಗ್ರೆಸ್ ಪಕ್ಷದವರು ಬಾಗಲಕೋಟೆಯಲ್ಲಿ ಅಹಿಂದ , ಇಲ್ಲಿ ಗೋವಿಂದ. ಟೇಕನ್ ಫಾರ್ ಗ್ರಾಂಟೆಡ್ ಇವರದ್ದು. ಇಲ್ಲಿ ಯಾರೂ ಸಮರ್ಥರಿರಲಿಲ್ಲವಾ? ನಿಮ್ಮ ಮನೆ ತನಕ್ಕೆ ಆಗಬೇಕಿತ್ತಾ? ಅಲ್ಲಿ ಪ್ರಿಯಾಂಕಾ ಗಾಂಧಿ ಮಗನಿಗೂ ಕ್ಷೇತ್ರ ಹುಡುಕುತ್ತಿದ್ದಾರೆ. ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (pralhad joshi) ಕಾಂಗ್ರೆಸ್​ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆ, (ಏಪ್ರಿಲ್ 06): ಮನೆಯಲ್ಲಿ ಇವರ ತಾತ ಇದ್ದಾಗ ಎಂಎಲ್ ಎ , ಮಂತ್ರಿ. ಈಗ ಮತ್ತೆ ಮಗ ಶಾಸಕ ಆದರೆ ದಾವಣಗೆರೆ ಅಕ್ಕ ಪಕ್ಕದ ಕ್ಷೇತ್ರದಲ್ಲಿ ಅವರದೇ ಟಿಕೆಟ್ ಕೊಟ್ಟು ಇಡೀ ದಾವಣಗೆರೆ (Davanagere) ಕಬ್ಜಾ ಮಾಡಿಕೊಳ್ಳುತ್ತಾರೆ. ಈ ಹುಡುಗ ಗೆದ್ದರೆ ಹಿ ಈಸ್ ಅ ಸ್ಮಾಲ್ ಬಾಯ್. ಕಾಂಗ್ರೆಸ್ ಪಕ್ಷದವರು ಬಾಗಲಕೋಟೆಯಲ್ಲಿ ಅಹಿಂದ , ಇಲ್ಲಿ ಗೋವಿಂದ. ಟೇಕನ್ ಫಾರ್ ಗ್ರಾಂಟೆಡ್ ಇವರದ್ದು. ಇಲ್ಲಿ ಯಾರೂ ಸಮರ್ಥರಿರಲಿಲ್ಲವಾ? ನಿಮ್ಮ ಮನೆ ತನಕ್ಕೆ ಆಗಬೇಕಿತ್ತಾ? ಅಲ್ಲಿ ಪ್ರಿಯಾಂಕಾ ಗಾಂಧಿ ಮಗನಿಗೂ ಕ್ಷೇತ್ರ ಹುಡುಕುತ್ತಿದ್ದಾರೆ. ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (pralhad joshi) ಕಾಂಗ್ರೆಸ್​ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೊಶಿ, ದಾವಣಗೆರೆಯಲ್ಲಿ ಸಿದ್ದೇಶ್ವರ್ ಅವರ ಕಾಲದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರು ಜಾಗೃತ ಆಗಬೇಕು. ಆ ಹುಡುಗನಿಗೆ ನೀವು ಈ ಸಲ ಗೆಲುವು ಕೊಟ್ಟರೆ ಮುಂದೆ ಸಮಸ್ಯೆ ಆಗಲಿದೆ. ಕಾಂಗ್ರೆಸ್ ನವರಿಗೂ ನಾನು ಕರೆ ಕೊಡುತ್ತೇನೆ, ಆ ಹುಡುಗನನ್ನ (ಸಮರ್ಥ್ ಶಾಮನೂರು) ಸೋಲಿಸಿ ಎಂದು ಕರೆ ನೀಡಿದರು.

ಅನ್ನಭಾಗ್ಯ ಅಕ್ಕಿ ಒಂದು ಅಗಳು ಕೊಡಿತ್ತಿಲ್ಲ. ನಾವು ಕೊಡುವ ಅಕ್ಕಿಯನ್ನು ಕೊಡುತ್ತಿದ್ದಾರೆ. ಎಲ್ ಪಿ ಜಿ ಗ್ಯಾಸ್ ತೊಂದರೆ ಇದೆ. ಆದ್ರೆ ಗೃಹ ಬಳಕೆಗೆ ಯಾವುದೇ ಸಮಸ್ಯೆ ಇಲ್ಲ. ರಾಹುಲ್ ಗಾಂಧಿ, ಸಿದ್ದರಾಮಯ್ಯನವರ ಹೇಳಿಕೆ ನೀವು ಕೇಳಿದ್ದೀರಿ. ಇನ್ನೆರಡು ದಿನಗಳಲ್ಲಿ ಪೆಟ್ರೋಲ್ ಸಿಗಲ್ಲ ಎಂದು ಹೇಳಿದ್ದಾರೆ. ಪೆಟ್ರೋಲ್ ನಿಮಗೆ ಸಿಕ್ಕಿಲ್ಲ ಅಂದರೆ ನಮಗೆ ಹೇಳಿ. ಶೇ 70ರಷ್ಟು ಪೆಟ್ರೀಲ್ ನಮ್ಮಲ್ಲಿ ಸ್ಟಾಕ್ ಎಂದು ಕಾಂಗ್ರೆಸ್ ನಾಯಕರ ಹೇಳಿಕೆ ತಿರುಗೇಟು ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us