Karnataka Budget 2025: ಬಜೆಟ್ ಬ್ಯಾಗ್​ನೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 07, 2025 | 10:57 AM

ಈ ಸಾಲಿನ ಬಜೆಟ್ ಅನ್ನು ಸಿದ್ದರಾಮಯ್ಯ ಹೇಗೆ ರೂಪಿಸಿದ್ದಾರೆ ಅನ್ನೋದು ಕುತೂಹಲಕಾರಿ ಸಂಗತಿಯಾಗಿದೆ. ವಿರೋಧ ಪಕ್ಷದ ನಾಯಕರು ಅಭಿವೃದ್ಧಿ ಕೆಲಸಗಳಿಗೆ ಅನುದಾನವನ್ನು ಮಂಜೂರು ಮಾಡುತ್ತಿಲ್ಲ, ಹಣವೆಲ್ಲ ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿದೆ ಎನ್ನುತ್ತಿದ್ದಾರೆ. ಹಾಗೆಯೇ, ಸಿದ್ದರಾಮಯ್ಯ ತಮ್ಮ ರಾಜಕೀಯ ಬದುಕಿನ ಕೊನೆಯ ಬಜೆಟ್ ಅನ್ನು ಇಂದು ಮಂಡಿಸಲಿದ್ದಾರೆ ಅಂತಲೂ ಹೇಳಲಾಗುತ್ತಿದೆ.

ಬೆಂಗಳೂರು, ಮಾರ್ಚ್ 6: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ದಾಖಲೆಯ 16ನೇ ಬಜೆಟ್ ಮಂಡಿಸಲು ವಿಧಾನಸೌಧಕ್ಕೆ ಅಗಮಿಸಿದರು. ಆಯವ್ಯಯ 2025-26 ಅಂತ ನಮೂದಿಸಲಾಗಿದ್ದ ಬ್ಯಾಗ್ ಜೊತೆ ಅವರು ಕಾರಲ್ಲಿ ಬಂದು ವಿಧಾನಸೌಧದೊಳಗೆ ವ್ಹೀಲ್ ಚೇರ್​ನಲ್ಲಿ ಹೋದರು. ಒಳಗಡೆ ಹೋಗುವ ಮೊದಲು ತಮ್ಮ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮತ್ತು ಬೇರೆ ಕೆಲ ಸಚಿವರೊಂದಿಗೆ ಮಾಧ್ಯಮದ ಕೆಮೆರಾಗಳಿಗೆ ಥಂಬ್ ಅಪ್ ಮಾಡಿ ನಗುತ್ತಾ ಪೋಸ್ ನೀಡಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Karnataka Budget 2025 Live Streaming: ಕರ್ನಾಟಕ ಬಜೆಟ್ ಮಂಡನೆ ಲೈವ್