ದಿಲ್ಲಿಯಲ್ಲಿ ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್​​​​​​ಸೈಡ್ ಡಿಟೇಲ್ಸ್

Edited By:

Updated on: May 26, 2026 | 3:01 PM

ಕರ್ನಾಟಕ ರಾಜಕೀಯದ ಅತ್ಯಂತ ದೊಡ್ಡ ಕುತೂಹಲಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಮುಖ್ಯಮಂತ್ರಿ ಕುರ್ಚಿಯ ‘ಫೈನಲ್ ಫೈಟ್’ ಆರಂಭವಾಗಿದ್ದು, ಇಡೀ ರಾಜ್ಯದ ಕಣ್ಣು ಈಗ ದೆಹಲಿಯತ್ತ ನೆಟ್ಟಿದೆ. ದೆಹಲಿಯ ಇಂದಿರಾ ಭವನದಲ್ಲಿ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಪ್ರತ್ಯೇಕ ನಡೆದಿದೆ. ಸುಮಾರು 20 ನಿಮಿಷಗಳ ಕಾಲ ಉಭಯ ನಾಯಕರ ಸಭೆ ನಡೆದಿದ್ದು, ಈ ವೇಳೆ ಗಂಭೀರ ಚರ್ಚೆಯಾಗಿವೆ. ಇನ್ನು ಸಾಧಕ-ಬಾಧಕಗಳ ಬಗ್ಗೆಯೂ ಸಹ ಸಿದ್ದರಾಮಯ್ಯನವರು ರಾಹುಲ್ ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನವದೆಹಲಿ, (ಮೇ 26): ಕರ್ನಾಟಕ (karnataka) ರಾಜಕೀಯದ  ಅತ್ಯಂತ ದೊಡ್ಡ ಕುತೂಹಲಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ (Congress High command )ಅಂಗಳದಲ್ಲಿ ಮುಖ್ಯಮಂತ್ರಿ ಕುರ್ಚಿಯ ‘ಫೈನಲ್ ಫೈಟ್’ ಆರಂಭವಾಗಿದ್ದು, ಇಡೀ ರಾಜ್ಯದ ಕಣ್ಣು ಈಗ ದೆಹಲಿಯತ್ತ ನೆಟ್ಟಿದೆ. ದೆಹಲಿಯ ಇಂದಿರಾ ಭವನದಲ್ಲಿ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಪ್ರತ್ಯೇಕ ನಡೆದಿದೆ. ಸುಮಾರು 45 ನಿಮಿಷಗಳ ಕಾಲ ಉಭಯ ನಾಯಕರ ಸಭೆ ನಡೆದಿದ್ದು, ಈ ವೇಳೆ ಗಂಭೀರ ಚರ್ಚೆಯಾಗಿವೆ. ಇನ್ನು ಸಾಧಕ-ಬಾಧಕಗಳ ಬಗ್ಗೆಯೂ ಸಹ ಸಿದ್ದರಾಮಯ್ಯನವರು ರಾಹುಲ್ ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಸಭೆ ಬಳಿಕ ಇದೀಗ ಮತ್ತೊಂದು ಮೀಟಿಂಗ್ ಆರಂಭವಾಗಿದೆ. ಎಐಸಿಸಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್, ವೇಣುಗೋಪಾಲ್,ಸುರ್ಜವಾಲಾ ಸಭೆ ನಡೆಸಿದ್ದು, ಇದಾದ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 26, 2026 02:52 PM
Follow Us
Pramod Shastri G