ಬೇಸಿಗೆ ಧಗೆ ಹೆಚ್ಚಾಗುತ್ತಿದ್ದಂತೆ ಬಿಯರ್‌ಗೆ ಭಾರಿ ಡಿಮ್ಯಾಂಡ್: ಚಿಲ್ ಬಿಯರ್ ಮೊರೆ ಹೋಗುತ್ತಿರುವ ಮದ್ಯಪ್ರಿಯರು
ಕೋಲಾರದಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಏರಿಕೆಯೊಂದಿಗೆ ಮದ್ಯಪ್ರಿಯರ ಅಭಿರುಚಿ ಬದಲಾಗಿದೆ. ಬಿಸಿಲಿನ ಧಗೆಗೆ ತಂಪು ಪಾನೀಯವಾದ ಬಿಯರ್‌ಗೆ 25-30% ರಷ್ಟು ಬೇಡಿಕೆ ಹೆಚ್ಚಾಗಿದ್ದು, ರಮ್ ಮತ್ತು ಬ್ರಾಂಡಿಯಂತಹ ಪಾನೀಯಗಳ ಬೇಡಿಕೆ ಶೇಕಡಾ 50 ರಷ್ಟು ಕಡಿಮೆಯಾಗಿದೆ. ಆದರೆ, ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಬಿಯರ್ ಪೂರೈಕೆ ಇರುವುದಿಲ್ಲ ಎಂದು ಬಾರ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋಲಾರ, ಏಪ್ರಿಲ್ 26: ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆಯೇ ಮದ್ಯದ ಅಂಗಡಿಗಳಲ್ಲಿ ಮಾರಾಟದ ಚಿತ್ರಣ ಸಂಪೂರ್ಣ ಬದಲಾಗಿದೆ. ಕಡು ಬಿಸಿಲಿನಿಂದಾಗಿ ರಮ್ ಮತ್ತು ಬ್ರಾಂದಿಗಿಂತಲೂ ಮದ್ಯಪ್ರಿಯರು ಚಿಲ್ ಆಗಿರುವ ಬಿಯರ್ ಮೊರೆ ಹೋಗುತ್ತಿದ್ದಾರೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಳೆದ ಕೆಲವು ವಾರಗಳಿಂದ ಬಿಯರ್ ಮಾರಾಟದಲ್ಲಿ ಶೇ 20 ರಿಂದ 25 ರಷ್ಟು ಗಣನೀಯ ಏರಿಕೆ ಕಂಡುಬಂದಿದೆ. ತಾಪಮಾನ ಏರಿಕೆಯಿಂದಾಗಿ ಬಿಯರ್ ಕುಡಿಯಲು ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಆಗದೆ ಬಾರ್ ಮಾಲೀಕರು ಬೇಸರಗೊಂಡಿದ್ದಾರೆ. ಒಂದೆಡೆ ಬಿಯರ್ ಅಬ್ಬರ ಜೋರಾಗಿದ್ದರೆ, ಮತ್ತೊಂದೆಡೆ ರಮ್ ಮತ್ತು ಬ್ರಾಂಡಿ ವ್ಯಾಪಾರದಲ್ಲಿ ಕುಸಿತ ಕಂಡುಬಂದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ
ಲಿಂಗನಮಕ್ಕಿ ಡ್ಯಾಂನಲ್ಲಿ ತೀವ್ರ ನೀರಿನ ಕೊರತೆ: ವಿದ್ಯುತ್ ಉತ್ಪಾದನೆ ಸ್ಥಗಿತ
ಪ್ರತಿ ವರ್ಷ ಒಂದೊಂದು ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ: ಸಿಎಂ
ಅಡ್ಡ ಮತದಾನ ಬಗ್ಗೆ ವಿಜಯೇಂದ್ರಗೆ ವವರದಿ ಸಲ್ಲಿಸಿ ಸಿ.ಟಿ ರವಿ ಹೇಳಿದ್ದೇನು?

