ಉಪ ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ಕಾಂಗ್ರೆಸ್ ಹೆಚ್ಚು ಬೀಗುವುದು ಬೇಡ: ಆರ್ ಅಶೋಕ
ಕಾಂಗ್ರೆಸ್ ಸರ್ಕಾರ ಉಪ ಚುನಾವಣೆ ಫಲಿತಾಂಶವನ್ನು ತನ್ನ ಹಗರಣಗಳಿಗೆ ಆಶ್ರಯವಾಗಿ ಬಳಸುವುದು ಬೇಡ, ಈ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ಸಾವಿಗೆ ಶರಣಾಗುವುದು ಹೆಚ್ಚಿದೆ, ವರ್ಗಾಣೆ ಧಂದೆ ಎಗ್ಗಿಲ್ಲದೆ ಸಾಗುತ್ತಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ-ಎಲ್ಲ ಸಂಗತಿಗಳನ್ನು ಅಸೆಂಬ್ಲಿ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಅಶೋಕ ಹೇಳಿದರು.
ಬೆಂಗಳೂರು: ವಿಧಾನಸೌಧದಲ್ಲಿ ಬಿಜೆಪಿ ಹಿರಿಯ ನಾಯಕರ ಮೀಟಿಂಗ್ ಮುಗಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ, ಉಪ ಚುನಾವಣೆಯಲ್ಲಿ ಎಲ್ಲ ಮೂರು ಸ್ಥಾನಗಳನ್ನು ಗೆದ್ದಿದ್ದಕ್ಕೆ ಸರ್ಕಾರ ಬೀಗುವುದು ಬೇಡ, ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 18 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎಲ್ಲವನ್ನೂ ಗೆದ್ದಿದ್ದ ಬಿಜೆಪಿ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ 66 ಸೀಟುಗಳನ್ನು ಮಾತ್ರ ಗೆದ್ದಿತ್ತು, ಅದೇ ಲೆಕ್ಕಾಚಾರ ಪರಿಗಣಿಸಿದರೆ ಹಗರಣಗಳಿಂದ ಕೂಡಿರುವ ಕಾಂಗ್ರೆಸ್ಗೆ ಮುಂದಿನ ಚುನಾವಣೆಯಲ್ಲಿ 20 ಸೀಟು ಬರಬಹುದು ಎಂದು ಹೇಳಿದರು
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮುಸ್ಲಿಮೇತರ ಸಮುದಾಯಗಳು ಒಂದುಗೂಡಿದ ಹಾಗೆ ಚನ್ನಪಟ್ಟಣದಲ್ಲಿ ಆಗಲಿಲ್ಲ: ಅಶೋಕ