AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನದ ಅಂಬಾರಿ ಹೊರಲು ಪ್ರಶಾಂತ ಸಿದ್ಧ: ಆಯ್ಕೆ ಪ್ರಕ್ರಿಯೆ ಎಷ್ಟು ಸವಾಲಾಗಿತ್ತು ಎಂಬುದನ್ನು ವಿವರಿಸಿದ ಸಿಸಿಎಫ್ ರವಿಶಂಕರ್

ಚಿನ್ನದ ಅಂಬಾರಿ ಹೊರಲು ಪ್ರಶಾಂತ ಸಿದ್ಧ: ಆಯ್ಕೆ ಪ್ರಕ್ರಿಯೆ ಎಷ್ಟು ಸವಾಲಾಗಿತ್ತು ಎಂಬುದನ್ನು ವಿವರಿಸಿದ ಸಿಸಿಎಫ್ ರವಿಶಂಕರ್

ರಾಮ್​, ಮೈಸೂರು
| Edited By: |

Updated on: Oct 15, 2026 | 10:48 AM

Share

ಮೈಸೂರು ದಸರಾ 2026ರ ಜಂಬೂ ಸವಾರಿ ಕ್ಯಾಪ್ಟನ್ ಆಗಿ ಪ್ರಶಾಂತ ಆನೆಯನ್ನು ಆಯ್ಕೆ ಮಾಡಲಾಗಿದೆ. 18 ಬಾರಿ ದಸರೆಯಲ್ಲಿ ಭಾಗವಹಿಸಿದ್ದ ಪ್ರಶಾಂತ, ಮಹೇಂದ್ರ, ಸುಗ್ರೀವ, ಏಕಲವ್ಯ, ಧನಂಜಯ ಸೇರಿದಂತೆ ಐದು ಆನೆಗಳ ಪೈಪೋಟಿಯಲ್ಲಿ ವಿಜಯಿಯಾಗಿದೆ. ಸಿ.ಸಿ.ಎಫ್. ರವಿಶಂಕರ್ ಅವರು ಈ ಆಯ್ಕೆ ಸವಾಲಿನಿಂದ ಕೂಡಿದ್ದರೂ, ಪ್ರಶಾಂತನ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರು, ಅಕ್ಟೋಬರ್ 15: ವಿಶ್ವ ವಿಖ್ಯಾತ ಮೈಸೂರು ದಸರಾ 2026ರ ಜಂಬೂ ಸವಾರಿಯ ಕ್ಯಾಪ್ಟನ್ ಆಗಿ ಪ್ರಶಾಂತ ಆನೆಯನ್ನು ಆಯ್ಕೆ ಮಾಡಲಾಗಿದೆ. 1993ರಲ್ಲಿ ಸೆರೆ ಸಿಕ್ಕಿದ್ದ ಪ್ರಶಾಂತ, ತನ್ನ ಶಾಂತ ಸ್ವಭಾವ ಮತ್ತು ಕಾಡಾನೆ ಹಾಗೂ ಹುಲಿ ಕಾರ್ಯಾಚರಣೆಗಳಲ್ಲಿನ ಯಶಸ್ಸಿಗೆ ಹೆಸರುವಾಸಿಯಾಗಿದೆ. ಬರೋಬ್ಬರಿ 18 ಬಾರಿ ಮೈಸೂರು ಜಂಬೂ ಸವಾರಿಯಲ್ಲಿ ಭಾಗವಹಿಸಿದ ಅನುಭವ ಪ್ರಶಾಂತನಿಗಿದೆ. ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಆನೆಗಳ ತಾಲೀಮು ಮತ್ತು ಅವುಗಳ ಗುಣಲಕ್ಷಣಗಳನ್ನು ಪರೀಕ್ಷಿಸಿ ಕ್ಯಾಪ್ಟನ್ ಆಯ್ಕೆ ಮಾಡಲಾಗಿದೆ. ಮಹೇಂದ್ರ, ಸುಗ್ರೀವ, ಏಕಲವ್ಯ, ಪ್ರಶಾಂತ, ಧನಂಜಯ ಸೇರಿ ಐದು ಆನೆಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಇದರಲ್ಲಿ ಪ್ರಶಾಂತ ಅಂತಿಮವಾಗಿ ಜಯಶಾಲಿಯಾಗಿದೆ.

ಈ ಕುರಿತು ಮಾತನಾಡಿದ ಸಿಸಿ ಎಫ್. ರವಿಶಂಕರ್, ಈ ಬಾರಿಯ ಆಯ್ಕೆ ಪ್ರಕ್ರಿಯೆ ಒಂದು ಸವಾಲಿನಿಂದ ಕೂಡಿತ್ತು ಎಂದು ತಿಳಿಸಿದ್ದಾರೆ. ನಾಗರಹೊಳೆ ಮತ್ತು ಬಂಡೀಪುರ ಪ್ರದೇಶಗಳಲ್ಲಿ ಆನೆಗಳ ಇತ್ತೀಚಿನ ಕಾರ್ಯಾಚರಣೆಗಳು, ಮಾವುತರ ಜೊತೆಗಿನ ಸಂಬಂಧ, ಸಾರ್ವಜನಿಕ ಪ್ರದೇಶದಲ್ಲಿ ಅವುಗಳ ವರ್ತನೆ ಹಾಗೂ ತಾಲೀಮಿನಲ್ಲಿ ಮರಳು ಮೂಟೆ ಹೊರುವ ಸಾಮರ್ಥ್ಯವನ್ನು ಪರಿಗಣಿಸಿ ಪ್ರಶಾಂತನನ್ನು ಆಯ್ಕೆ ಮಾಡಲಾಗಿದೆ ಎಂದರು. ಪ್ರಶಾಂತನ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಚಾಮುಂಡೇಶ್ವರಿಯ ಕೃಪೆಯಿಂದ ಎಲ್ಲವೂ ಸಾಂಗವಾಗಿ ನೆರವೇರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More