AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ: ಜಂಬೂಸವಾರಿಯಲ್ಲಿ 12 ಆನೆಗಳು ಫೈನಲ್​​! ಯಾರಿಗೆ ಯಾವ ಸ್ಥಾನ?

ಮೈಸೂರು ದಸರಾ: ಜಂಬೂಸವಾರಿಯಲ್ಲಿ 12 ಆನೆಗಳು ಫೈನಲ್​​! ಯಾರಿಗೆ ಯಾವ ಸ್ಥಾನ?

ರಾಮ್​, ಮೈಸೂರು
| Edited By: |

Updated on: Oct 15, 2026 | 10:44 PM

Share

ಮುಖ್ಯಾಂಶಗಳು

  • ಈ ಬಾರಿಯ ಜಂಬೂಸವಾರಿಗೆ 12 ಆನೆಗಳು ಫೈನಲ್​​
  • ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ ಪ್ರಶಾಂತ
  • ಅಭಿಮನ್ಯು ನಿಶಾನೆ ಆನೆಯಾಗಿ ಆಯ್ಕೆ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗಾಗಿ 12 ಆನೆಗಳ ತಂಡ ಅಂತಿಮಗೊಂಡಿದೆ. ಪ್ರಶಾಂತ ಆನೆ ಕ್ಯಾಪ್ಟನ್ ಆಗಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಪಡೆದಿದೆ. ಅಭಿಮನ್ಯುಗೆ ನಿಶಾನೆ ಆನೆ ಪಾತ್ರ ಹಾಗೂ ಗೋಪಿಗೆ ನೌಬತ್ ಆನೆ ಪಾತ್ರ ನೀಡಲಾಗಿದೆ. ಇತರ ಆನೆಗಳಿಗೆ ಸಾಲಾನೆಗಳಾಗಿ ವಿವಿಧ ತಂಡಗಳಲ್ಲಿ ಸ್ಥಾನ ನೀಡಲಾಗಿದ್ದು, ಎಲ್ಲೆಡೆ ಕುತೂಹಲ ಮೂಡಿಸಿದೆ.

ಮೈಸೂರು, ಅಕ್ಟೋಬರ್​​ 15: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ 12 ಗಜಪಡೆಗಳ ಪಟ್ಟಿ ಅಂತಿಮಗೊಂಡಿದೆ. ಈ ಬಾರಿಯ ದಸರಾದಲ್ಲಿ ಪ್ರಶಾಂತ ಆನೆಯನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದ್ದು, ಚಿನ್ನದ ಅಂಬಾರಿ ಹೊರುವ ಬಹುಮುಖ್ಯ ಜವಾಬ್ದಾರಿ ಆತನ ಹೆಗಲೇರಿದೆ. ಕಳೆದ ಬಾರಿ ನಿಶಾನೆ ಆನೆಯಾಗಿದ್ದ ಅಭಿಮನ್ಯುವನ್ನು ಈ ಬಾರಿ ಗೌರವಪೂರ್ವಕವಾಗಿ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಸಾಗಲು ಆಯ್ಕೆ ಮಾಡಲಾಗಿದೆ. ಅಭಿಮನ್ಯು ಹೆಜ್ಜೆ ಇಟ್ಟ ನಂತರ ನೌಬತ್ ಆನೆಯಾಗಿ ಗೋಪಿ ಆನೆ ಸಾಗಲಿದೆ. ಒಟ್ಟು 13 ಆನೆಗಳನ್ನು ಕಾಡಿನಿಂದ ಕರೆತರಲಾಗಿದ್ದು, ಧನಂಜಯ ಆನೆಗೆ ಶ್ರೀರಂಗಪಟ್ಟಣ ದಸರಾದಲ್ಲಿ ಮರದ ಅಂಬಾರಿ ಹೊರುವ ಜವಾಬ್ದಾರಿ ನೀಡಿರುವುದರಿಂದ ಜಂಬೂಸವಾರಿಯಿಂದ ವಿಶ್ರಾಂತಿ ನೀಡಲಾಗಿದೆ. ಇನ್ನುಳಿದಂತೆ ಮಹೇಂದ್ರ, ಲಕ್ಷ್ಮಿ, ಶ್ರೀರಾಮ, ಚೈತ್ರ, ಸುಗ್ರೀವ, ಶ್ರೀಕಂಠ, ಏಕಲವ್ಯ, ಕಾವೇರಿ ಮತ್ತು ರೂಪಾ ಆನೆಗಳು ಸಾಲಾನೆಗಳಾಗಿ ಮತ್ತು ಕುಮ್ಕಿ ಆನೆಗಳಾಗಿ ಜಂಬೂಸವಾರಿಗೆ ಆಯ್ಕೆಯಾಗಿವೆ. ಈ ವರ್ಷ ಪ್ರಶಾಂತ ಆನೆ ಮೊದಲ ಬಾರಿಗೆ ನಾಯಕತ್ವ ವಹಿಸಿದ್ದು, ಇಡೀ ತಂಡದ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More