AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸ್​​ ಕ್ರೀಂನಲ್ಲಿ ಸಿಕ್ತು ರಬ್ಬರ್​​: ಪ್ರತಿಷ್ಠಿತ ಹೋಟೆಲ್​​ಗೆ ನಗರಸಭೆಯಿಂದ ಭರ್ಜರಿ ದಂಡ

ಐಸ್​​ ಕ್ರೀಂನಲ್ಲಿ ಸಿಕ್ತು ರಬ್ಬರ್​​: ಪ್ರತಿಷ್ಠಿತ ಹೋಟೆಲ್​​ಗೆ ನಗರಸಭೆಯಿಂದ ಭರ್ಜರಿ ದಂಡ

ಪ್ರಸನ್ನ ಹೆಗಡೆ
|

Updated on:Apr 12, 2026 | 6:26 AM

Share

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಉಡುಪಿ ಗ್ರಾಂಡ್ ಹೋಟೆಲ್‌ನಲ್ಲಿ ಐಸ್ ಕ್ರೀಮ್‌ನಲ್ಲಿ ರಬ್ಬರ್ ಬ್ಯಾಂಡ್ ಪತ್ತೆಯಾಗಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಧನಂಜಯ ಎಂಬ ಗ್ರಾಹಕರಿಗೆ ಈ ಅನುಭವವಾಗಿದ್ದು, ಹೋಟೆಲ್ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದರು. ಟಿವಿ9 ವರದಿ ಬಳಿಕ ನೆಲಮಂಗಲ ನಗರಸಭೆ ಹೋಟೆಲ್‌ಗೆ 20,000 ದಂಡ ವಿಧಿಸಿದೆ. ಹೋಟೆಲ್‌ನ ನೈರ್ಮಲ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ನೆಲಮಂಗಲ, ಏಪ್ರಿಲ್​​ 12: ರಾಜ್ಯದ ಹಲವೆಡೆ ಶಾಖೆಗಳನ್ನು ಹೊಂದಿರುವ ಪ್ರತಿಷ್ಠಿತ ಉಡುಪಿ ಗ್ರಾಂಡ್ ಹೋಟೆಲ್​​ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೊಂಡಿಕೊಪ್ಪದಲ್ಲಿರುವ ಶಾಖೆಯಲ್ಲಿ ನೈರ್ಮಲ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ. ಧನಂಜಯ ಎಂಬ ಗ್ರಾಹಕರು ತಮ್ಮ ಊಟದ ನಂತರ ಆರ್ಡರ್ ಮಾಡಿದ ಐಸ್ ಕ್ರೀಮ್‌ನಲ್ಲಿ ರಬ್ಬರ್ ಬ್ಯಾಂಡ್ ಪತ್ತೆಯಾಗಿದೆ. ಐಸ್ ಕ್ರೀಮ್‌ನ ಮಧ್ಯಭಾಗದಲ್ಲಿ ರಬ್ಬರ್ ಬ್ಯಾಂಡ್ ಇದ್ದು, ಇದನ್ನು ಮಕ್ಕಳು ಸೇವಿಸಿದ್ದರೆ ಅಪಾಯವಾಗುವ ಸಾಧ್ಯತೆ ಇತ್ತು ಎಂದು ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಹಕರು ಈ ಬಗ್ಗೆ ಪ್ರಶ್ನಿಸಿದಾಗ ಹೋಟೆಲ್ ಮಾಲೀಕರು ಉಡಾಫೆ ಉತ್ತರ ನೀಡಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆರಳಿದ ಗ್ರಾಹಕರು ಹೋಟೆಲ್ ಲೈಸೆನ್ಸ್ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಈ ಘಟನೆ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾದ ನಂತರ, ನೆಲಮಂಗಲ ನಗರಸಭೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಹೋಟೆಲ್‌ಗೆ 20,000 ದಂಡ ವಿಧಿಸಿದ್ದಾರೆ. ಹೋಟೆಲ್ ಮಾಲೀಕರು ನಂತರ ಕ್ಷಮೆ ಯಾಚಿಸಿ, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Published on: Apr 12, 2026 06:26 AM
Follow Us
Prasanna Hegde
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More