AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Gas Connection Problem: ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ

New Gas Connection Problem: ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ

ಸಂಜಯ್ಯಾ ಚಿಕ್ಕಮಠ
| Edited By: |

Updated on: Sep 02, 2026 | 10:48 AM

Share

ಕಳೆದ ಆರು ತಿಂಗಳಿಂದ ದೇಶಾದ್ಯಂತ ಹೊಸ ಗೃಹಬಳಕೆ ಎಲ್​ಪಿಜಿ ಸಂಪರ್ಕಗಳು ಲಭ್ಯವಿಲ್ಲದೆ ಗ್ರಾಹಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧದ ಪರಿಣಾಮವಾಗಿ ಉಂಟಾದ ಗ್ಯಾಸ್ ಅಭಾವವನ್ನು ನಿಭಾಯಿಸಲು ಕೇಂದ್ರ ಸರ್ಕಾರ ಗ್ಯಾಸ್ ಏಜೆನ್ಸಿಗಳಿಗೆ ಹೊಸ ಗೃಹಬಳಕೆ ಸಿಲಿಂಡರ್ ಸಂಪರ್ಕಗಳನ್ನು ನೀಡದಂತೆ ಸೂಚಿಸಿತ್ತು.

ಹುಬ್ಬಳ್ಳಿ, ಸೆಪ್ಟೆಂಬರ್ 02: ಕಳೆದ ಆರು ತಿಂಗಳಿಂದ ದೇಶಾದ್ಯಂತ ಹೊಸ ಗೃಹಬಳಕೆ ಎಲ್​ಪಿಜಿ ಸಂಪರ್ಕಗಳು ಲಭ್ಯವಿಲ್ಲದೆ ಗ್ರಾಹಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧದ ಪರಿಣಾಮವಾಗಿ ಉಂಟಾದ ಗ್ಯಾಸ್ ಅಭಾವವನ್ನು ನಿಭಾಯಿಸಲು ಕೇಂದ್ರ ಸರ್ಕಾರ ಗ್ಯಾಸ್ ಏಜೆನ್ಸಿಗಳಿಗೆ ಹೊಸ ಗೃಹಬಳಕೆ ಸಿಲಿಂಡರ್ ಸಂಪರ್ಕಗಳನ್ನು ನೀಡದಂತೆ ಸೂಚಿಸಿತ್ತು.

ಈಗ ಯುದ್ಧ ಕೊನೆಗೊಂಡಿದ್ದು, ಗ್ಯಾಸ್ ಅಭಾವ ಸಂಪೂರ್ಣವಾಗಿ ಕಡಿಮೆಯಾಗಿದೆ. ವಾಣಿಜ್ಯ ಮತ್ತು ಆಟೋ ಎಲ್​ಪಿಜಿ ಸಿಲಿಂಡರ್‌ಗಳು ಸುಲಭವಾಗಿ ಲಭ್ಯವಿವೆ. ಆದರೂ, ಕೇಂದ್ರ ಸರ್ಕಾರ ವಿಧಿಸಿದ್ದ ನಿಯಮವನ್ನು ಸಡಿಲಿಸದ ಕಾರಣ ಗ್ಯಾಸ್ ಏಜೆನ್ಸಿಗಳು ಹೊಸ ಸಂಪರ್ಕಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ಮದುವೆಯಾದವರು, ಬೇರೆ ನಗರಗಳಿಗೆ ತೆರಳಿದವರು ಸೇರಿದಂತೆ ಅನೇಕರು ಕಳೆದ ಐದಾರು ತಿಂಗಳಿಂದ ಅರ್ಜಿ ಸಲ್ಲಿಸಿ ಕಾಯುತ್ತಿದ್ದರೂ ಅವರಿಗೆ ಸಂಪರ್ಕ ಸಿಗುತ್ತಿಲ್ಲ. ಏಜೆನ್ಸಿಗಳು 10 ಕೆಜಿ ವಾಣಿಜ್ಯ ಸಿಲಿಂಡರ್‌ಗಳನ್ನು 1700 ರೂ.ಗೆ ಗೃಹಬಳಕೆಗೂ ನೀಡುತ್ತಿವೆ, ಆದರೆ ಇದು ಸಾಮಾನ್ಯರಿಗೆ ದುಬಾರಿಯಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರ ಶೀಘ್ರವೇ ಹೊಸ ಸಂಪರ್ಕಗಳಿಗೆ ಅನುಮತಿ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us