ಸ್ಫೋಟದಲ್ಲಿ 9 ಜನ ಗಾಯಗೊಂಡಿದ್ದಾರೆ, ಬ್ಲಾಸ್ಟ್ ಹೇಗೆ ಸಂಭವಿಸಿತು, ಸ್ಫೋಟಕ ಯಾವುದು ಅಂತ ಗೊತ್ತಾಗಿಲ್ಲ: ಜಿ ಪರಮೇಶ್ವರ್, ಗೃಹ ಸಚಿವ

ತಾವು ಸಾಧ್ಯವಾದರೆ ಇಂದು ರಾತ್ರಿ ಇಲ್ಲವೇ ನಾಳೆ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡುವುದಾಗಿ ಸಚಿವ ಹೇಳಿದರು. ಐಈಡಿ ಸ್ಫೋಟ ಅಂತ ಸಂಶಯ ವ್ಯಕ್ತಡಿಸಲಾಗುತ್ತಿದೆಯಾದರೂ ಅದಿನ್ನೂ ಖಚಿತಪಟ್ಟಿಲ್ಲ, ಸ್ಯಾಂಪಲ್ ಗಳ ಪರಿಶೀಲನೆ ಬಳಿಕವೇ ಸ್ಫೋಟಕ ವಸ್ತುವಿನ ಬಗ್ಗೆ ಗೊತ್ತಾಗಲಿದೆ, ಇದು ಬಹಳ ಸೂಕ್ಷ್ಮ ವಿಷಯವಾಗಿರುವುದರಿಂದ ಹೀಗಿರಬಹುದು ಹಾಗಿರಬಹುದು ಎಂದು ಹೇಳಲಾಗದು ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು: ಇಡೀ ರಾಜ್ಯವನ್ನು ತಲ್ಲಣಕ್ಕೆ ದೂಡಿರುವ ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಸ್ಫೋಟ (Rameswaram café blast) ಪ್ರಕರಣದ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಪ್ರತಿಕ್ರಿಯೆ ನೀಡಿದ್ದಾರೆ. ತುಮಕೂರುನಲ್ಲಿ ಮಾಧ್ಯಮ ಪ್ರತಿಧಿಗಳೊಂದಿಗೆ ಮಾತಾಡಿದ ಅವರು, ಬ್ಲಾಸ್ಟ್ ಹೇಗೆ ಸಂಭವಿಸಿದೆ ಇನ್ನೂ ಗೊತ್ತಾಗಿಲ್ಲ, ಪೊಲೀಸ್ ಕಮೀಶನರ್ (City police commissioner), ಬಾಂಬ್ ಸ್ಕ್ವ್ಯಾಡ್ ಮತ್ತು ಎಫ್ ಎಸ್ ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಅಲ್ಲಿಂದ ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದಾರೆ. ಸ್ಫೋಟದ ಮೂಲ ಪತ್ತೆಯಾಗಲು ಸಮಯ ಹಿಡಿಯಲಿದೆ ಎಂದು ಹೇಳಿದರು. ಘಟನೆಯಲ್ಲಿ 9 ಜನ ಗಾಯಗೊಂಡಿದ್ದಾರೆ, ಯಾರೂ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿಲ್ಲ, ತಾವು ಸಾಧ್ಯವಾದರೆ ಇಂದು ರಾತ್ರಿ ಇಲ್ಲವೇ ನಾಳೆ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡುವುದಾಗಿ ಸಚಿವ ಹೇಳಿದರು. ಐಈಡಿ ಸ್ಫೋಟ ಅಂತ ಸಂಶಯ ವ್ಯಕ್ತಡಿಸಲಾಗುತ್ತಿದೆಯಾದರೂ ಅದಿನ್ನೂ ಖಚಿತಪಟ್ಟಿಲ್ಲ, ಸ್ಯಾಂಪಲ್ ಗಳ ಪರಿಶೀಲನೆ ಬಳಿಕವೇ ಸ್ಫೋಟಕ ವಸ್ತುವಿನ ಬಗ್ಗೆ ಗೊತ್ತಾಗಲಿದೆ, ಇದು ಬಹಳ ಸೂಕ್ಷ್ಮ ವಿಷಯವಾಗಿರುವುದರಿಂದ ಹೀಗಿರಬಹುದು ಹಾಗಿರಬಹುದು ಎಂದು ಹೇಳಲಾಗದು ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಬೆಳಗಾವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್ 

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us