ಕಾರ್ಪೋರೇಷನ್ ನಲ್ಲಿ ಆನ್ ಮಾಡಿದರೆ ಗಾಳಿ ಬಂದು ಮೀಟರ್ ಓಡುತ್ತದೆ, ಗಾಳಿಗೂ ಹಣ ಕೊಡಬೇಕಾ? ಮುನಿರತ್ನ

|

Updated on: Aug 24, 2024 | 1:51 PM

ಬೆಂಗಳೂರಿನ ನಿವಾಸಿಗಳು ಕಷ್ಟಪಟ್ಟು ದುಡಿದು ನಗರದಲ್ಲಿ ಆಸ್ತಿಪಾಸ್ತಿ ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಆಸ್ತಿಗಳ ತೆರಿಗೆಯನ್ನು ಬಿಬಿಎಂಪಿಗೆ ಸಂದಾಯ ಮಾಡುತ್ತಾರೆ ಇದರಲ್ಲಿ ಶಿವಕುಮಾರ್ ಮಾಡುವ ಉಪಕಾರ ಎಲ್ಲಿಂದ ಬಂತು? ಯಾವ ಪುರುಷಾರ್ಥಕ್ಕೆ ಅವರು ಕ್ರೆಡಿಟ್ ತೆಗೆದುಕೊಳ್ಳಬಯಸಿದ್ದಾರೆ ಅಂತ ಬೆಂಗಳೂರು ಜನಕ್ಕೆ ಅರ್ಥವಾಗುತ್ತಿಲ್ಲ ಎಂದು ಮುನಿರತ್ನ ಹೇಳಿದರು

ಬೆಂಗಳೂರು: ನಗರದಲ್ಲಿಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ಜೊತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಆರ್ ಆರ್ ನಗರ ಶಾಸಕ ಮುನಿರತ್ನ ನಾಯ್ಡು, ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರ ಯೋಜನೆಗಳನ್ನು ತರಾಟೆಗೆ ತೆಗದುಕೊಳ್ಳುತ್ತಾ ಲೇವಡಿ ಮಾಡಿದರು. ನಿನ್ನೆ ಶಿವಕುಮಾರ್ ಬೆಂಗಳೂರು ನಗರದ ಜನರಿಗೆ ಏನೇ ಮಾಡಿದರೂ ಉಪಕಾರ ಸ್ಮರಣೆ ಅನ್ನೋದು ಇಲ್ಲ, ಮಾಡೋದೆಲ್ಲ ವ್ಯರ್ಥ ಅಂದಿದ್ದಾರೆ, ಉಪಕಾರ ನೆನಸಲು ಇವರು ಮಾಡಿದ್ದಾದರೂ ಏನು? ಬೆಂಗಳೂರುಗೆ ಏನೂ ಮಾಡಬಾರದು ಅನ್ನೋದು ಅವರ ಮಾತಿನ ತಾತ್ಪರ್ಯ ಎಂದು ಮುನಿರತ್ನ ಹೇಳಿದರು. ಇವರು ಮಾಡುವ ದಬ್ಬಾಳಿಕೆಯನ್ನು ಸಹಿಸಿಕೊಂಡರೆ ಬೆಂಗಳೂರು ಜನ ಒಳ್ಳೆಯವರೇ? ಅಸಲಿಗೆ ಗ್ಯಾರಂಟಿ ಸ್ಕೀಮ್ ಗಳಿಗೆ ಹಣ ಹೊಂದಿಸಲಾಗಿದೆ ಸರ್ಕಾರ ಕಂಗಾಲಾಗಿದೆ.

‘ಅತ್ತು’ ಕೇಜಿ ಅಕ್ಕಿ ಕೊಡುತ್ತೇವೆ ಅಂದವರು ಪ್ರಧಾನ ಮಂತ್ರಿಯವರ ಯೋಜನೆಯ 5 ಕೇಜಿ ಅಕ್ಕಿ ಮಾತ್ರ ಕೊಡುತ್ತಿದ್ದಾರೆ ಉಳಿದ 5ಕೇಜಿಗೆ ಹಣ ಹೊಂದಿಸಲು ಪರದಾಡುತ್ತಿದ್ದಾರೆ ಎಂದು ಮುನಿರತ್ನ ಹೇಳಿದರು. ನಗರದ ರಸ್ತೆಗಳಲ್ಲಿ ಗುಂಡಿ ಮುಚ್ಚಿಸಲು ಶಿವಕುಮಾರ್ ಪ್ರತಿವಾರ್ಡ್ ಗೆ ₹15 ಲಕ್ಷ ಬಿಡುಗಡೆ ಮಾಡಿದ್ದಾರೆ. ಆರ್ ಅರ್ ನಗರ ಕ್ಷೇತ್ರದ ವಿಸ್ತೀರ್ಣ 964 ಕಿಮೀ ಇದೆ. ಅಲ್ಲಿ ಒಂದು ವಾರ್ಡ್ ನ ವಿಸ್ತೀರ್ಣ 224 ಕಿಮೀ, ಅಂದರೆ 15ಲಕ್ಷ ರೂ. ಗಳಿಂದ ನಾಲ್ಕು ಗುಂಡಿಗಳನ್ನು ಮಾತ್ರ ಮುಚ್ಚಬಹುದು ಎಂದು ಮುನಿರತ್ನ ಹೇಳಿದರು.

ನೀರಿನ ದರ ಹೆಚ್ಚು ಮಾಡಲಿರುವುದನ್ನು ಗೇಲಿ ಮಾಡಿದ ಶಾಸಕ, ಮನೆಗಳಲ್ಲಿ ನಲ್ಲಿ ಆನ್ ಮಾಡಿದರೆ ಗಾಳಿ ಬರುತ್ತದೆ ಮತ್ತು ಮೀಟರ್ ಓಡಲಾರಂಭಿಸುತ್ತದೆ, ನೀರು ಕೊಟ್ಟು ದರ ಹೆಚ್ಚಿಸಿದರೆ ಜನ ಮೆಚ್ಚಿಯಾರು ಎಂದರು. ಅವರು ಶಿವಕುಮಾರ್ ಅವರ ಟನೆಲ್ ರೋಡ್ ಯೋಜನೆಯನ್ನು ಲೇವಡಿ ಮಾಡಿದಾಗ ಪಕ್ಕದಲ್ಲಿದ್ದ ಅಶೋಕ ಮನಸಾರೆ ನಕ್ಕರು.
.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿದ್ದರಾಮಯ್ಯ ಕಾಲೆಳೆಯುತ್ತ ಗುಣಗಾನ ಮಾಡಿ ಅನುದಾನ ಯಾಚಿಸಿದ ಮುನಿರತ್ನ ನಾಯ್ಡು!

Follow us on