AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೀಕರ ಅಪಘಾತ: ಬೈಕ್‌ನಿಂದ ಬಿದ್ದ ಮಹಿಳೆಯ ಮೇಲೆಯೇ ಹರಿದ ಟಿಪ್ಪರ್, ಎಡಗಾಲು ಕಟ್

ಭೀಕರ ಅಪಘಾತ: ಬೈಕ್‌ನಿಂದ ಬಿದ್ದ ಮಹಿಳೆಯ ಮೇಲೆಯೇ ಹರಿದ ಟಿಪ್ಪರ್, ಎಡಗಾಲು ಕಟ್

ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Sep 05, 2026 | 2:42 PM

Share

ರಬಕವಿ ಪಟ್ಟಣದಲ್ಲಿ ಅವೈಜ್ಞಾನಿಕ ಗುಂಡಿ ರಸ್ತೆ ಮತ್ತೊಂದು ಭೀಕರ ಅಪಘಾತಕ್ಕೆ ಕಾರಣವಾಗಿದೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ 25 ವರ್ಷದ ತಬಸ್ಸುಮ್ ನದಾಫ್ ರಸ್ತೆಗುಂಡಿಗೆ ಬಿದ್ದು, ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಅವರ ಎಡಗಾಲಿನ ಮೇಲೆ ಹರಿದಿದೆ. ಪರಿಣಾಮವಾಗಿ ಕಾಲು ಸಂಪೂರ್ಣವಾಗಿ ಛಿದ್ರವಾಗಿದೆ. ಈ ದುರ್ಘಟನೆ ರಸ್ತೆ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ರಬಕವಿ, ಸೆ.5: ಅವೈಜ್ಞಾನಿಕ ಹಾಗೂ ತಗ್ಗು-ಗುಂಡಿ ಬಿದ್ದ ರಸ್ತೆಯು ಮತ್ತೊಂದು ದಾರುಣ ಅಪಘಾತಕ್ಕೆ ಸಾಕ್ಷಿಯಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ರಬಕವಿ ಪಟ್ಟಣದಲ್ಲಿ ರಸ್ತೆಗುಂಡಿಗೆ ಬೈಕ್ ಪುಟಿದು ಕೆಳಗೆ ಬಿದ್ದ ಮಹಿಳೆಯ ಮೇಲೆ ಟಿಪ್ಪರ್ ಹರಿದು ಎಡಗಾಲು ಸಂಪೂರ್ಣವಾಗಿ ಕಟ್ ಆದ ಭೀಕರ ಘಟನೆ ನಡೆದಿದೆ. ಮಹಿಳೆಯನ್ನು ರಬಕವಿಯ ತಬಸ್ಸುಮ್ ನದಾಫ್ (25) ಎಂದು ಗುರುತಿಸಲಾಗಿದೆ. ತಬಸ್ಸುಮ್ ಅವರು ತಮ್ಮ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತು ತೆರಳುತ್ತಿದ್ದರು. ರಬಕವಿ ಪಟ್ಟಣದ ಚಿತ್ತರಗಿ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿದ್ದ ಬೃಹತ್ ತಗ್ಗು-ಗುಂಡಿಗೆ ಬೈಕ್ ಚಕ್ರ ಬಿದ್ದ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿ, ಮಹಿಳೆ ರಸ್ತೆಗೆ ಪುಟಿದು ಬಿದ್ದಿದ್ದಾರೆ. ಅದೇ ಸಮಯಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ, ರಸ್ತೆಗೆ ಬಿದ್ದ ತಬಸ್ಸುಮ್ ಅವರ ಕಾಲಿನ ಮೇಲೆ ಹರಿದಿದೆ. ಪರಿಣಾಮವಾಗಿ ಅವರ ಎಡಗಾಲು ತೀವ್ರವಾಗಿ ಜಜ್ಜಲ್ಪಟ್ಟು ಕಟ್ ಆಗಿದೆ. ಬೈಕ್ ಗುಂಡಿಗೆ ಬಿದ್ದು ಮಹಿಳೆ ಕೆಳಗೆ ಬೀಳುವ ಹಾಗೂ ಟಿಪ್ಪರ್ ಹರಿಯುವ ಕಟುಕ ಹಾಗೂ ಭೀಕರ ದೃಶ್ಯಗಳು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us