ಲಾಯರ್ ದೇವರಾಜೇಗೌಡ ಬಗ್ಗೆ ಶಾಕಿಂಗ್ ರಿಯಾಕ್ಷನ್ ಕೊಟ್ಟ ರವಿ ಗಣಿಗ
ಕಿಡ್ನ್ಯಾಪ್ ಕೇಸ್ನಲ್ಲಿ ಶಾಸಕ ಹೆಚ್.ಡಿ.ರೇವಣ್ಣ ಬಂಧನದ ಹಿಂದೆ ಬಿಜೆಪಿಯ ಷಡ್ಯಂತ್ರವಿದೆ ಎಂದು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿ ಗಣಿಗ ಶಾಕಿಂಗ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಜನಾರ್ದನರೆಡ್ಡಿಯನ್ನು ನಿಯಂತ್ರಿಸಿ ಹುನ್ನಾರ ಮಾಡಿದ್ದರು. ಅದರಂತೆ ಸಣ್ಣಪುಟ್ಟ ಪಕ್ಷಗಳನ್ನು ಮುಗಿಸಲು ಬಿಜೆಪಿ ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಶಿವಮೊಗ್ಗ, ಮೇ.05: ಸಂತ್ರಸ್ಥೆ ಕಿಡ್ನ್ಯಾಪ್ ಕೇಸ್ನಲ್ಲಿ ಶಾಸಕ ಹೆಚ್.ಡಿ.ರೇವಣ್ಣ ಬಂಧನದ ಹಿಂದೆ ಬಿಜೆಪಿಯ ಷಡ್ಯಂತ್ರವಿದೆ ಎಂದು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿ ಗಣಿಗ(Ravi Ganiga) ಶಾಕಿಂಗ್ ಹೇಳಿದ್ದಾರೆ. ಶಿವಮೊಗ್ಗ(Shivamogga)ದಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಜನಾರ್ದನರೆಡ್ಡಿಯನ್ನು ನಿಯಂತ್ರಿಸಿ ಹುನ್ನಾರ ಮಾಡಿದ್ದರು. ಅದರಂತೆ ಸಣ್ಣಪುಟ್ಟ ಪಕ್ಷಗಳನ್ನು ಮುಗಿಸಲು ಬಿಜೆಪಿ ಹೊರಟಿದೆ. ಇನ್ನು ಬಿಜೆಪಿ ಮುಖಂಡ ದೇವರಾಜೇಗೌಡ ಈ ಕುರಿತು ಮಾತನಾಡಿದಾಗ ಸುಮ್ಮನಿದ್ದರು. ಹಳೇ ಮೈಸೂರು ಭಾಗದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ನೆಲೆ ಇಲ್ಲ, ಹೀಗಾಗಿ ಜೆಡಿಎಸ್ ಮೂಲಕ ಕಾಂಗ್ರೆಸ್‌ನ್ನು ಟಾರ್ಗೆಟ್ ಮಾಡಿಕೊಂಡಿದೆ. ಈ ಹಿಂದೆ ಜನಾರ್ದನರೆಡ್ಡಿಯಿಂದ ಹೆಚ್‌ಡಿಕೆರನ್ನು ಬೈಯಿಸುತ್ತಿದ್ದರು. ಈಗ ದೇವರಾಜೇಗೌಡ ಮೂಲಕ ಕಾಂಗ್ರೆಸ್‌ಗೆ ಬೈಯಿಸುತ್ತಿದ್ದಾರೆ. ಇದೇ ವೇಳೆ ‘ರಾಘವೇಂದ್ರ ಹೇಳಿಕೊಳ್ಳುವ ಕೆಲಸ ಜಿಲ್ಲೆಯಲ್ಲಿ ಮಾಡಿಲ್ಲ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಗೆಲ್ತಾರೆ. ಬಿಜೆಪಿ ಹಿಂದೂ ಮತ್ತು ರಾಮನನ್ನ ಬಂಡವಾಳ ಮಾಡಿಕೊಂಡಿದ್ದಾರೆ. ರಾಮ ವಾಪಾಸ್ ಬಾಣವನ್ನ ಅವರಿಗೆ ಬಿಡಲಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ